ಶಿವಾಜಿ ಇಲ್ಲದಿದ್ರೆ ಭಾರತವನ್ನು ಊಹಿಸಲೂ ಅಸಾಧ್ಯ: ಮೋದಿ

By Kannadaprabha NewsFirst Published Aug 14, 2021, 3:05 PM IST
Highlights
  • ಶಿವಾಜಿ ಇಲ್ಲದಿದ್ರೆ ಭಾರತವನ್ನು ಊಹಿಸಲೂ ಅಸಾಧ್ಯ: ಮೋದಿ
  • ಅವರ ಹಿಂದವಿ ಸ್ವರಾಜ್ಯ ಉತ್ತಮ ಆಡಳಿತಕ್ಕೆ ಉದಾಹರಣೆ

ಪುಣೆ(A.14): ಒಂದು ವೇಳೆ ಛತ್ರಪತಿ ಶಿವಾಜಿ ಮಹಾರಾಜ್‌ ಇರದೇ ಇದ್ದಿದ್ದರೆ, ಈಗಿನ ಭಾರತ ಹೇಗೆ ಇರುತ್ತಿತ್ತು ಎಂದು ಊಹಿಸಿಕೊಳ್ಳುವುದು ಕೂಡ ಸಾಧ್ಯವಿಲ್ಲ. ಶಿವಾಜಿ ಮಹಾರಾಜರ ‘ಹಿಂದವಿ ಸ್ವರಾಜ್ಯ’ ಉತ್ತಮ ಆಡಳಿತಕ್ಕೆ ಒಂದು ಒಳ್ಳೆಯ ಉದಾಹರಣೆ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಖ್ಯಾತ ಬರಹಗಾರ ಹಾಗೂ ಇತಿಹಾಸ ತಜ್ಞ ಬಾಬಾಸಾಹೇಬ್‌ ಪುರಂದರೆ ಅವರ ಜನ್ಮ ಶತಮಾನೋತ್ಸವ ಸಮಾರಂಭದ ನಿಮಿತ್ತ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದ ವೇಳೆ ಪ್ರಸಾರವಾದ ತಮ್ಮ ಮುದ್ರಿತ ಭಾಷಣದ ವೇಳೆ ಮೋದಿ, ಛತ್ರಪತಿ ಶಿವಾಜಿ ಕಾಲದ ಆಡಳಿತವನ್ನು ನೆನಪಿಸಿಕೊಂಡರು.

ಹೆಚ್ಚಾಯ್ತು ಪಕ್ಷದ ಖರ್ಚು: ವಿಮಾನ ಇಲ್ಲ, ಇನ್ನು ರೈಲಲ್ಲೇ ಹೋಗ್ರಪ್ಪ ಎಂದ ಕಾಂಗ್ರೆಸ್

ತಮ್ಮ ಭಾಷಣದಲ್ಲಿ ಮೋದಿ, ‘ಭಾರತದ ಪ್ರಸ್ತುತ ಭೂಗೋಳವು ಛತ್ರಪತಿ ಶಿವಾಜಿ ಮಹಾರಾಜರ ಸಾಹಸಗಾಥೆಗಳಿಂದ ಸ್ಛೂರ್ತಿ ಪಡೆದಿದೆ. ಛತ್ರಪತಿ ಶಿವಾಜಿ ಮಹಾರಾಜರು ಭಾರತದ ಇತಿಹಾಸದಲ್ಲಿ ಶಿಖರ ಪುರುಷ (ಸವೋಚ್ಚ ವ್ಯಕ್ತಿ). ಶಿವಾಜಿ ಮಹಾರಾಜರಿಲ್ಲದೇ ಭಾರತದ ಪ್ರಸ್ತುತ ರೂಪ ಹಾಗೂ ಭವ್ಯತೆಯನ್ನು ಊಹಿಸುವುದು ಕೂಡ ಕಷ್ಟ.

ಅವರ ‘ಹಿಂದವಿ ಸ್ವರಾಜ್ಯ’ ಉತ್ತಮ ಆಡಳಿತದ ಅತ್ಯುತ್ತಮ ಉದಾಹರಣೆ ಆಗಿದೆ. ಇದು ವಂಚಿತರಿಗೆ ನ್ಯಾಯ ಮತ್ತು ಅನ್ಯಾಯದ ವಿರುದ್ಧ ಹೋರಾಡುವ ಬಗ್ಗೆ ಇರುವಂಥದ್ದು. ಶಿವಾಜಿ ಮಹಾರಾಜರ ನಿರ್ವಹಣೆ, ಸಮುದ್ರದ ಪರಿಣಾಮಕಾರಿ ಬಳಕೆ, ನೌಕಾ ಪಡೆಯ ಉಪಯುಕ್ತತೆ, ಪರಿಣಮಕಾರಿ ಜಲಾನಯನ ನಿರ್ವಹಣೆ ಇಂತಹ ಹಲವಾರು ಕೆಲಸಗಳು ಈಗಲೂ ಅನುಕರಣೀ’ ಎಂದರು.

click me!