ದೇಶದಲ್ಲಿ ದಾಖಲೆಯ 1.07 ಲಕ್ಷ ಜನರಿಗೆ ಸೋಂಕು!

By Kannadaprabha NewsFirst Published Apr 7, 2021, 8:05 AM IST
Highlights

ನಿನ್ನೆ ದಾಖಲೆಯ 1.07 ಲಕ್ಷ ಜನರಿಗೆ ಸೋಂಕು| ಕೊರೋನಾ ಆರಂಭವಾದ ಬಳಿಕ ದೇಶದಲ್ಲಿ ದಾಖಲಾದ ಗರಿಷ್ಠ ಸೋಂಕು

 

ನವದೆಹಲಿ(ಏ.07): ದೇಶದಲ್ಲಿ ಕೊರೋನಾ ಪ್ರಕರಣಗಳು ಮಂಗಳವಾರ ಮತ್ತೊಂದು ಸಾರ್ವಕಾಲಿಕ ದಾಖಲೆ ಮಾಡಿದೆ. ಮಂಗಳವಾರ ಒಟ್ಟಾರೆ 1.07 ಲಕ್ಷ ಜನರಿಗೆ ಸೋಂಕು ದೃಢಪಟ್ಟಿದ್ದು, ಇದು ಕೊರೋನಾ ಆರಂಭವಾದ ಬಳಿಕ ದೇಶದಲ್ಲಿ ಕಾಣಿಸಿಕೊಂಡ ಗರಿಷ್ಠ ಪ್ರಮಾಣವಾಗಿದೆ. ಇದರೊಂದಿಗೆ ಸತತ 4ನೇ ದಿನ ಕೂಡಾ 90000ಕ್ಕಿಂತ ಹೆಚ್ಚು 2ನೇ ಬಾರಿ 1 ಲಕ್ಷಕ್ಕಿಂತ ಹೆಚ್ಚಿನ ಪ್ರಮಾಣ ಸೋಂಕು ದಾಖಲಾದಂತೆ ಆಗಿದೆ.

ವಿವಿಧ ರಾಜ್ಯ ಸರ್ಕಾರಗಳು ಮಂಗಳವಾರ ಸಂಜೆಯವರೆಗೆ ಪ್ರಕಟಿಸಿದ ಆಧಾರದಲ್ಲಿ ಈ ಅಂಕಿ ಸಂಖ್ಯೆಯನ್ನು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಆದರೆ ಕೆಲ ರಾಜ್ಯಗಳು ಇನ್ನೂ ತಮ್ಮ ವರದಿಯನ್ನು ಪ್ರಕಟಿಸದೇ ಇರುವ ಕಾರಣ, ಸೋಂಕಿನ ಪ್ರಮಾಣ ಇನ್ನೂ ಹೆಚ್ಚಳವಾಗುವುದು ಖಚಿತ.

ಇದಕ್ಕೂ ಮೊದಲು ಕೇಂದ್ರ ಸರ್ಕಾರ ಮಂಗಳವಾರ ಬೆಳಗ್ಗೆ 8ಕ್ಕೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 96,982 ಪ್ರಕರಣಗಳು ದೃಢಪಟ್ಟಿದ್ದು, 446 ಜನರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿತ್ತು. ತನ್ಮೂಲಕ ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1.26 ಕೋಟಿಗೆ ತಲುಪಿದ್ದರೆ, ಸಾವಿನ ಪ್ರಮಾಣ 1,65,547ನ್ನು ಮುಟ್ಟಿದೆ ಎಂದು ತಿಳಿಸಿತ್ತು.

click me!