ಆಫ್ರಿಕಾದಲ್ಲಿ ಜ್ವಾಲಾಮುಖಿ : ಭಾರತಕ್ಕೆ ಭಾರಿ ಪರಿಣಾಮ

Kannadaprabha News   | Kannada Prabha
Published : Nov 25, 2025, 06:25 AM IST
Ethyopya Volcanic erruption

ಸಾರಾಂಶ

ಆಫ್ರಿಕಾದ ಇಥಿಯೋಪಿಯಾದಲ್ಲಿ 12,000 ವರ್ಷಗಳಲ್ಲಿ ಜ್ವಾಲಾಮುಖಿಯೊಂದು ಸ್ಫೋಟಗೊಂಡಿದ್ದು, ಇದರ ಬೂದಿ ಮಿಶ್ರಿತ ಹೊಗೆಯು ಉತ್ತರ ಭಾರತದವನ್ನು ಕ್ರಮಿಸುವ ಆತಂಕ ಎದುರಾಗಿದೆ. ಹೈಲಿ ಗುಬ್ಬಿ ಎಂಬ ಜ್ವಾಲಾಮುಖಿಯ ಬೂದಿ ಮಿಶ್ರಿತ ಹೊಗೆಯು ನ.24ರಿಂದ 25ರವೆರೆಗೆ ಹಿಮಾಲಯದವರೆಗೆ ಹೋಗಲಿದೆ

ನವದೆಹಲಿ: ಆಫ್ರಿಕಾದ ಇಥಿಯೋಪಿಯಾದಲ್ಲಿ 12,000 ವರ್ಷಗಳಲ್ಲಿ ಜ್ವಾಲಾಮುಖಿಯೊಂದು ಸ್ಫೋಟಗೊಂಡಿದ್ದು, ಇದರ ಬೂದಿ ಮಿಶ್ರಿತ ಹೊಗೆಯು ಉತ್ತರ ಭಾರತದವನ್ನು ಕ್ರಮಿಸುವ ಆತಂಕ ಎದುರಾಗಿದೆ. ಹೈಲಿ ಗುಬ್ಬಿ ಎಂಬ ಜ್ವಾಲಾಮುಖಿಯ ಬೂದಿ ಮಿಶ್ರಿತ ಹೊಗೆಯು ನ.24ರಿಂದ 25ರವೆರೆಗೆ ಭೂತಾನ್‌ಗೂ ವ್ಯಾಪಿಸಲಿದ್ದು, ಹಿಮಾಲಯದವರೆಗೆ ಹೋಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈಗಾಗಲೇ ಹದಗೆಟ್ಟಿರುವ ದೆಹಲಿ ಮತ್ತು ಎನ್‌ಸಿಆರ್‌ ಗಾಳಿ ಗುಣಮಟ್ಟ ಇನ್ನಷ್ಟು ಕುಸಿವ ಭೀತಿ ಎದುರಾಗಿದೆ.

ಇದರ ಬೆನ್ನಲ್ಲೇ ಭಾರತದ ಹಲವು ವಿಮಾನಗಳು ಕೊಲ್ಲಿ ರಾಷ್ಟ್ರಗಳಿಗೆ ಸೇವೆಯನ್ನು ರದ್ದುಗೊಳಿಸಿವೆ.

ಯಾವ ಜ್ವಾಲಾಮುಖಿ?

ಹೈಲಿ ಗುಬ್ಬಿ ಎಂಬ ಹೆಸರಿನ ಜ್ವಾಲಾಮುಖಿಯು ಇಥಿಯೋಪಿಯಾದ ಅಫಾರ್‌ ಪ್ರಾಂತ್ಯದಲ್ಲಿ ಸಿಡಿದಿದೆ. ಇದರ ಸ್ಫೋಟದ ತೀವ್ರತೆಗೆ ಆಸುಪಾಸಿನ ಊರುಗಳಲ್ಲಿ ಕಂಪನದ ಅನುಭವವಾಗಿದೆ. ಹೊಗೆಯು ಸಂಪೂರ್ಣ ಗ್ರಾಮವನ್ನೇ ಆಹುತಿ ಪಡೆದುಕೊಂಡಿದೆ. ಮುಂದುವರಿದು ಕೆಂಪು ಸಮುದ್ರ ದಾಟಿ, ಪಕ್ಕದ ಯೆಮೆನ್‌, ಒಮಾನ್‌ ಮತ್ತು ಅರಬ್ಬಿ ಸಮುದ್ರವನ್ನು ಕ್ರಮಿಸಲಿದೆ. ಹಾಗೆ ಕರಾಚಿ, ಗುಜರಾತ್‌ ಮೂಲಕ ಭಾರತಕ್ಕೆ ಪ್ರವೇಶಿಸಲಿದೆ. ಬಳಿಕ ದೆಹಲಿ ಹರ್ಯಾಣ, ಉತ್ತರ ಪ್ರದೇಶ ಮೂಲಕ ಬಿಹಾರ, ಭೂತಾನ್‌ ಪ್ರವೇಶಿಸಿ ಅಸ್ಸಾಂ ಮೂಲಕ ಹಿಮಾಲಯದವರೆಗೆ ಹೋಗಲಿದೆ ಎಂದು ಅಂದಾಜಿಸಲಾಗಿದೆ.

ಹಲವು ವಿಮಾನ ರದ್ದು:

ಬೂದಿ ಹೊಗೆಯ ಸಂಬಂಧ ವಿಮಾನಯಾನ ಕಂಪನಿಗಳು ಕೊಲ್ಲಿ ದೇಶಗಳಿಗೆ ವಿಮಾನ ರದ್ದುಗೊಳಿಸಿವೆ. ಜೊತೆಗೆ ಡಿಜಿಸಿಎ ವಿಮಾನ/ ನಿಲ್ದಾಣದ ಆಡಳಿತಕ್ಕೆ ಪ್ರತಿಯೊಂದು ಘಟನೆ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಎಂದು ಸೂಚಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ