ಶೀಘ್ರದಲ್ಲೇ ಮತದಾರರ ಚೀಟಿ ಜತೆ ಆಧಾರ್‌ ಜೋಡಣೆ!

Published : Mar 19, 2025, 09:18 AM ISTUpdated : Mar 19, 2025, 09:19 AM IST
ಶೀಘ್ರದಲ್ಲೇ ಮತದಾರರ ಚೀಟಿ ಜತೆ ಆಧಾರ್‌ ಜೋಡಣೆ!

ಸಾರಾಂಶ

ಕೇಂದ್ರ ಚುನಾವಣಾ ಆಯೋಗವು ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆಗೆ ಸಿದ್ಧತೆ ನಡೆಸಿದೆ. ಆದರೆ, ಇದು ಕಡ್ಡಾಯವಲ್ಲ, ಐಚ್ಛಿಕವಾಗಿರಲಿದೆ. ಈ ಬಗ್ಗೆ ಗೃಹ ಸಚಿವಾಲಯದೊಂದಿಗೆ ಸಭೆ ನಡೆಸಲಾಗಿದೆ.

ನವದೆಹಲಿ (ಮಾ.19): ಮತದಾರರ ಗುರುತಿನ ಚೀಟಿಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡುವ ಕೆಲಸಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. ಆದರೆ ಈ ಹಿಂದೆ ಕೇಂದ್ರ ಸರ್ಕಾರ ಸುಪ್ರೀಂಗೆ ಮಾಹಿತಿ ನೀಡಿದಂತೆ ಇದನ್ನು ಕಡ್ಡಾಯ ಮಾಡುವ ಬದಲು ಐಚ್ಛಿಕ ಮಾಡುವ ಸಾಧ್ಯತೆ ಇದೆ. ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ, ವಿಶಿಷ್ಠ ಗುರುತಿನ ಚೀಟಿ ಪ್ರಾಧಿಕಾರ ಸೇರಿ ವಿವಿಧ ಇಲಾಖೆಗಳ ಜೊತೆ ಮಂಗಳವಾರ ಸಭೆ ನಡೆಸಿದ ಕೇಂದ್ರ ಚುನಾವಣಾ ಆಯೋಗ ಬಳಿಕ ಈ ಮಾಹಿತಿ ನೀಡಿದೆ.

ಗುರುತಿನ ಚೀಟಿಗೆ ಆಧಾರ್‌ ಲಿಂಕ್‌ ಮಾಡುವ ಕುರಿತಂತೆ ಆಧಾರ್‌ ಕಾರ್ಡ್‌ ವಿತರಿಸುವ ವಿಶಿಷ್ಠ ಗುರುತಿನ ಚೀಟಿ ಪ್ರಾಧಿಕಾರದ ಜೊತೆಗೆ ತಾಂತ್ರಿಕ ಸಮಾಲೋಚನೆ ಆರಂಭಿಸಲಾಗುವುದು. ಜೋಡಣೆ ಕಾರ್ಯವನ್ನು ದೇಶದ ಕಾನೂನು ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನಗಳನುಸಾರ ಮಾಡಲಾಗುವುದು ಎಂದು ಮಾಹಿತಿ ನೀಡಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಆಯೋಗ, ‘ಸಂವಿಧಾನದ 326ನೇ ವಿಧಿಯ ಪ್ರಕಾರ ಭಾರತದ ಪ್ರಜೆಗಳಿಗಷ್ಟೇ ಮತದಾನದ ಹಕ್ಕಿದೆ. ಆಧಾರ್‌ ವ್ಯಕ್ತಿಗಳ ಗುರುತನ್ನು ಸ್ಥಾಪಿಸುವ ಕಾರಣ ಅದನ್ನು ಜನಪ್ರತಿನಿಧಿ ಕಾಯ್ದೆ 1950ಯ ಸೆಕ್ಷನ್‌ 23(4), 23(5),ತು 23(6) ಮತ್ತು ಸುಪ್ರೀಂ ಕೋರ್ಟ್‌ನ 2023ರ ತೀರ್ಪಿನ ಅನುಸಾರ ಮತದಾರರ ಗುರುತಿನ ಚೀಟಿಯೊಂದಿಗೆ ಜೋಡಿಸಲು ನಿರ್ಧರಿಸಲಾಗಿದೆ’ ಎಂದು ಅದರಲ್ಲಿ ತಿಳಿಸಲಾಗಿದೆ.

ವಯಸ್ಸು ಧೃಡೀಕರಣಕ್ಕೆ ಆಧಾರ್‌ ಸೂಕ್ತ ದಾಖಲೆಯಲ್ಲ

2023ರ ಏಪ್ರಿಲ್‌ನಲ್ಲಿ, ‘ಆಧಾರ್‌ ಹಾಗೂ ಮತದಾರರ ಚೀಟಿ ಜೋಡಣೆಗೆ ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿಲ್ಲ. ಈ ಜೋಡಣೆಯಾಗದ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುವುದಿಲ್ಲ’ ಎಂದು ಸರ್ಕಾರ ರಾಜ್ಯಸಭೆಯಲ್ಲಿ ಮಾಹಿತಿ ನೀಡಿತ್ತು.

ನಿಮ್ಮ ಆಧಾರ್‌ಕಾರ್ಡ್ ಅಪ್ಡೇಡ್ ಆಗಿದ್ಯಾ? ಸೆಪ್ಟೆಂಬರ್ 14 ಕಡೆ ದಿನ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
Viral Video: ಮಾಜಿ ಸಿಜೆಐ ಬಿಆರ್‌ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್‌ ಕಿಶೋರ್‌ಗೆ ಕೋರ್ಟ್‌ನಲ್ಲೇ ಚಪ್ಪಲಿಯಿಂದ ಹಲ್ಲೆ!