ಮೀನಿಗೆ ಬೀರು ಕುಡಿಸಿದ ಕಿಡಿಗೇಡಿ: ವೀಡಿಯೋ ವೈರಲ್ ಆಗುತ್ತಿದ್ದಂತೆ ಆಕ್ರೋಶ

Published : Feb 27, 2025, 12:28 PM ISTUpdated : Feb 27, 2025, 12:45 PM IST
ಮೀನಿಗೆ ಬೀರು ಕುಡಿಸಿದ ಕಿಡಿಗೇಡಿ: ವೀಡಿಯೋ ವೈರಲ್ ಆಗುತ್ತಿದ್ದಂತೆ ಆಕ್ರೋಶ

ಸಾರಾಂಶ

ವ್ಯಕ್ತಿಯೊಬ್ಬ ದೊಡ್ಡ ಗಾತ್ರದ ಮೀನನ್ನು ಕೈಯಲ್ಲಿ ಹಿಡಿದು ಅದಕ್ಕೆ ಬಾಟಲಿಯಿಂದ ಬೀರು ಕುಡಿಸಿದ್ದಾನೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀಡಿಯೋಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. 

ಕೆಲವರು ಪ್ರಾಣಿಗಳಿಗೆ, ಪುಟ್ಟ ಮಕ್ಕಳಿಗೆ ಮದ್ಯ ಕುಡಿಸಿ ಮಜಾ ನೋಡುವ ವೀಡಿಯೋವನ್ನು ನೋಡಿದ್ದಿರಬಹುದು. ಆದರೆ ಇಲ್ಲೊಂದು ಕಡೆ ನೀರಿನಿಂದ ತೆಗೆದ ಮೀನಿಗೆ ವ್ಯಕ್ತಿಯೊಬ್ಬ ಬೀರು ಕುಡಿಸಿದ್ದಾನೆ. ನೀರಿನಲ್ಲಿರುವ ಮೀನು ನೀರು ಹಾಗೂ ಸಣ್ಣ ಪುಟ್ಟ ಆಹಾರವನ್ನು ಹೊರತುಪಡಿಸಿ ಬೇರೆನನ್ನು ಸೇವಿಸುವುದಿಲ್ಲ, ನೀರಿನ ಹೊರತಾದ ಯಾವುದೇ ಪಾನೀಯವೂ ಅದಕ್ಕೆ ಅಪಾಯಕಾರಿಯಾಗಿದೆ. ಹೀಗಿರುವಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋದಲ್ಲಿ ವ್ಯಕ್ತಿಯೊಬ್ಬ ದೊಡ್ಡ ಗಾತ್ರದ ಮೀನನ್ನು ಕೈಯಲ್ಲಿ ಹಿಡಿದು ಅದಕ್ಕೆ ಬಾಟಲಿಯಿಂದ ಬೀರು ಕುಡಿಸಿದ್ದಾನೆ. ನೀರಿನಿಂದ ಮೇಲೆ ಇರುವ ಮೀನು ಬಹುಶಃ ಜೀವ ಉಳಿಸಿಕೊಳ್ಳುವ ಅನಿವಾರ್ಯತೆಗೋ ಏನೋ  ಬೀರನ್ನು ನೀರಿನಂತೆ ಕುಡಿಯುತ್ತಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀಡಿಯೋಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. 

ಕೆಲವರು ಈ ವೀಡಿಯೋವನ್ನು ತಮಾಷೆಯಾಗಿ ತೆಗೆದುಕೊಂಡರೆ ಮತ್ತೆ ಕೆಲವರು ಈ ವೀಡಿಯೋಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ಪ್ರಾಣಿ ಹಿಂಸೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವರು ಬೀರು ಕುಡಿಯುತ್ತಿರುವ ಈ ಮೀನಿಗೆ ಕಿಂಗ್ ಫಿಶರ್ ಎಂದು ಕರೆದರೆ ಇನ್ನು ಕೆಲವರು ಇದು ಪ್ರಾಣಿ ಹಿಂದೆ ಎಂದಿದ್ದಾರೆ. ಈ ವೀಡಿಯೋ ನೋಡಿ ಪ್ರಾಣಿ ಹಿಂಸೆ ವಿರೋಧಿಸುವ ಪೇಟಾ ಅಳುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೆ ಕೆಲವರು ಈ ವೀಡಿಯೋವನ್ನು ಪೇಟಾಗೆ ಟ್ಯಾಗ್ ಮಾಡಿದ್ದಾರೆ. ಆದರೆ ಇದು ಯಾವಾಗ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ.

ಮೀನುಗಳು ನಿಜವಾಗಿಯೂ ಕುಡಿಯುತ್ತವೆಯೇ?
ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ (NYU) ಪ್ರಯೋಗಾಲಯ ನಡೆಸಿದ ಅಧ್ಯಯನಗಳಲ್ಲಿ ಸಾಮಾನ್ಯವಾಗಿ ಬಳಸಲಾಗುವ ಜೀಬ್ರಾ ಫಿಶ್ ಜಾತಿಯೊಂದಿಗೆ ನಡೆಸಿದ ಸಂಶೋಧನೆಯಲ್ಲಿ ಈ ಮೀನುಗಳು ಆಲ್ಕೋಹಾಲ್ (EtOH)ಗೆ ಒಡ್ಡಿಕೊಳ್ಳುವುದರಿಂದ ಅವುಗಳ ನಡವಳಿಕೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ತೋರಿಸಿದೆ.  ಸಾಮಾನ್ಯ ಮೀನುಗಳಿಗಿಂತ ಮದ್ಯ ಕುಡಿದ ಮೀನುಗಳು ಗುಂಪುಗಳಲ್ಲಿ ವೇಗವಾಗಿ ಈಜುತ್ತವೆಯಂತೆ ಆಗಾಗ್ಗೆ ಶಾಂತವಾಗಿರುವ ಮೀನುಗಳನ್ನು ಇನ್ನುಮುನ್ನಡೆಸುತ್ತವೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ಆದರೂ, ಹೆಚ್ಚಿನ ಆಲ್ಕೋಹಾಲ್ ಸೇವನೆಯಿಂದ ಮೀನುಗಳು ನಿದ್ರೆಯಂತೆ ಅಮಲಿನ ಪರಿಣಾಮಗಳನ್ನು ಪ್ರದರ್ಶಿಸಿದವು ಎಂದು ಈ ಸಂಶೋಧನೆ ವರದಿ ಮಾಡುತ್ತದೆ. 

ಮದ್ಯವು ಮೀನುಗಳಿಗೆ ಹಾನಿಕಾರಕವೇ?
ಮೀನುಗಳು ಹೆಚ್ಚಿನ ಸಾಂದ್ರತೆಗಳಿಗೆ ಒಡ್ಡಿಕೊಳ್ಳುವುದರಿಂದ ಮದ್ಯ ಸೇವನೆಯೂ ಮೀನುಗಳಿಗೆ ದಿಗ್ಭ್ರಮೆ, ದುರ್ಬಲವಾದ ಈಜು ಮತ್ತು ವಿಷವೇರುವ ಸಂಭವ ಇರುತ್ತದೆ. ಜರ್ನಲ್ ಆಫ್ ಎಕ್ಸ್‌ಪರಿಮೆಂಟಲ್ ಬಯಾಲಜಿಯಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಮೀನುಗಳು ಮದ್ಯವನ್ನು ಮನುಷ್ಯರಿಗಿಂತ ವಿಭಿನ್ನವಾಗಿ ಸಂಸ್ಕರಿಸುತ್ತವೆ, ಆದರೆ ದೀರ್ಘಕಾಲದವರೆಗೆ ಮದ್ಯ ಸೇವಿಸುವುದರಿಂದ ಅವುಗಳ ನರಮಂಡಲ ಮತ್ತು ಅಂಗಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದತಿ ಕೊಂಚ ಸರಿ ದಾರಿಗೆ
ಹಿಂದಿ ಹೇರಿಕೆ ಬಗ್ಗೆ ನ್ಯಾ। ನಾಗರತ್ನ ಬೇಸರ