ಸಣ್ಣ ಪುಟ್ಟ ಹಿಂಸೆ ನಡುವೆ ಉತ್ತಮ ಮತದಾನ!

By Kannadaprabha NewsFirst Published Apr 7, 2021, 8:10 AM IST
Highlights

ಸಣ್ಣಪುಟ್ಟಹಿಂಸೆ ನಡುವೆ ಉತ್ತಮ ಮತದಾನ| ಪಂಚರಾಜ್ಯ ಚುನಾವಣೆ| ತಮಿಳ್ನಾಡು, ಕೇರಳ, ಪುದುಚೇರಿ, ಅಸ್ಸಾಂನಲ್ಲಿ ಚುನಾವಣೆ ಪೂರ್ಣ

ನವದೆಹಲಿ(ಏ.07): ತೀವ್ರ ಕುತೂಹಲ ಕೆರಳಿಸಿರುವ ಪಂಚರಾಜ್ಯಗಳ ವಿಧಾನಸಭೆಗೆ ಮಂಗಳವಾರ ಮತದಾನ ಪ್ರಕ್ರಿಯೆ ಬಹುತೇಕ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ತಮಿಳ್ನಾಡು, ಕೇರಳ ಮತ್ತು ಪುದುಚೇರಿಯಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಿಗದಿಯಾಗಿದ್ದು, ಅದು ಪೂರ್ಣಗೊಂಡಿದೆ. ಇನ್ನು ಅಸ್ಸಾಂನಲ್ಲಿ 3ನೇ ಹಂತದ ಮತದಾನದೊಂದಿಗೆ ಇಡೀ ಪ್ರಕ್ರಿಯೆ ಪೂರ್ಣಗೊಂಡಿದೆ. ಪಶ್ಚಿಮ ಬಂಗಾಳದಲ್ಲಿ 5 ಅಭ್ಯರ್ಥಿಗಳು, ಮಹಿಳೆಯರ ಮೇಲಿನ ಹಲ್ಲೆ ಪ್ರಕರಣಗಳ ನಡುವೆಯೇ 3ನೇ ಹಂತದ ಮತದಾನ ನಡೆದಿದೆ. ಆದರೆ ರಾಜ್ಯದಲ್ಲಿ ಇನ್ನೂ 4 ಹಂತದಲ್ಲಿ ಚುನಾವಣೆ ನಡೆಯಬೇಕಿದೆ.

ತಮಿಳುನಾಡಿನ 234 ಸ್ಥಾನಗಳಿಗೆ 3998 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದು ಶೇ.64.47ಷ್ಟುಮತ ಚಲಾವಣೆಯಾಗಿದೆ. ಇನ್ನು ಕೇರಳದ 140 ಸ್ಥಾನಕ್ಕೆ 957 ಮಂದಿ ಸ್ಪರ್ಧಿಸಿದ್ದು ಶೇ.74ರಷ್ಟುಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಪುದುಚೇರಿ 30 ಸ್ಥಾನಕ್ಕೆ 324 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದು ಶೇ.78ರಷ್ಟುಮತ ಚಲಾವಣೆಯಾಗಿದೆ.

ಇನ್ನು ಪಶ್ಚಿಮ ಬಂಗಾಳದ 31 ಕ್ಷೇತ್ರಗಳಿಗೆ 205 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದು ಶೇ.77ರಷ್ಟುಮತ್ತು ಅಸ್ಸಾಂನ 40 ಸ್ಥಾನಗಳಿಗೆ 337 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದು ಅಲ್ಲಿ ಶೇ.83ರಷ್ಟುಮತ ಚಲಾವಣೆಯಾಗಿದೆ.

ಮತದಾನ ಪ್ರಮಾಣ

ತಮಿಳ್ನಾಡು ಶೇ.64.47

ಕೇರಳ ಶೇ.74.00

ಪುದುಚೇರಿ ಶೇ.78.00

ಪಶ್ಚಿಮ ಬಂಗಾಳ ಶೇ.77.00

ಅಸ್ಸಾಂ ಶೇ.83.00

click me!