ಬಾಹ್ಯಾಕಾಶದಲ್ಲಿ ಸಂಘರ್ಷವಲ್ಲ, ಸಹಕಾರ ಅಗತ್ಯ: ವಿಶ್ವಸಂಸ್ಥೆ ಸಭೆಯಲ್ಲಿ ಸುಧಾಮೂರ್ತಿ

Published : Oct 22, 2026, 07:11 AM IST
narayana sudha murthy

ಸಾರಾಂಶ

ಬಾಹ್ಯಾಕಾಶವು ಸಂಘರ್ಷದ ತಾಣವಾಗದೆ ಸಹಕಾರದ ಕ್ಷೇತ್ರವಾಗಿ ಉಳಿಯಬೇಕು ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸಂಸದೆ ಸುಧಾ ಮೂರ್ತಿ ಪ್ರತಿಪಾದಿಸಿದ್ದಾರೆ. ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ಸ್ಪರ್ಧೆಯನ್ನು ತಡೆಯಲು ಅಂತಾರಾಷ್ಟ್ರೀಯ ಒಪ್ಪಂದದ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

ವಿಶ್ವಸಂಸ್ಥೆ: ಅಮೆರಿಕ, ಚೀನಾದಂತಹ ರಾಷ್ಟ್ರಗಳು ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರಗಳನ್ನು ನಿಯೋಜಿಸಿ, ಭೂಮಿಯಾಚೆಯೂ ಕದನಕ್ಕೆ ಸಿದ್ಧತೆ ನಡೆಸುತ್ತಿರುವ ಹೊತ್ತಿನಲ್ಲಿ, ‘ಬಾಹ್ಯಾಕಾಶವು ಸಹಕಾರದ ಕ್ಷೇತ್ರವಾಗಿ ಉಳಿಯಬೇಕೇ ಹೊರತು ಸಂಘರ್ಷದ ತಾಣವಾಗಬಾರದು. ಇದಕ್ಕಾಗಿ ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ಸ್ಪರ್ಧೆಯನ್ನು ತಡೆಯುವ, ಕಾನೂನುಬದ್ಧವಾಗಿ ಬದ್ಧಗೊಳಿಸುವ ಅಂತಾರಾಷ್ಟ್ರೀಯ ಒಪ್ಪಂದ ಅಗತ್ಯ’ ಎಂದು ಭಾರತ ಪ್ರತಿಪಾದಿಸಿದೆ.

ಒಂದೇ ಭೂಮಿ, ಒಂದೇ ಕುಟುಂಬ, ಒಂದೇ ಭವಿಷ್ಯ

ಮಂಗಳವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮೊದಲ ಸಮಿತಿ ಸಭೆಯಲ್ಲಿ ಮಾತನಾಡಿದ ಸಂಸದೆ ಸುಧಾ ಮೂರ್ತಿ, ‘ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರ. ನಮ್ಮ ಬಾಹ್ಯಾಕಾಶ ಕಾರ್ಯಕ್ರಮವು ಅಭಿವೃದ್ಧಿ ಮತ್ತು ಭದ್ರತೆಯ ಆಯಾಮಗಳನ್ನು ಒಳಗೊಂಡಿದೆ. ನಾವೆಲ್ಲರೂ ಒಂದೇ ಭೂಮಿ, ಒಂದೇ ಕುಟುಂಬ ಮತ್ತು ಒಂದೇ ಭವಿಷ್ಯವನ್ನು ಹೊಂದಿರುವಾಗ, ಅಂತರಿಕ್ಷವು ನಮ್ಮೆಲ್ಲರಿಗೂ ಸೇರಿದ್ದು ಎಂದು ಭಾರತ ನಂಬುತ್ತದೆ. ಆದ್ದರಿಂದ ಅದು ಸಂಘರ್ಷದ ತಾಣವಾಗದೆ, ಸಹಕಾರದ ಕ್ಷೇತ್ರವಾಗಿ ಉಳಿಯಬೇಕು’ ಎಂದು ಹೇಳಿದರು.

ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ಸ್ಪರ್ಧೆ

‘ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ಸ್ಪರ್ಧೆಯನ್ನು ತಡೆಯುವ ವಿಧಾನಗಳ ಕುರಿತು, ಹಾಗೂ ಯಾವ ವಿಧಾನಕ್ಕೆ ಆದ್ಯತೆ ನೀಡಬೇಕು ಎಂಬ ವಿಷಯದಲ್ಲಿ ಭಿನ್ನಾಭಿಪ್ರಾಯಗಳು ಮುಂದುವರಿದಿವೆ. ಆದರೆ ಸಾರ್ವತ್ರಿಕವಾಗಿ ಸ್ವೀಕಾರಾರ್ಹವಾದ, ಪರಿಶೀಲಿಸಬಹುದಾದ ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ಸ್ಪರ್ಧೆಯನ್ನು ತಡೆಗಟ್ಟುವ (ಪಿಎಆರ್‌ಒಎಸ್‌) ಸಾಧನವೊಂದರ ಅಗತ್ಯವಿದೆ. ಭಾರತವು ಸಾರ್ವತ್ರಿಕ, ತಾರತಮ್ಯರಹಿತ ಹಾಗೂ ಪಾರದರ್ಶಕ ಕ್ರಮಗಳಿಗೆ ಮುಕ್ತವಾಗಿದೆ’ ಎಂದು ಮೂರ್ತಿ ಭಾರತದ ಅಭಿಪ್ರಾಯವನ್ನು ವಿಶ್ವದ ಮುಂದಿಟ್ಟರು.

ಭಾರತದ ಸಾಧನೆ

2023ರಲ್ಲಿ ಚಂದ್ರನ ಅಂಗಳದಲ್ಲಿ ಇಳಿಯುದ ಸಾಧನೆ ಮಾಡಿರುವ ಭಾರತವು ಮಾನವಸಹಿತ ಯೋಜನೆಯಾದ ಗಗನಯಾನದ ಸಿದ್ಧತೆ ನಡೆಸುತ್ತಿದೆ. ಜತೆಗೆ ತನ್ನದೇ ಆದ ‘ಭಾರತೀಯ ಅಂತರಿಕ್ಷ ಕೇಂದ್ರ’ ನಿರ್ಮಾಣದ ಬಗ್ಗೆಯೂ ಚಿಂತನೆ ನಡೆಸಿದ ಎಂದು ಸುಧಾ ಮೂರ್ತಿ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಬಾಹ್ಯಾಕಾಶದಲ್ಲಿ ಸಂಘರ್ಷವಲ್ಲ, ಸಹಕಾರ ಅಗತ್ಯ - ವಿಶ್ವಸಂಸ್ಥೆ ಸಭೆಯಲ್ಲಿ ಸುಧಾಮೂರ್ತಿ
ದಸರಾ ನೋಡಲು ಹೋಗಿ ಪಾನಿ ಪುರಿ ತಿಂದು ಅನಾಹುತ, ಒಂದೇ ಕುಟುಂಬದ 7 ಮಂದಿ ಸಾವು ಬದುಕಿನ ಹೋರಾಟ