ಕಾಂಗ್ರೆಸ್‌ ಸಭೇಲಿ ಇಟಲಿ ಲೀಡರ್‌ ‘ವೋಟ್‌ ಚೋರ್‌, ಗದ್ದಿ ಛೋಡ್‌’ ಘೋಷಣೆ! ಕೈನಿಂದ ದೇಶ ವಿರೋಧಿ ಶಕ್ತಿಗಳಿಗೆ ಕುಮ್ಮಕ್ಕು: ಬಿಜೆಪಿ ಕಿಡಿ

Kannadaprabha News   | Kannada Prabha
Published : Nov 15, 2026, 01:58 PM IST
Giacomo Filibeck anti Modi remark

ಸಾರಾಂಶ

ಹೈದರಾಬಾದ್‌ನಲ್ಲಿ ಕಾಂಗ್ರೆಸ್‌ ಆಯೋಜಿಸಿದ್ದ ಸಮಾವೇಶದಲ್ಲಿ ಇಟಲಿಯ ನಾಯಕ ಗಿಯಾಕೊಮೊ ಫಿಲಿಬೆಕ್ ಪ್ರಧಾನಿ ಮೋದಿ ವಿರುದ್ಧ 'ವೋಟ್‌ ಚೋರ್‌, ಗದ್ದಿ ಛೋಡ್‌' ಎಂದು ಘೋಷಣೆ ಕೂಗಿದ್ದಾರೆ. ಇದು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ರಾಷ್ಟ್ರವಿರೋಧಿ ಶಕ್ತಿಗಳನ್ನು ಆಹ್ವಾನಿಸುತ್ತಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಹೈದರಾಬಾದ್‌ (ನ.15): ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಿಪಕ್ಷಗಳು ವ್ಯಾಪಕವಾಗಿ ಬಳಸುತ್ತಿರುವ ‘ವೋಟ್‌ ಚೋರ್‌, ಗದ್ದಿ ಛೋಡ್‌’ (ಮತಗಳ್ಳ, ಕುರ್ಚಿ ಬಿಡು) ಘೋಷಣೆಯನ್ನು ಶನಿವಾರ ಕಾಂಗ್ರೆಸ್‌ ಆಯೋಜಿಸಿದ್ದ ಸಮಾವೇಶದಲ್ಲಿ ಇಟಲಿಯ ನಾಯಕ ಗಿಯಾಕೊಮೊ ಫಿಲಿಬೆಕ್ ಹೇಳಿದ್ದಾರೆ. ವಿದೇಶಿ ಪ್ರಜೆಯೊಬ್ಬರು ನೀಡಿದ ಈ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ.

ಹೈದರಾಬಾದ್‌ನಲ್ಲಿ ಕಾಂಗ್ರೆಸ್‌ ಆಯೋಜಿಸಿದ್ದ ‘ಭಾರತ್ ಶೃಂಗಸಭೆ’ಯಲ್ಲಿ ಮಾತನಾಡಿದ ಯುರೋಪಿಯನ್ ಸೋಷಿಯಲಿಸ್ಟ್ ಪಾರ್ಟಿಯ (ಪಿಇಎಸ್‌) ಪ್ರಧಾನ ಕಾರ್ಯದರ್ಶಿ ಗಿಯಾಕೊಮೊ ಫಿಲಿಬೆಕ್, ‘ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ. ನಾವು ಅದನ್ನು ರಕ್ಷಿಸಿಕೊಳ್ಳಬೇಕು ಮತ್ತು ಅದನ್ನು ರಕ್ಷಿಸಲು ಉತ್ತಮ ಮಾರ್ಗವೆಂದರೆ ರಾಹುಲ್ ಗಾಂಧಿ ಮತ್ತು ಭಾರತೀಯ ಕಾಂಗ್ರೆಸ್ ಪಕ್ಷದ ಬೆಂಬಲಕ್ಕೆ ನಿಲ್ಲುವುದು’ ಎಂದಿದ್ದಾರೆ. ಇದೇ ವೇಳೆ ಮೋದಿಯವರನ್ನು ಉಲ್ಲೇಖಿಸಿ ‘ವೋಟ್‌ ಚೋರ್‌, ಗದ್ದಿ ಛೋಡ್‌’ ಎಂದಿದ್ದಾರೆ.

ಬಿಜೆಪಿ ಕಿಡಿ: ಇಟಲಿ ವ್ಯಕ್ತಿಯ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರಾಹುಲ್ ಗಾಂಧಿಯವರ ರಾಜಕೀಯವು ಈಗ ರಾಜಕೀಯ ವಿರೋಧದ ಮಿತಿಗಳನ್ನು ಮೀರಿ, ರಾಷ್ಟ್ರವಿರೋಧಿ ಕಾರ್ಯಸೂಚಿಯತ್ತ ಸಾಗುತ್ತಿದೆ. ಕಾಂಗ್ರೆಸ್‌ ದೇಶವಿರೋಧಿ ಶಕ್ತಿಗಳನ್ನು ಆಹ್ವಾನಿಸುತ್ತಿದೆ ಎಂದು ಆರೋಪಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

18 ವರ್ಷಗಳಿಂದ ಅಜ್ಜಿ ಕಂಡಿದ್ದ ಕನಸು! ಮದುವೆ ದಿನ ಮೊಮ್ಮಗ ಕೊಟ್ಟ ಸರ್ಪ್ರೈಸ್‌ಗೆ ನೆಟ್ಟಿಗರು ಫಿದಾ
ಗೇಟ್ ಹೊರಗೆ ರಾವ್ ಪಾರ್ಥಿವ ಶರೀರ, ಕೋಣೆಯೊಳಗೆ ಕೇಸರಿ ಪದಚ್ಯುತಿ; ಈ ಕುರಿತು ಮೌನವಹಿಸಿತಾ ಸೋನಿಯಾ ಆತ್ಮಚರಿತ್ರೆ?