ಕುದುರೆ ಏರಿ ಮದುವೆ ಮಂಟಪಕ್ಕೆ ಬಂದ ವಧು, ಬೇಷ್ ಎಂದ ನೆಟ್ಟಿಗರು!

By Suvarna News  |  First Published Dec 16, 2021, 11:12 AM IST
  • ಮದುವೆ ಮಂಟಪಕ್ಕೆ ಕುದುರೆ  ಏರಿ ಬಂದ ವಧು
  • ವಧು ಕುದುರೆ ಏರಿ ಬರುತ್ತಿರುವ ವಿಡಿಯೋ ವೈರಲ್‌
  • ಗಗನಸಖಿ ಆಗಿರುವ ವಧು ಅನುಷ್ಕಾ ಗುಹಾ

ಗಯಾ(ಡಿ.16):  ಮದುವೆ ಮಂಟಪಕ್ಕೆ ವಧುವೊಬ್ಬರು ಕುದುರೆ ಏರಿ ಬಂದ ಘಟನೆ ಬಿಹಾರದಲ್ಲಿ ನಡೆದಿದೆ. ಇಂಡಿಗೀ ಏರ್‌ಲೈನ್ಸ್‌ (Indigo airlines)ನಲ್ಲಿ ಹಿರಿಯ ಗಗನಸಖಿಯಾಗಿರುವ ಅನುಷ್ಕಾ ಗುಹಾ (Anushka Guha) ಎಂಬುವವರೆ ಹೀಗೆ ಕುದುರೆ ಸವಾರಿಯೊಂದಿಗೆ ದಿಬ್ಬಣ ಬಂದ ಮದುವೆ ಹೆಣ್ಣು. ಇವರು ತಮ್ಮ ಕುಟುಂಬದವರು ನೆಂಟರಿಷ್ಟರೊಂದಿಗೆ  ಗಯಾದಲ್ಲಿರುವ ಧರ್ಮಾಶಾಲಾದಲ್ಲಿ ಆಯೋಜಿಸಲಾಗಿದ್ದ ತಮ್ಮ ಮದುವೆಗೆ ಕುದುರೆ ಏರಿ ಬಂದಿದ್ದಾರೆ. ಹೀಗೆ ದಿಬ್ಬಣ ಹೊರಟ ಇವರಿಗೆ ಸಂಬಂಧಿಕರು ಹಾಗೂ ಸ್ನೇಹಿತರು ಮದುವೆ ಹಾಡುಗಳನ್ನು ಹಾಡುತ್ತಾ ಸಾಥ್‌ ನೀಡಿದ್ದಾರೆ. ವಧು ಅನುಷ್ಕಾ ಗುಹಾ ಕುದುರೆ ಸವಾರಿ ಮಾಡುತ್ತಿರುವ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು,  ನೆಟ್ಟಿಗರು ಭೇಷ್‌ ಎಂದಿದ್ದಾರೆ. 

ವಧು ಅನುಷ್ಕಾ ಗುಹಾ ಗಯಾದ ಛಾಂದ್‌ ಛೌರಾ(Chand Chaura) ಪ್ರದೇಶದವರು. ಇವರು ತಮ್ಮ ಮದುವೆಯ ಈ ವಿಶೇಷ ದಿನದಂದು ಶ್ವೇತ ಬಣ್ಣದ ಲೆಹೆಂಗಾ ಧರಿಸಿದ್ದರು. ಇನ್ನು ಅನುಷ್ಕಾ ಅವರ ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಅವರ ತಾಯಿ, ಅನುಷ್ಕಾ ಸಣ್ಣ ವಯಸ್ಸಿನಿಂದಲೂ ವರ ಕುದುರೆ ಸವಾರಿ ಮಾಡುತ್ತಾ ವಧುವಿನ ಮನೆಗೆ ಬರುವ ಸಂಪ್ರದಾಯವನ್ನು ಯಾವಾಗಲೂ ಪ್ರಶ್ನಿಸುತ್ತಲೇ ಇದ್ದಳು ಎಂದರು. 

बिहार: गया में एक दुल्हन ने घोड़ी पर चढ़कर अपनी बारात निकाली। (13.12) pic.twitter.com/7MmW7klciq

— ANI_HindiNews (@AHindinews)

Tap to resize

Latest Videos

 

ಹೀಗೆ ಕುದುರೆ ಸವಾರಿ ಮಾಡುತ್ತಾ ವಧು ಅನುಷ್ಕಾ ತನ್ನ ವರ ಕೋಲ್ಕತ್ತಾ(Kolkata) ಮೂಲದ ಉದ್ಯಮಿ ಜೀತ್‌ ಮುಖರ್ಜಿ (Jeet Mukharjee) ಅವರ ನಿವಾಸವನ್ನು ತಲುಪಿದ್ದಾರೆ. ಬಳಿಕ ವರ ಜೀತ್‌ ಮುಖರ್ಜಿ ಕಾರಿನಲ್ಲಿ ಬಂದು ಮದುವೆ ಸ್ಥಳ ಸೇರಿದ್ದಾರೆ. ಇನ್ನು ತಮ್ಮ ಈ ದಿಟ್ಟ ನಿರ್ಧಾರದ ಬಗ್ಗೆ ಮಾತನಾಡಿದ ವಧು ಅನುಷ್ಕಾ, ನಾನು ನನ್ನ ಗಂಡನನ್ನು ಪಡೆಯಲು ಹೋಗುತ್ತಿದ್ದೇನೆ. ಕುದುರೆ ಏರಿ ಬರುವ ಈ ಸಂಪ್ರದಾಯವನ್ನು ಬರೀ ಹುಡುಗರೇ ಮಾಡುತ್ತಾರೆ. ನಾನು ಹುಡುಗಿ ನಾನು ಕೂಡ ಏಕೆ ಕುದುರೆ ಏರಿ ಹೋಗ ಬಾರದು ಎಂದು ಎನಿಸಿತ್ತು. ನಾನು ಕುದುರೆ ಏರಿ ಬಂದಿರುವುದಕ್ಕೆ ಅವರೇನು ಅಸಮಾಧಾನ ವ್ಯಕ್ತಪಡಿಸಿಲ್ಲ ಅದಕ್ಕೆ ನಾನು ನನ್ನ ಪತಿಗೆ ಧನ್ಯವಾದ ತಿಳಿಸಲು ಬಯಸುತ್ತೇನೆ ಎಂದು ಅನುಷ್ಕಾ ಹೇಳಿದರು. 

Viral Video: ಮದುವೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ನವ ದಂಪತಿ

ಸಣ್ಣ ವಯಸ್ಸಿನಿಂದಲೂ ವರ ಕುದುರೆ ಏರಿ ಬರುವ ಸಂಪ್ರದಾಯವನ್ನು ಪ್ರಶ್ನಿಸುತ್ತಿದ್ದ ಅನುಷ್ಕಾ ಹೆಣ್ಣು ಮಕ್ಕಳು ಏಕೆ ಕುದುರೆ ಏರಿ ಹೋಗಬಾರದು ಎಂದು ಕೇಳುತ್ತಿದ್ದಳು. ಆಗ ನಾವು ಅವಳಿಗೆ ಇದು ಹಿಂದಿನ ತಲೆಮಾರಿನಿಂದಲೂ ನಡೆದು ಬಂದಂತಹ ಸಂಪ್ರದಾಯ ಎಂದು ಹೇಳುತ್ತಿದ್ದೆವು. ಆದರೆ ಅವಳು ಈ ಮಾತಿನಿಂದ ಸಮಾಧಾನಗೊಳ್ಳಲೇ ಇಲ್ಲ. ಅವಳು ತಾನು ಯಾವಾಗಲೂ ಈ ಸಂಪ್ರದಾಯವನ್ನು ಮುರಿದು ಅದಕ್ಕೆ ವಿರುದ್ಧ ಮಾಡುವುದಾಗಿ ಹೇಳುತ್ತಿದ್ದಳು. ಎಂದು ಆಕೆಯ ತಾಯಿ ಸುಶ್ಮಿತಾ ಗುಹಾ(Shusmita Guha) ಮಾಧ್ಯಮಗಳಿಗೆ ಹೇಳಿಕೆ ನೀಡಿದರು. 

ಈ ಬಗ್ಗೆ ಮಾತನಾಡಿದ ವರ ಜೀತ್‌ ಮುಖರ್ಜಿ ಅವರ ತಂದೆ, ಮಹಿಳೆಯರ ಸಮಾನತೆ (women equality) ಮತ್ತು ಹಕ್ಕುಗಳ ಬಗ್ಗೆ ಕೇವಲ ಮಾತನಾಡಿದರೆ ಸಾಕಾಗುವುದಿಲ್ಲ, ನಾವು ಅದನ್ನು ಜಾರಿಗೆ ತರಬೇಕು ಮತ್ತು ನಮ್ಮ ಹೆಣ್ಣು ಮಕ್ಕಳು ಬಯಸಿದರೆ ಅವರನ್ನು ಮೆರವಣಿಗೆಗೆ ಹೋಗಲು ಅವಕಾಶ ನೀಡಬೇಕು. ನಮ್ಮ ಸೊಸೆಯರಿಗೂ ಅದೇ ರೀತಿ ಮಾಡಲು ನಾವು ಬಿಡಬೇಕು ಎಂದು ವರನ ತಂದೆ ಸ್ಥಳೀಯ ಸುದ್ದಿಗಾರರಿಗೆ ತಿಳಿಸಿದರು. 

Viral Video: ಕುಸಿದು ಬಿತ್ತು ವಧುವರರಿದ್ದ ಎಲವೇಟೆಡ್‌ ಮದುವೆ ಮಂಟಪ

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದ್ದು, 8,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಒಬ್ಬ ಬಳಕೆದಾರ, 'ಶಭಾಶ್ ದೀದಿ. ಹಮಾರಿ ಛೋರಿಯನ್ ಛೋರೋ ಸೆ ಕಾಮ್ ಹೈ ಕ್ಯಾ!' ನಮ್ಮ ಹೆಣ್ಣು ಮಕ್ಕಳು ಗಂಡು ಮಕ್ಕಳಿಗಿಂತ ಯಾವುದರಲ್ಲಾದರೂ ಕಡಿಮೆ ಇದ್ದಾರೆಯೇ ಎಂದು ಕಾಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು "ದಿಲ್ವಾಲಿ ದುಲ್ಹಾ ಲೇ ಜಾಯೇಗಿ" ಎಂದು ಬರೆದಿದ್ದಾರೆ.

click me!