10 ಸಾವಿರ ವರ್ಷ ಬಳಿಕ ಇಥಿಯೋಪಿಯಾ ಜ್ವಾಲಾಮುಖಿ ಸ್ಫೋಟ, ಭಾರತದ ವಿಮಾನ ಡೈವರ್ಟ್

Published : Nov 24, 2025, 08:12 PM IST
IndiGo

ಸಾರಾಂಶ

10 ಸಾವಿರ ವರ್ಷ ಬಳಿಕ ಇಥಿಯೋಪಿಯಾ ಜ್ವಾಲಾಮುಖಿ ಸ್ಫೋಟ, ಭಾರತದ ವಿಮಾನ ಡೈವರ್ಟ್, ಇದೀಗ ಭಾರತದ ಆತಂಕ ಹೆಚ್ಚಾಗುತ್ತಿದೆ. ಪ್ರಮುಖವಾಗಿ ಜ್ವಾಲಾಮುಖಿ ಬೂದಿ ಹಾಗೂ ದೂಳು ದೆಹಲಿಗೂ ತಟ್ಟಲಿದೆ.

ನವದೆಹಲಿ (ನ.24) ಬರೋಬ್ಬರಿ 10,000 ವರ್ಷಗಳ ಬಳಿಕ ಇಥಿಯೋಪಿಯಾದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಭೂಮಿ ಮೇಲೆ ನಾಗಗರೀಕತೆಗಳು ಬೆಳೆದ ಬಳಿ ಇಥಿಯೋಪಿಯಾದಲ್ಲಿ ಜ್ವಾಲಾಮುಖಿ ವರದಿಯಾಗಿಲ್ಲ. ಇದೀಗ ಇಥಿಯೋಪಿಯಾದ ಹೈಲಿ ಗುಬ್ಬಿ ಬಳಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ವಿಜ್ಞಾನಿಗಳು ಇದು ಅತೀ ವಿಶೇಷ ಹಾಗೂ ಅಪರೂಪ ಎಂದಿದ್ದಾರೆ. ಆಗಸದಲ್ಲಿ 15 ರಿಂದ 15 ಕಿಲೋಮೀಟರ್ ವ್ಯಾಪ್ತಿಯಲ್ಲಿ ದಟ್ಟ ಹೊಗೆ, ಬೂದಿ ಆವರಿಸಿದೆ. ಇದರ ಪರಿಣಾಮ ಕಣ್ಣೂರು ಅಬು ಧಾಬಿ ಇಂಡಿಗೋ ವಿಮಾನ ಮಾಡಲಾಗಿದೆ. ಕೇರಳದ ಕಣ್ಣೂರಿನಿಂದ ಅಬು ಧಾಬಿಗೆ ತೆರಳಬೇಕಿದ್ದ ವಿಮಾನ ಅಹಮ್ಮದಾಬಾದ್‌ನಿಂದ ಟೇಕ್ ಆಫ್ ಆಗಲಿದೆ.

ಭಾರತದ ಹಲವು ವಿಮಾನ ಮಾರ್ಗ ಬದಲು

ಇಥಿಯೋಪಿಯಾ ಜ್ವಾಲಾಮುಖಿಯಿಂದ ಭಾರತದ ಹಲವು ವಿಮಾನ ಮಾರ್ಗಗಳು ಬದಲಾಗುವ ಸಾಧ್ಯತೆ ದಟ್ಟವಾಗಿದೆ. ಜೊತೆಗೆ ಕೆಲ ವಿಮಾನ ಪ್ರಯಾಣ ರದ್ದಾಗುವ ಸಾಧ್ಯತೆ ಇದೆ. ಸದ್ಯ ಇಥಿಯೋಪಿಯಾದಲ್ಲಿ ಸ್ಫೋಟಗೊಂಡ ಜ್ವಾಲಾಮುಖಿ ತೀವ್ರತೆ ಕಡಿಮೆಯಾಗಿದೆ. ಭಾನುವಾರ ಸ್ಫೋಟಗೊಂಡ ಸೋಮವಾರವೂ ಮುಂದುವರಿದಿತ್ತು. ಜ್ವಾಲಮುಖಿ ದ್ರಾವ ಕೆಂಪು ಸಮುದ್ರಕ್ಕ ಹರಿದಿದೆ. ಹೀಗಾಗಿ ಕೆಂಪು ಸಮುದ್ರದ ತೀರದ ಒಮನ್, ಯೆಮೆನ್ ಸೇರಿದಂತೆ ಹಲವು ದೇಶಗಳಲ್ಲಿ ಇದರ ಬೂದಿ, ಹೊಗೆ ಆವರಿಸಿಕೊಂಡಿದೆ. ಈ ಬೂದಿ ದೆಹಲಿಗೂ ತಲುಪಲಿದೆ. ನಾಳೆ ವೇಳೆಗೆ ಜ್ವಾಲಾಮುಖಿ ಬೂದಿ, ದೂಳು ದೆಹಲಿಗೆ ತಲುಪಲಿದೆ. ಇದರಿಂದ ದೆಹಲಿ ವಿಮಾನ ಪ್ರಯಾಣದಲ್ಲೂ ಹಲವು ಬದಲಾವಣೆಯಾಗುವ ಸಾಧ್ಯತೆ ಇದೆ.

ಕಣ್ಣೂರಿನಿಂದ ಅಹಮ್ಮದಾಬಾದ್‌ಗೆ ವಿಮಾನ

ಕೇರಳದ ಕಣ್ಣೂರಿನಿಂದ ಅಭು ಧಾಬಿಗೆ ತೆರಳಬೇಕಿದ್ದ ವಿಮಾನದ ಮಾರ್ಗ ಬದಲಾವಣೆ ಮಾಡಲಾಗಿದೆ. ಜ್ವಾಲಾಮುಖಿ ಸ್ಫೋಟದಿಂದ ಹಲವು ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಪೈಕಿ ಕಣ್ಣೂರು ಅಬು ಧಾಬಿ ವಿಮಾನ ಮಾರ್ಗವೂ ಬದಲಾಗಿದೆ. ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಬೇಕಿದ್ದ ವಿಮಾನ ಗುಜರಾತ್‌ನ ಅಹಮ್ಮದಾಬಾದ್‌‌ನಿಂದ ತೆರಳಲಿದೆ. ಹೀಗಾಗಿ ಇಂಡಿಗೋ ವಿಮಾನ ಸಂಸ್ಥೆ ಇದೀಗ ಕಣ್ಣೂರಿನಿಂದ ಪ್ರಯಾಣಿಕರು ಅಹಮ್ಮದಾಬಾದ್‌ಗೆ ತೆರಳಲು ಬೇರೆ ವಿಮಾನ ವ್ಯವಸ್ಥೆ ಮಾಡಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಕ್ರಮ ಸಂಬಂಧದ ಹಾದಿ ಹಿಡಿದ ಅಮ್ಮ: ಆಕೆಯ ಇಬ್ಬರು ಪುಟ್ಟ ಮಕ್ಕಳ ಮೋರಿಗೆಸೆದ ಪ್ರಿಯಕರ
19ರ ತರುಣನ ಜೊತೆ ಮಗಳ ಮದುವೆಗೆ ನಿರಾಕರಿಸಿದ ಪ್ರೇಯಸಿ ಮನೆಯವರು: ಕರೆಂಟ್ ಟವರ್ ಏರಿ ಪ್ರಿಯಕರನ ಹೈಡ್ರಾಮಾ