ನವದೆಹಲಿ(ಆ.14): ಗುರುವಾರ ರಾಜ್ಯಸಭೆಯ ಮುಂಗಾರು ಅಧಿವೇಶನದಲ್ಲಿ ಭದ್ರತಾ ಸಿಬ್ಬಂದಿ ವಿರುದ್ಧ ಸಂಘರ್ಷಕ್ಕಿಳಿದು ದುರ್ವರ್ತನೆ ತೋರಿದ ಸಂಸದರ ವಿರುದ್ಧ ಕ್ರಮಕ್ಕೆ ರಾಜ್ಯಸಭಾ ಮುಖ್ಯಸ್ಥರು ಮತ್ತು ಲೋಕಸಭಾ ಸಭಾಪತಿ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಮತ್ತು ಲೋಕಸಭಾ ಸಭಾಪತಿ ಓಂ ಬಿರ್ಲಾ ಅಶಿಸ್ತು ತೋರಿದ ಸಂಸದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಅವು ತಿಳಿಸಿವೆ.
undefined
ರಾಜ್ಯಸಭೆಯಲ್ಲಿ ಏನಾಗಿತ್ತು?‘
ಸಂಸತ್ತಿನ ಮುಂಗಾರು ಅಧಿವೇಶನ ಸಂದರ್ಭದಲ್ಲಿ ವಿಮಾ ಖಾಸಗೀಕರಣ ಮಸೂದೆ ಅಂಗೀಕಾರದ ಬಳಿಕ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ಬಾವಿಗಿಳಿದು ಗದ್ದಲ ಉಂಟುಮಾಡಿದ್ದವು. ಈ ವೇಳೆ ವಿಪಕ್ಷ ಸದಸ್ಯರು ಮತ್ತು ಮಾರ್ಷಲ್‌ಗಳ ನಡುವೆ ಘರ್ಷಣೆ ಉಂಟಾಯಿತು.
ವಿಪಕ್ಷಗಳ ಆಟಾಟೋಪ; ಕಣ್ಣೀರು ಹಾಕಿದ ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು
ಆದರೆ ಹೊರಗಿನವರನ್ನು ಕರೆಸಿ ಸ್ತ್ರೀ ಸದಸ್ಯರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ವಿಪಕ್ಷಗಳು ಆರೋಪಿಸಿದವು. ಕೇಂದ್ರ ಈ ಆರೋಪ ನಿರಾಕರಿಸಿ ವಿಪಕ್ಷಗಳ ವಿರುದ್ಧವೇ ಕಿಡಿಕಾರಿತು. ಆದರೆ ಸಿಸಿಟೀವಿ ದೃಶ್ಯಾವಳಿಯಲ್ಲಿ ವಿಪಕ್ಷಗಳ ಮಹಿಳಾ ಸಂಸದರೇ ಮಾರ್ಷಲ್‌ಗಳ ಮೇಲೆ ಹಲ್ಲೆ ನಡೆಸಿರುವುದು ಮತ್ತು ಕೆಲ ಪುರುಷ ಸದಸ್ಯರು ಮೇಜಿನ ಮೇಲೆ ಹತ್ತಿ ಅಗೌರವ ತಂದಿರುವುದು ಸೆರೆಯಾಗಿದೆ.