
ನವದೆಹಲಿ: ದೇಶದ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರು ಅವರಿಗೆ ಸೆಂಗೋಲ್ ಹಸ್ತಾಂತರಿಸಿದ್ದ ಹಾಗೂ ಇತ್ತೀಚೆಗೆ ಲೋಕಸಭೆ ಹೊಸ ಕಟ್ಟಡದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದ ಐತಿಹಾಸಿಕ ಸೆಂಗೋಲ್ ಹಿಂದಿನ ಶಿಲ್ಪಿ ತಿರು ವುಮ್ಮಿಡಿ ಎಥಿರಾಜ್ ಅವರು ತಮ್ಮ 99ನೇ ವಯಸ್ಸಿನಲ್ಲಿ ನಿಧನರಾದರು.
ವುಮ್ಮಿಡಿ ತಮಿಳುನಾಡಿನ ಪ್ರತಿಷ್ಠಿತ ಕುಟುಂಬದಲ್ಲಿ ಜನಿಸಿದವರು. 125 ವರ್ಷಗಳ ಇತಿಹಾಸವಿರುವ ವುಮ್ಮಿಡಿ ಬಂಗಾರು ಜ್ಯುವೆಲ್ಲರ್ಸ್ ಸಂಸ್ಥೆಯ ಮನೆತನದವರು.
1947ರಲ್ಲಿ ಸ್ವಾತಂತ್ರ್ಯ ಸಿಕ್ಕ ಬಳಿಕ ತಮಿಳುನಾಡಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವುಮ್ಮಿಡಿ ಬಂಗಾರು ಚೆಟ್ಟಿ ಆಭರಣ ಸಂಸ್ಥೆಯವರು ಸೆಂಗೋಲ್ (ರಾಜದಂಡ) ನಿರ್ಮಿಸಿ ಅಂದಿನ ಪ್ರಧಾನಿ ನೆಹರು ಅವರಿಗೆ ಹಸ್ತಾಂತರಿಸಿದ್ದರು. ಇದರ ನಿರ್ಮಾಣದಲ್ಲಿ ಎಥಿರಾಜ್ ಅವರು ಪ್ರಮುಖ ಪಾತ್ರ ವಹಿಸಿದ್ದರು.
ದಶಕಗಳ ಕಾಲ ಅದು ಅಲಹಾಬಾದ್ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿತ್ತು. 2023ರಲ್ಲಿ ಸಂಸತ್‌ನ ಹೊಸ ಕಟ್ಟಡ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಲೋಕಸಭೆಯ ಸ್ಪೀಕರ್ ಆಸನದ ಸಮೀಪ ಸೆಂಗೋಲ್ ಅನ್ನು ಪ್ರತಿಷ್ಠಾಪಿಸಿದರು. ಈ ಸಂದರ್ಭದಲ್ಲಿ ಸೆಂಗೋಲ್ ನಿರ್ಮಾಣದಲ್ಲಿ ಪಾಲ್ಗೊಂಡಿದ್ದ ವುಮ್ಮಿಡಿ ಕುಟುಂಬದ ಸದಸ್ಯರನ್ನೂ ಪ್ರಧಾನಿ ಭೇಟಿಯಾಗಿದ್ದರು.
ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ, ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
++
ಎಕ್ಸ್‌ನಲ್ಲಿ ಟ್ಚೀಟಿಸಿರುವ ಮೋದಿ, ‘ತಿರು ವುಮ್ಮಿಡಿ ಎಥಿರಾಜ್ ಅವರ ನಿಧನದಿಂದ ತೀವ್ರ ದುಃಖವಾಗಿದೆ, ಅವರು ತಮಿಳುನಾಡಿನ ಪ್ರತಿಷ್ಠಿತ ಕುಟುಂಬವೊಂದರಲ್ಲಿ ಜನಿಸಿದ್ದರು. ಮಾಜಿ ಪ್ರಧಾನಿ ನೆಹರು ಅವರಿಗೆ ಅರ್ಪಿಸಲಾದ ಸೆಂಗೋಲ್ ನಿರ್ಮಿಸುವಲ್ಲಿ ಅವರ ಶ್ರಮ ಅವಿಸ್ಮರಣೀಯ’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ