ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 'ಬಿಲಾಂಗಿಂಗ್; ಎ ಜರ್ನಿ ಆಫ್ ಲವ್' ಇತ್ತೀಚೆಗೆ ಬಿಡುಗಡೆಯಾಗಿದೆ. ಇದು ಅವರ ವೈಯಕ್ತಿಕ ಆತ್ಮಚರಿತ್ರೆಯಾಗಿರುವುದರಿಂದ, ತಮಗೆ ಬೇಕಾದ್ದನ್ನು ಬರೆಯುವ ಸಂಪೂರ್ಣ ಸ್ವಾತಂತ್ರ್ಯ ಅವರಿಗಿದೆ. ಆದರೆ ಈ ಕೃತಿಯನ್ನು ವಿಮರ್ಶಾತ್ಮಕವಾಗಿ ನೋಡಿದಾಗ, ಕಾಂಗ್ರೆಸ್ ಇತಿಹಾಸದ ಹಲವು ಕಹಿ ಸತ್ಯಗಳಿಗೆ 'ಮೌನದ ಫುಲ್‌ಸ್ಟಾಫ್' ಇಟ್ಟಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಇದಕ್ಕೆ ಹಲವು ಉದಾಹರಣೆಗಳಿದ್ದರೂ, ಇಲ್ಲಿ ಎರಡು ಮುಖ್ಯ ವಿವಾದಗಳನ್ನು ಗಮನಿಸಬಹುದು. ಒಂದು ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅಂತ್ಯಕ್ರಿಯೆಯ ವಿವಾದ, ಮತ್ತೊಂದು ಸೀತಾರಾಮ್ ಕೇಸರಿ ಅವರನ್ನು ಕೋಣೆಯಲ್ಲಿ ಕೂಡಿಹಾಕಿ ಎಐಸಿಸಿ ಅಧ್ಯಕ್ಷ ಪಟ್ಟ ಕಸಿದುಕೊಂಡರು ಎನ್ನುವ ಆರೋಪ. ಈ ಕುರಿತು ಸೋನಿಯಾ ತಮ್ಮ ಪುಸ್ತಕದಲ್ಲಿ ಹೇಳಿದ್ದೇನು? ಅಂದು ನಿಜವಾಗಿಯೂ ನಡೆದಿದ್ದೇನು? ವಾಸ್ತವ ಹೇಗಿದೆ? ಇವೆಲ್ಲದರ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
ಸೋನಿಯಾ ಗಾಂಧಿ ತಮ್ಮ ಪುಸ್ತಕದಲ್ಲಿ ರಾವ್ ಅವರನ್ನು ವಿದ್ವಾಂಸ ರಾಜನೀತಿಜ್ಞ ಎಂದು ಕರೆದಿದ್ದಾರೆ. ರಾಜೀವ್ ಗಾಂಧಿ ಹತ್ಯೆಯ ತನಿಖೆಯ ವೇಗದ ವಿಚಾರದಲ್ಲಿ ಮಾತ್ರ ಭಿನ್ನಾಭಿಪ್ರಾಯವಿತ್ತು ಎಂದು ಬರೆದಿದ್ದಾರೆ. 2004ರ ಡಿಸೆಂಬರ್‌ನಲ್ಲಿ ರಾವ್ ನಿಧನರಾದಾಗ, ಅವರ ಪಾರ್ಥಿವ ಶರೀರವನ್ನು ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯ ಗೇಟ್ ಒಳಗೆ ತರಲು ಅವಕಾಶ ನೀಡಿರಲಿಲ್ಲ ಎಂಬ ಆರೋಪವಿದೆ. ಅಲ್ಲದೆ, ದೆಹಲಿಯಲ್ಲಿ ಅಂತ್ಯಕ್ರಿಯೆ ನಡೆಸದೆ ಹೈದರಾಬಾದ್‌ಗೆ ಕಳುಹಿಸಲಾಯಿತು. ಈ ವಿವಾದದ ಬಗ್ಗೆ ಪುಸ್ತಕದಲ್ಲಿ ಯಾವುದೇ ಉಲ್ಲೇಖವಿಲ್ಲ. 1ಒಞ991 ರ ಆರ್ಥಿಕ ಉದಾರೀಕರಣದ (LPG) ಹರಿಕಾರರಾಗಿ ದೇಶವನ್ನು ಆರ್ಥಿಕ ದಿವಾಳಿತನದಿಂದ ಪಾರು ಮಾಡಿದ ರಾವ್ ಅವರಿಗೆ, 2024 ರಲ್ಲಿ ಕೇಂದ್ರ ಸರ್ಕಾರ ಮರಣೋತ್ತರ 'ಭಾರತ ರತ್ನ' ನೀಡಿ ಗೌರವಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಅಂಥ ರಾವ್ ಕುರಿತು ಒಂದು ಪುಟದ ಹೊರತು ಒಂದು ಅಕ್ಷರವೂ ಇಲ್ಲ.
ಗಾಂಧಿ ಕುಟುಂಬದ ಹೊರಗಿನ ನಾಯಕರಿಗೆ ಕಾಂಗ್ರೆಸ್‌ನಲ್ಲಿ ಗೌರವವಿಲ್ಲ ಎಂಬುದಕ್ಕೆ ರಾವ್ ಮತ್ತು ಕೇಸರಿ ಪ್ರಕರಣಗಳೇ ಸಾಕ್ಷಿ ಎಂದು ಬಿಜೆಪಿ ಮತ್ತು ರಾಜಕೀಯ ವಿಶ್ಲೇಷಕರು ಟೀಕಿಸಿದ್ದಾರೆ. ಕಾಂಗ್ರೆಸ್ ನಾಯಕರ ಮಾತು, ರಾವ್ ಅವರಿಗೆ ಸಿಗಬೇಕಾದ ಗೌರವ ಸಿಗಲಿಲ್ಲ ಎಂಬ ಆರೋಪದಲ್ಲಿ ಭಾಗಶಃ ಸತ್ಯವಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪೃಥ್ವಿರಾಜ್ ಚವಾಣ್ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಅಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಪಕ್ಷವನ್ನು ಉಳಿಸಲು ಸೋನಿಯಾ ನಾಯಕತ್ವ ಅನಿವಾರ್ಯವಾಗಿತ್ತು ಎಂಬುದು ಕಾಂಗ್ರೆಸ್ ವಾದ. ಆದರೆ ಇಲ್ಲಿ ವ್ಯಕ್ತಿಯ ಸಾವಿನಲ್ಲಿ ಯಾವುದೇ ರಾಜಕೀಯ ತರಬಾರದು ಎನ್ನುವುದು ಮಾನವೀಯ ರಾಜಕೀಯದ ಮಾತು.
ಒಂದಂತು ಸತ್ಯ ಮೊದಲ ಭಾಗದಲ್ಲಿ ಕೋಮಲವಾಗಿ, ಪ್ರೀತಿ, ಪ್ರೇಮ, ಕುಟುಂಬದ ಸಂಬಂಧ ಸೇರಿ ಹಲವು ವಿಷಯಗಳನ್ನು ಭಾವನಾತ್ಮಕವಾಗಿ ಸೇರಿಸಿದ್ದಾರೆ. ಆದರೆ ಕೆಲವಲ್ಲ, ಹಲವಾರು ವಿಷಯಗಳಿಗೆ ಮೌನವಹಿಸಿದ್ದಾರೆ ಎಂದು ಒಂದೋಂದೆ ವಿಮರ್ಶೆ ಹೊರಬೀದ್ದಿವೆ. ಅಂದು ಹಿರಿಯ ಮತ್ತು ಗಾಂಧಿಯೇತರ ನಾಯಕರನ್ನು ಕಡೆಗಣಿಸಿದ ಇತಿಹಾಸವನ್ನು ಆತ್ಮಚರಿತ್ರೆಯಲ್ಲಿ ಮೃದುವಾಗಿ ತೋರಿಸುವ ಪ್ರಯತ್ನ ನಡೆದಿದೆಯೇ ಎಂಬ ಪ್ರಶ್ನೆಯೂ ಈಗ ಎಲ್ಲರಲ್ಲೂ ಮೂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ