ಗುರುದ್ವಾರದ ಅಧಿಕಾರ ಮುಸ್ಲಿಂ ಮಂಡಳಿ ಕೈಯಲ್ಲಿ: ವಿಹಿಂಪ ಖಂಡನೆ

By Suvarna NewsFirst Published Nov 6, 2020, 3:20 PM IST
Highlights

ಗುರುದ್ವಾರದ ಅಧಿಕಾರವನ್ನು ಕಿತ್ತುಕೊಂಡು ಮುಸ್ಲಿಂ ಮಂಡಳಿಗೆ ಕೊಟ್ಟ ಪಾಕ್ | ಪಾಕ್ ನಿರ್ಧಾರ ಖಂಡಿಸಿದ ವಿಶ್ವ ಹಿಂದೂ ಪರಿಷತ್

ನವದೆಹಲಿ(ನ.06): ಗುರುದ್ವಾರದ ಅಧಿಕಾರವನ್ನು ಕಿತ್ತುಕೊಂಡು ಮುಸ್ಲಿಂ ಮಂಡಳಿಗೆ ಕೊಟ್ಟ ಪಾಕ್ ನಿರ್ಧಾರವನ್ನು ವಿಶ್ವ ಹಿಂದೂ ಪರಿಷತ್ ಖಂಡಿಸಿದೆ. ಪಾಕಿಸ್ತಾನ ಗುರುದ್ವಾರ ಕರ್ತಾರ್‌ಪುರ ಸಹೀಬ್‌ನ್ನು ಸಿಖ್ಖ್ ಗುರುದ್ವಾರ ಪ್ರಬಂಧಕ ಸಮಿತಿಯಿಂದ ಅಧಿಕಾರ ಕಿತ್ತುಕೊಂಡು ಎವೆಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್‌ಗೆ ಕೊಟ್ಟಿರುವ ಪಾಕಿಸ್ತಾನದ ನಡೆಯನ್ನು ವಿಹಿಂಪ ತೀವ್ರವಾಗಿ ವಿರೋಧಿಸಿದೆ.

ಪಿಎಸ್‌ಜಿಪಿಸಿ ಗುರುದ್ವಾರ ನಿರ್ವಹಣೆಯ ಒಂದು ಭಾಗವಾಗಿ ಮುಂದುವರಿಯುತ್ತದೆ ಎಂಬ ಆಶ್ವಾಸನೆ ಕೊಡಲಾಗಿದ್ದರೂ ಸಮಿತಿಯ ಒಂಬತ್ತು ಸದಸ್ಯರಲ್ಲಿ ಒಬ್ಬ ಸಿಖ್ ಸದಸ್ಯನೂ ಇಲ್ಲ.

ಗುರುದ್ವಾರದ ಅಧಿಕಾರ ಕಿತ್ತುಕೊಂಡು ಮುಸ್ಲಿಂ ಮಂಡಳಿಗೆ ಕೊಟ್ಟ ಪಾಕ್!

ಇಟಿಪಿಬಿ ಅಡಿಯಲ್ಲಿ ರಚಿಸಲಾದ ಯೋಜನಾ ನಿರ್ವಹಣಾ ಸಮಿತಿ ಗುರುದ್ವಾರದ ಹಣಕಾಸು ಸಹ ನೋಡಿಕೊಳ್ಳುತ್ತದೆ. ಆದ್ದರಿಂದ ಗುರುದ್ವಾರವನ್ನು ಅಧಿಕಾರದಿಂದ ಮುನ್ನಡೆಸಲು ಗುರುದ್ವಾರ ಪ್ರಬಂಧಕ್ ಸಮಿತಿಗೆ ಯಾವುದೇ ಸ್ವಾಯತ್ತತೆ ಇರುವುದಿಲ್ಲ ಎಂದು ಹೇಳಿದೆ.

ಇದು ವಿಶ್ವದ ಅತ್ಯಂತ ಪೂಜ್ಯ ಗುರುದ್ವಾರಗಳಲ್ಲಿ ಒಂದನ್ನು ಸರ್ಕಾರದ ಅಧೀನಗೊಳಿಸಿದಂತಾಗಿದೆ. ಸರ್ಕಾರದ ಎಂಇಎ ಭಾರತದ ವಿರುದ್ಧ ಪ್ರತಿಭಟನೆ ನಡೆಸಿದೆ. ವಿಎಚ್‌ಪಿ ಪ್ರತಿಭಟನೆಯಲ್ಲಿ ಸೇರಿ ಗುರುದ್ವಾರ ಸಿಖ್ಖರ ಅಧಿಕಾರಕ್ಕೆ ಬಿಟ್ಟುಬಿಡುವಂತೆ ಒತ್ತಾಯಿಸುತ್ತದೆ ಎಂದಿದ್ದಾರೆ

click me!