
ನವದೆಹಲಿ (ನ.4): ಬಿಹಾರ ಮೂಲದ ವ್ಯಕ್ತಿಯೊಬ್ಬರು ಛಾತ್ ಹಬ್ಬ ಆಚರಣೆ ಮಾಡಲು ನವದೆಹಲಿಯಿಂದ ದರ್ಭಾಂಗಕ್ಕೆ ಟಿಕೆಟ್ ಬುಕ್ ಮಾಡಿದ್ದರು. ಛಾತ್ ಪೂಜೆಗೂ ಒಂದು ವಾರದ ಮುಂಚೆ ಅವರು ಟಿಕೆಟ್ ಅನ್ನು ಬುಕ್ ಮಾಡಿದಾಗ ವೇಟಿಂಗ್ ಲಿಸ್ಟ್ 124ರ ಟಿಕೆಟ್ ಸಿಕ್ಕಿತ್ತು. ಬಳಿಕ ಇದು ಆರ್‌ಸಿಎ 31 ಸ್ಟೇಟಸ್ ತೋರಿಸಿತ್ತು. ಆದರೆ, ಚಾರ್ಟ್ ಸಿದ್ದವಾದ ಬಳಿಕ ಇದು ವೇಟಿಂಗ್ ಲಿಸ್ಟ್ 18 ಎಂದು ತೋರಿಸಿದೆ. ಈ ಬಗ್ಗೆ ಇದ್ದ ಗೊಂದಲದ ಬಗ್ಗೆ ಪತ್ರಕರ್ತ ಹಿಮಾಂಶು ಝಾ ಅವರು ಭಾರತೀಯ ರೈಲ್ವೇಸ್‌ನ ರಿಸರ್ವೇಷನ್ ಸಿಸ್ಟಮ್‌ಅನ್ನು ಪ್ರಶ್ನಿಸಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ರೈಲ್ವೇಸ್‌ನ ಆರ್‌ಎಸಿ ಸಿಸ್ಟಮ್‌ನಲ್ಲಿರುವ ವ್ಯವಸ್ಥೆಗೆ ಸಂಬಂಧಿಸಿದಂತೆ ತಮ್ಮ ಹತಾಶೆಯನ್ನು ಹಂಚಿಕೊಂಡಿದ್ದಾರೆ.
“ರೈಲ್ವೇಸ್‌ನಲ್ಲಿ ಏನು ನಡೆಯುತ್ತಿದೆ? ಅಕ್ಟೋಬರ್ 30 ರಂದು, ಟಿಕೆಟ್ RAC 31 ಆಗಿತ್ತು. ನಿನ್ನೆ ಅದು RAC 12 ನಲ್ಲಿ ಸಿಲುಕಿತ್ತು. ಇಂದು ಚಾರ್ಟ್ ಸಿದ್ಧಪಡಿಸಿದಾಗ, ವೇಟಿಂಗ್ ಲಿಸ್ಟ್ 18 ಆಯಿತು. ಇದು ಯಾವ ರೀತಿಯ ರಿಸರ್ವೇಷನ್ ಸಿಸ್ಟಮ್?" ಎಂದು ಝಾ ಬರೆದುಕೊಂಡಿದ್ದಾರೆ.
ಅವರು ತಮ್ಮ ಕಳವಳವನ್ನು ನೇರವಾಗಿ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಟ್ಯಾಗ್ ಮಾಡಿ ತಿಳಿಸಿದ್ದಾರೆ "ಛಾತ್ ಸಂದರ್ಭದಲ್ಲಿ ಬಿಹಾರಿ ಮನೆಗೆ ಬರಲು ಸಾಧ್ಯವಾಗದಿದ್ದರೆ ಏನಾಗುತ್ತದೆ ಎಂದು ನೀವು ಅರ್ಥಮಾಡಿಕೊಳ್ಳುತ್ತೀರಾ?" ಎಂದಿದ್ದಾರೆ.
ಅವರು ಶೇರ್ ಮಾಡಿಕೊಂಡಿರುವ ಸ್ಕ್ರೀನ್‌ಶಾಟ್ ಪ್ರಕಾರ, ನವದೆಹಲಿಯಿಂದ ದರ್ಭಾಂಗದವರೆಗೆ ಸ್ವಾತಂತ್ರ್ಯ ಸೇನಾನಿ ಎಕ್ಸ್‌ಪ್ರೆಸ್‌ನಲ್ಲಿ ಅವರು ಟಿಕೆಟ್ ಬುಕ್ ಮಾಡಿದ್ದರು. ಈ ವೇಳೆ ವೇಟಿಂಗ್ ಲಿಸ್ಟ್ 124 ಎಂದು ತೋರಿಸುತ್ತಿತ್ತು. ಸೆಪ್ಟೆಂಬರ್ 31ರ ವೇಳೆಗೆ ಇದು 21ಕ್ಕೆ ಕುಸಿದಿತ್ತು. ನವೆಂಬರ್ 2ರ ವೇಳೆಗೆ ವೇಟಿಂಗ್ ಲಿಸ್ಟ್ ಆರ್‌ಎಸಿ ಟಿಕೆಟ್ ಆಗಿ 12ಕ್ಕೆ ಇಳಿದಿತ್ತು. ಆದರೆ, ಪ್ರಯಾಣ ದಿನದ ಚಾರ್ಟ್ ಸಿದ್ಧವಾದಾಗ ವೇಟಿಂಗ್ ಲಿಸ್ಟ್ 18ಕ್ಕೆ ಇದು ಬಂದಿತ್ತು.
ರೈಲ್ವೇ ಬಳಕೆದಾರರಿಗೆ ಬೆಂಬಲ ನೀಡುವ ಅಧಿಕೃತ ಟ್ವಿಟ್ಟರ್ ಖಾತೆಯಾದ ರೈಲ್ವೇಸೇವಾ, ಪೋಸ್ಟ್‌ಗೆ ಪ್ರತಿಕ್ರಿಯಿಸಿ, "ಸಂಬಂಧಿತ ಅಧಿಕಾರಿಗಳಿಗೆ ತಿಳಿಸಲಾಗುತ್ತಿದೆ" ಎಂದು ಹೇಳಿದೆ. ನಂತರದ ಅಪ್‌ಡೇಟ್‌ನಲ್ಲಿ, ಅವರು ಮಾಹಿತಿ ನೀಡಿದ್ದು, "ನಿಮ್ಮ ದೂರನ್ನು ರೈಲ್‌ಮದದ್‌ನಲ್ಲಿ ದಾಖಲಿಸಲಾಗಿದೆ ಮತ್ತು ದೂರು ಸಂಖ್ಯೆ. ನಿಮ್ಮ ಮೊಬೈಲ್ ಸಂಖ್ಯೆಗೆ SMS ಮೂಲಕ ಕಳುಹಿಸಲಾಗಿದೆ." ಎಂದಿದ್ದಾರೆ.
ರೈಲುಗಳ ಮೇಲ್ಭಾಗದಲ್ಲಿ ವೃತ್ತಾಕಾರದ ಮುಚ್ಚಳ ಯಾಕಿರುತ್ತೆ?
ಅಪ್‌ಡೇಟ್‌ನಲ್ಲಿ ರೈಲ್ವೇ ಅಧಿಕಾರಿಯೊಬ್ಬರು ಅವರನ್ನು ಸಂಪರ್ಕಿಸಿದರು ಮತ್ತು ಮುಂಬರುವ ಪ್ರಯಾಣಕ್ಕೆ ಸಿದ್ಧರಾಗಿರಲು ಪ್ರಯಾಣಿಕರಿಗೆ ಸಲಹೆ ನೀಡುವಂತೆ ಝಾ ಬರೆದಿದ್ದಾರೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಸ್ಟೇಶನ್‌ನಲ್ಲಿ TTE ಜೊತೆ ಮಾತನಾಡಿ ಟೆಕೆಟ್ ಇಲ್ಲದೇ ಪ್ರಯಾಣಿಸಬಹುದಾ? ರೈಲು ನಿಯಮದಲ್ಲೇನಿದೆ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ