
ನವದೆಹಲಿ(ಆ.14): ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿರುವ ಕಾಂಗ್ರೆಸ್ ಈಗ ಮಿತವ್ಯಯ ಜಪ ಪಠಿಸುತ್ತಿದೆ. ವಾರ್ಷಿಕ 50 ಸಾವಿರ ರು.ಗಳನ್ನು ಪಕ್ಷಕ್ಕೆ ದೇಣಿಗೆ ನೀಡುವಂತೆ ಸೂಚನೆ ನೀಡಿದೆ. ಹಣಕಾಸಿನ ಮುಗ್ಗಟ್ಟು ಎದುರಾಗಿರುವ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯದರ್ಶಿಗಳಿಂದ ಹಿಡಿದು ಪ್ರಧಾನ ಕಾರ್ಯದರ್ಶಿಗಳವರೆಗೆ ಎಲ್ಲರಿಗೂ ಮಿತವ್ಯಯ ಸೂತ್ರವನ್ನು ಪಕ್ಷ ಪ್ರಕಟಿಸಿದೆ. ಸಮೀಪದ ಸ್ಥಳಗಳಿಗೆ ರೈಲುಗಳಲ್ಲಿ ಪ್ರಯಾಣಿಸುವಂತೆ ಹಾಗೂ ಅದು ಸಾಧ್ಯವಾಗದೇ ಇದ್ದರೆ ಕಡಿಮೆ ದರದ ವಿಮಾನ ಟಿಕೆಟ್ ಗಳನ್ನು ಬಳಸುವಂತೆ ತಿಳಿಸಲಾಗಿದೆ.
ಕಾರ್ಯದರ್ಶಿಗಳಿಗೆ 1,400 ಕಿ.ಮೀ.ವರೆಗಿನ ರೈಲ್ವೆ ಟಿಕೆಟ್ ನೀಡಲಾಗುವುದು ಹಾಗೂ ಪ್ರಯಾಣದ ದೂರ 1,400 ಕಿ.ಮೀ.ಗಿಂತ ಹೆಚ್ಚಿದ್ದರೆ, ಪ್ರಯಾಣಕ್ಕೆ ಕಡಿಮೆ ದರದ ವಿಮಾನ ಟಿಕೆಟ್ ದರವನ್ನು ಮಾತ್ರ ನೀಡಲಾಗುವುದು. ಒಂದು ವೇಳೆ ರೈಲಿನ ದರ ವಿಮಾನದ ದರಕ್ಕಿಂತ ಜಾಸ್ತಿ ಆಗಿ ದ್ದರೆ ತಿಂಗಳಿಗೆ 2 ಬಾರಿ ವಿಮಾನ ಟಿಕೆಟ್ ದರ ನೀಡಲಾಗುವುದು. ವಿಮಾನದ ಪ್ರಯಾಣಕ್ಕಾಗಿ ಪಕ್ಷದ ಹಣವನ್ನು ಬಳಸುವ ಬದಲು, ಸಂಸದರು ತಮಗೆ ನೀಡಲಾಗುವ ವಿಮಾನಯಾನ ಸೌಲಭ್ಯ ಬಳಕೆ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
20ಕ್ಕೆ ವಿಪಕ್ಷ ನಾಯಕರ ಜತೆ ಸೋನಿಯಾ ಸಭೆ
ಇದೇ ವೇಳೆ ಕಾರ್ಯದರ್ಶಿಗಳಿಗೆ ನೀಡುವ 12,000 ರು. ಮತ್ತು ಪ್ರಧಾನ ಕಾರ್ಯ ದರ್ಶಿಗಳಿಗೆ ನೀಡುವ 15,000 ರು. ಭತ್ಯೆಯನ್ನು ಕಡಿತಗೊಳಿಸಲು ತೀರ್ಮಾನಿಸಲಾಗಿದೆ. ಅಲ್ಲ ದೇ ಪ್ರತಿ ಕಾಂಗ್ರೆಸ್ ಸಂಸದ ಪ್ರತಿ ವರ್ಷ 50 ಸಾವಿರ ರು. ದೇಣಿಗೆ ನೀಡಬೇಕು ಮತ್ತು ತಮ್ಮ ಇಬ್ಬರು ಬೆಂಬಲಿಗರಿಂದ ತಲಾ 4 ಸಾವಿರ ರು. ದೇಣಿಗೆ ಸಂಗ್ರಹಿಸಿ ಕೊಡುವಂತೆ ಸೂಚಿಸಲಾಗಿದೆ ಎಂದು ಕಾಂಗ್ರೆಸ್ ಖಜಾಂಜಿ ಪವನ್ ಬನ್ಸಲ್ ತಿಳಿಸಿದ್ದಾರೆ.
ಯಾವೆಲ್ಲ ವೆಚ್ಚ ಕಡಿತ ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ