ಟ್ರಿಮ್ ಆಗಲು ಸಲೂನ್‌ಗೆ ತೆರಳುವ ಮಂಗ
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ ವಿಡಿಯೋ
ದೆಹಲಿ(ಡಿ.6): ಮಂಗವೊಂದು ಸಲೂನ್‌ನಲ್ಲಿ ಟ್ರಿಮ್ ಮಾಡಿಸಿಕೊಳ್ಳಲು ಚೇರ್‌ನಲ್ಲಿ ಕುಳಿತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾನವರನ್ನು ಅನುಕರಿಸುತ್ತಿರುವ ಮಂಗನ ವಿಡಿಯೋಗಳು ಈ ಹಿಂದೆಯೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕೆಲವು ನಿಮ್ಮನ್ನು ಕುತೂಹಲದಿಂದ ನೋಡುವಂತೆ ಮಾಡಿದರೆ ಮತ್ತೆ ಕೆಲವು ನಿಮ್ಮನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತವೆ. ಈ ವಿಡಿಯೋವನ್ನು ಐಪಿಎಸ್( ಭಾರತೀಯ ಪೊಲೀಸ್ ಸೇವೆ) ಅಧಿಕಾರಿ ರುಪಿನ್ ಶರ್ಮಾ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ. 45 ಸೆಕೆಂಡ್‌ಗಳ ಈ ವಿಡಿಯೋ ಕ್ಲಿಪ್‌ನಲ್ಲಿ ಮಂಗವೂ ಸಲೂನ್‌ನ ಕನ್ನಡಿ ಮುಂದೆ ಚೇರ್‌ನಲ್ಲಿ ಕುಳಿತಿದೆ. ತನ್ನ ಕತ್ತಿನ ಸುತ್ತ ಮಂಗವೂ ಬಟ್ಟೆಯನ್ನು ಸುತ್ತಿದ್ದು, ಹೇರ್ ಡ್ರೆಸರ್ ಈ ಮಂಗದ ಮುಖದಲ್ಲಿರುವ ಕೂದಲನ್ನು ಬಾಚಿ ಟ್ರಿಮ್ ಮಾಡುತ್ತಿದ್ದಾರೆ. ಇಲೆಕ್ಟ್ರಿಕ್ ಟ್ರಿಮರ್‌ನಲ್ಲಿ ಟ್ರಿಮ್ ಮಾಡುತ್ತಿದ್ದು, ಮಂಗವೂ ತುಂಬಾ ತಾಳ್ಮೆಯಿಂದ ಕುಳಿತು ಶೇವ್ ಮಾಡಿಸಿಕೊಳ್ಳುತ್ತಿದೆ. .
ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿರುವ ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ 'ಅಬ್ ಲಗ್ ರಹೇ ಸ್ಮಾರ್ಟ್' ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ. ಅಂದರೆ ಈಗ ಸುಂದರವಾಗಿ ಕಾಣಿಸುತ್ತಿದ್ದೀಯಾ ಎಂದು ಅವರು ಹೇಳಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸುತ್ತು ಹೊಡೆಯುತ್ತಿದ್ದು, ಇದನ್ನು ಟ್ಟಿಟ್ಟರ್‌ನಲ್ಲಿ 1,800 ಕ್ಕಿಂತಲೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಇದಕ್ಕೆ ನೆಟ್ಟಿಗರು ಕಾಮೆಂಟ್ ಸೆಕ್ಷನ್‌ನಲ್ಲಿ ಭಿನ್ನವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಒಬ್ಬರು ಕ್ಯಾ ಬಾತ್ ಹೈ ಎಂದು ಹಾಕಿದ್ದರೆ, ಮತ್ತೊಬ್ಬರು, ಮಂಗಗಳು ಕೂಡ ಈ ವ್ಯವಹಾರವನ್ನು ಗಂಭೀರವಾಗಿ ತೆಗೆದುಕೊಂಡಿವೆ ಎಂದು ಕಾಮೆಂಟ್ ಮಾಡಿದ್ದಾರೆ.
Viral Video: ಕಾರು- ಬೈಕು ಅಲ್ಲ, ವಿಮಾನವನ್ನೇ ತಳ್ಳಿ ಪಕ್ಕಕ್ಕಿರಿಸಿದ ಪ್ರಯಾಣಿಕರು: ವಿಡಿಯೋ ವೈರಲ್!
ಕಳೆದ ತಿಂಗಳು, ಸಣ್ಣ ಹುಡುಗಿ ಹಾಗೂ ಮಂಗವೊಂದು ಫೋನ್‌ಗಾಗಿ ಕಿತ್ತಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಹುಡುಗಿ ಮಂಚದ ಮೇಲೆ ಕುಳಿತಿದ್ದಾಗ ಮಂಗವೊಂದು ಬಂದು ಆಕೆಯ ಕೈಯಲ್ಲಿದ್ದ ಮೊಬೈಲ್ ತೆಗೆದುಕೊಳ್ಳುತ್ತದೆ. ಹುಡುಗಿ ಮರಳಿ ಮಂಗದ ಕೈಯಿಂದ ಮೊಬೈಲ್ ತೆಗೆದುಕೊಳ್ಳುವ ಮುನ್ನ ಮಂಗವೂ ಮೊಬೈಲ್‌ನತ್ತ ಭಾರಿ ಕುತೂಹಲದಿಂದ ನೋಡುತ್ತಿರುತ್ತದೆ. ಅಲ್ಲದೇ ಮತ್ತೆ ಆಕೆಯಿಂದ ಮೊಬೈಲ್ ಪಡೆಯುವ ಮಂಗ ಅದನ್ನು ತಬ್ಬಿ ಹಿಡಿದುಕೊಳ್ಳುತ್ತದೆ. ಒಟ್ಟಿನಲ್ಲಿ ಮಂಗಗಳು ಕೂಡ ಇತ್ತೀಚಿನ ದಿನಗಳಲ್ಲಿ ಮಾನವರಂತೆ ಸ್ಮಾರ್ಟ್ ಆಗುತ್ತಿರುವುದು ವಿಶೇಷವೆನಿಸಿದೆ.
ಇತ್ತೀಚೆಗೆ ನೇಪಾಳದಲ್ಲಿ ವಿಮಾನವೊಂದನ್ನು ಜನ ದೂಡಿ ಮುಂದೆ ಸಾಗಿಸಿದ್ದ ವಿಡಿಯೋ ವೈರಲ್ ಆಗಿತ್ತು. ಸಹಜವಾಗಿ ಬೈಕ್, ಕಾರ್ ಅಥವಾ ಯಾವುದೇ ವಾಹನ (Vehicle) ಸ್ಟಾರ್ಟ್ ಆಗದಿದ್ದಾಗ ಅಥವಾ ಟೈಯರ್ ಪಂಚರ್ ಅದಾಗ ಜನರು ಅದನ್ನು ತಳ್ಳಿ ಮುಂದೆ ಸಾಗಿಸಲು ಪ್ರಯತ್ನಿಸುತ್ತಾರೆ. ಆದರೆ ಟೈಯರ್ ಒಡೆದು ರನ್‌ವೇ (Run Way) ಮೇಲೆ ನಿಂತಿದ್ದ ವಿಮಾನವನ್ನೆ (Airplane) ರನ್‌ವೇಯಿಂದ ದೂರ ತಳ್ಳಲು ಪ್ರಯಾಣಿಕರ ಗುಂಪೊಂದು ಹರಸಾಹಸ ಪಡುತ್ತಿರುವ ವಿಡಿಯೋ (Viral Video)ಇದಾಗಿದ್ದು, ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ನೇಪಾಳದ (Nepal) ವಿಮಾನ ನಿಲ್ದಾಣದಲ್ಲಿ ನಡೆದಿರುವ ಘಟನೆ ಜನರಲ್ಲಿ ಅಚ್ಚರಿ ಮೂಡಿಸಿದೆ. ಈ ಕ್ಲಿಪ್ ಅನ್ನು ಸಾಮ್ರಾಟ್ ಎಂಬುವವರು ಟ್ವಿಟರ್‌ನಲ್ಲಿ (Twitter) ಹಂಚಿಕೊಂಡಿದ್ದಾರೆ. ಈಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Viral Video of The Ellen Show: ಆಸ್ಪತ್ರೆಯಲ್ಲಿ ರೋಗಿಗಳ ಒಂಟಿತನ ದೂರ ಮಾಡಲು ಮಿನಿ ಲೈಬ್ರರಿ ಆರಂಭಿಸಿದ 9ರ ಬಾಲಕ!
ತಾರಾ ಏರ್‌ಲೈನ್ಸ್‌ಗೆ (Tara Airlines) ಸೇರಿದ ವಿಮಾನ ವೀಡಿಯೊದಲ್ಲಿದೆ. ಪ್ರಯಾಣಿಕರು ವಿಮಾನವನ್ನು ರನ್‌ವೇಯಿಂದ ದೂರ ತಳ್ಳಲು ಪ್ರಯತ್ನಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಡ್ರೈವಿಂಗ್ ಸಮಯದಲ್ಲಿ ಟೈರ್ ಒಡೆದರೆ ಸಾಮಾನ್ಯವಾಗಿ ಹೆದ್ದಾರಿಗಳಲ್ಲಿ ವಾಹನದಿಂದ ಇಳಿದು ಗಾಡಿ ತಳ್ಳುವುದು ಕಂಡುಬರುತ್ತದೆ. ಆದರೆ ರನ್‌ವೇಯಲ್ಲಿ ಕೆಟ್ಟ ನಿಂತ ವಿಮಾನವನ್ನು ಜನರು ಕೈಯಿಂದ ತಳ್ಳುತ್ತಿರುವುದು ಆಶ್ಚರ್ಯವೇ ಸರಿ. ವಿಮಾನದ ಹಿಂಭಾಗದ ಟೈರ್ ರನ್‌ವೇಯಲ್ಲಿ ಬ್ಲಾಸ್ಟ್ ಆಗಿತ್ತು. ಆದ್ದರಿಂದ ಪ್ರಯಾಣಿಕರನ್ನು ಕೆಳಗಿಳಿಸಲಾಗಿತ್ತು ಹಾಗೂ ಲ್ಯಾಂಡಿಂಗ್ ಸ್ಟ್ರಿಪ್‌ನಿಂದ ವಿಮಾನವನ್ನು ತಳ್ಳಲು ಪ್ರಯತ್ನಿಸಲಾಗಿದೆ ಎಂದು ನೇಪಾಳದ ಖಾಸಗಿ ಮಾಧ್ಯಮವೊಂದು ವರದಿ ಮಾಡಿತ್ತು. ನೇಪಾಳದ ಬಾಜುರಾ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು.