ರಾಹುಲ್ ಜೊತೆ ಹೆಜ್ಜೆ ಹಾಕಲು 10 ಕೆಜಿ ತೂಕ ಇಳಿಸಲು ಕಂಡೀಶನ್ ಹಾಕಲಾಗಿತ್ತು: ಸಿದ್ದಿಕಿ

By Kannadaprabha NewsFirst Published Feb 24, 2024, 11:29 AM IST
Highlights

ರಾಗಾ ಜೊತೆ ಹೆಜ್ಜೆ ಹಾಕಲು 10 ಕೆಜಿ ಬೊಜ್ಜು ಕಡಿಮೆ ಮಾಡಲು ಸೂಚನೆ ಬಂದಿತ್ತು.  ಕಾಂಗ್ರೆಸ್‌ ಪಕ್ಷದಲ್ಲಿ ಹಿಂದುಳಿದ ವರ್ಗದ ನಾಯಕರನ್ನು ಅಸ್ಪೃಶ್ಯರಂತೆ ಕೋಮುವಾದಿಗಳ ರೀತಿ ನಡೆಸಿಕೊಳ್ಳಲಾಗುತ್ತಿದೆ ಎಂದ ಸಿದ್ದಿಕಿ. 

ಮುಂಬೈ (ಫೆ.24): ಭಾರತ್‌ ಜೋಡೋ ಯಾತ್ರೆಯಲ್ಲಿ ರಾಹುಲ್‌ ಗಾಂಧಿಯ ಜೊತೆ ಹೆಜ್ಜೆ ಹಾಕಲು ಅವಕಾಶ ನೀಡುವ ಸಲುವಾಗಿ 10 ಕೆಜಿ ತಮ್ಮ ದೇಹತೂಕವನ್ನು ಕಡಿಮೆ ಮಾಡಿಕೊಳ್ಳಲು ಅವರ ಹಿಂಬಾಲಕರು ಸೂಚಿಸಿದ್ದರು ಎಂಬುದಾಗಿ ಉಚ್ಚಾಟಿತ ಮಹಾರಾಷ್ಟ್ರ ಯುವ ಕಾಂಗ್ರೆಸ್‌ ಅಧ್ಯಕ್ಷ ಜೀಶನ್‌ ಸಿದ್ದಿಕಿ ಆರೋಪಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕಾಂಗ್ರೆಸ್‌ ಪಕ್ಷದಲ್ಲಿ ಹಿಂದುಳಿದ ವರ್ಗದ ನಾಯಕರನ್ನು ಅಸ್ಪೃಶ್ಯರಂತೆ ಕೋಮುವಾದಿಗಳ ರೀತಿ ನಡೆಸಿಕೊಳ್ಳಲಾಗುತ್ತಿದೆ. ನನಗೆ ಭಾರತ್‌ ಜೋಡೋ ಯಾತ್ರೆಯಲ್ಲಿ ರಾಹುಲ್‌ ಗಾಂಧಿ ಜೊತೆ ನಾಂದೇಡ್‌ನಲ್ಲಿ ಹೆಜ್ಜೆ ಹಾಕುವುದನ್ನು ತಪ್ಪಿಸುವ ಸಲುವಾಗಿ ನನಗೆ 10 ಕೆಜಿ ದೇಹದ ತೂಕ ಕಡಿಮೆ ಮಾಡಿಕೊಳ್ಳುವಂತೆ ಸೂಚಿಸಿದ್ದರು. ರಾಹುಲ್‌ ಗಾಂಧಿಯ ವಂದಿಮಾಗಧರು ಕಾಂಗ್ರೆಸ್‌ ಪಕ್ಷವನ್ನು ಮುಳುಗಿಸಲು ಸುಪಾರಿ ತೆಗೆದುಕೊಂಡಂತೆ ಕಾಣುತ್ತಿದೆ’ ಎಂದು ಕೆಂಡಕಾರಿದರು. ಜೀಶನ್‌ ತಂದೆ ಬಾಬಾ ಕಾಂಗ್ರೆಸ್‌ ತೊರೆದ ಬೆನ್ನಲ್ಲೇ ಯುವ ಕಾಂಗ್ರೆಸ್‌ ಅಧ್ಯಕ್ಷ ಪದವಿಯಿಂದ ಅವರನ್ನು ವಜಾ ಮಾಡಲಾಗಿತ್ತು.

ಪತ್ನಿಯ ಫೋನ್‌ ಸಂಭಾಷಣೆ ಕದ್ದಾಲಿಸಿ 15 ಕೋಟಿ ರೂ ಲಾಭ ಗಳಿಸಿದ ಪತಿ!

ಕಮಲ್ ರಾಹುಲ್‌ ಯಾತ್ರೆಗೆ ಹೋಗಲು ನಿರ್ಧಾರ
ಭೋಪಾಲ್‌: ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದ ಹಿರಿಯ ಕಾಂಗ್ರೆಸ್‌ ನಾಯಕ ಹಾಗೂ ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್‌ ಅವರ ಬಂಡಾಯ ಶಮನವಾಗಿದೆ. ನಾಥ್‌ ಅವರು ಮಾ.2 ರಿಂದ ಮಾ.6ರವರೆಗೆ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ್‌ ಜೋಡೋ ನ್ಯಾಯ ಯಾತ್ರೆ’ಯಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ಕಮಲ್‌, ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿಲ್ಲ ಎಂಬುದು ದೃಢವಾಗಿದೆ.

ಲೋಕಸಭಾ ಚುನಾವಣೆಗೆ 4 ರಾಜ್ಯಗಳಲ್ಲಿ ಹೊಂದಾಣಿಕೆ ಸೀಟು ಅಂತಿಮಗೊಳಿಸಿದ ಕಾಂಗ್ರೆಸ್

ಈ ನಡುವೆ ಟ್ವೀಟ್‌ ಮಾಡಿರುವ ಕಮಲ್‌ ‘ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಸ್ವಾಗತಿಸಲು ಮಧ್ಯಪ್ರದೇಶದ ಜನರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಉತ್ಸುಕರಾಗಿದ್ದಾರೆ. ನಮ್ಮ ನಾಯಕ ರಾಹುಲ್ ಗಾಂಧಿ ಅವರು ದೇಶಾದ್ಯಂತ ಅನ್ಯಾಯ, ದಬ್ಬಾಳಿಕೆ ಮತ್ತು ಶೋಷಣೆಯ ವಿರುದ್ಧ ನಿರ್ಣಾಯಕ ಹೋರಾಟ ಆರಂಭಿಸಿದ್ದಾರೆ’ ಎಂದಿದ್ದಾರೆ. ನಾಥ್‌ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುತ್ತಿದ್ದಾರೆ, ಅವರು ಬಂಡಾಯ ಎದ್ದಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಹಬ್ಬಿತ್ತು.

click me!