ಫೋನ್ ಪೇ, ಗೂಗಲ್‌ ಪೇ ಗೊತ್ತಿಲ್ಲ; 2 ವರ್ಷದ ಕಂದಮ್ಮನ ಬದುಕಿಸಲು ಹಣ ತುಂಬಿಕೊಂಡು 150 KM ದೂರ ಬಂದ ಪೋಸ್ಟ್ ಮಾಸ್ಟರ್

Published : Oct 06, 2026, 07:50 PM IST
Odisha's 58-Year-Old Postmaster Gives Entire Salary to Save 2-Year-Old Girl

ಸಾರಾಂಶ

ಇದೊಂದು ಹಾರ್ಟ್‌ ಟಚಿಂಗ್ ಸ್ಟೋರಿ. ಪೋಸ್ಟ್ ಮಾಸ್ಟರ್ ಒಬ್ಬರು 2 ವರ್ಷದ ಮಗುವನ್ನು ಉಳಿಸಲು ಬರೋಬ್ಬರಿ 150 ಕಿಲೋ ಮೀಟರ್ ಪ್ರಯಾಣ ಮಾಡಿದ್ದಾರೆ. ತಮ್ಮ ಬಳಿ ಕೂಡಿಟ್ಟಿದ್ದ ಅಷ್ಟೂ ಹಣವನ್ನ ಬ್ಯಾಗ್‌ನಲ್ಲಿ ತುಂಬಿ ಮಗುವಿನ ತಂದೆಯ ಕೈಗೆ ಕೊಟ್ಟಿದ್ದಾರೆ! ಆಗಿದ್ದೇನು? ಸ್ಟೋರಿ ಓದಿ...

ಪ್ರಕರಣ ನಡೆದಿರೋದು ಓಡಿಶಾದಲ್ಲಿ! 58 ವರ್ಷದ ಪೋಸ್ಟ್ ಮಾಸ್ಟರ್ (Post Master). ಹೆಸರು ಬಿಮಲ್ ಕುಮಾರ್ ಸಾಹು (Bimal Kumar). ಧೆಂಕನಲ್ ಜಿಲ್ಲೆಯ ಗಾಂಡಿಯಾ ಬ್ಲಾಕ್‌ನಲ್ಲಿರುವ ಪಿಂಗುವಾ ಸಬ್-ಪೋಸ್ಟ್ ಆಫೀಸ್‌ನಲ್ಲಿ ಪೋಸ್ಟ್ ಮಾಸ್ಟರ್ ಆಗಿದ್ದು, ನಿವೃತ್ತಿ ಅಂಚಿನ ವಯಸ್ಸಿನಲ್ಲಿದ್ದಾರೆ. ಸಾವು ಬದುಕಿನ ನಡುವೆ ಹೋರಾಟ ನಡೆಸ್ತಿದ್ದ ಪರರ ಮಗುವಿನ ಸುದ್ದಿ ತಿಳಿದು 150 ಕಿಲೋ ಮೀಟರ್ ಪ್ರಯಾಣ ಬೆಳಸಿ ತಮ್ಮ ಕೈಯಲ್ಲಿ ಆಗಿರುವ ಸಹಾಯ ಮಾಡಿ ಬಂದಿದ್ದಾರೆ.

ಮಗುವಿಗೆ ಏನಾಗಿದೆ..?

ಎರಡು ವರ್ಷದ ಬಾಲಕಿ ಹೆಸರು ತ್ರಿಷಿಕಾ. ಜಾಜ್‌ಪುರ ಜಿಲ್ಲೆಯವಳು. ಈ ಪುಟ್ಟ ಬಾಲಕಿ ಬಗ್ಗೆ ದೂರದರ್ಶನದಲ್ಲಿ ವರದಿಯೊಂದು ಬಿತ್ತರವಾಗಿತ್ತು. ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ (SMA) ಟೈಪ್ 2 ಎಂಬ ಅಪರೂಪದ ಕಾಯಿಲೆಗೆ ಒಳಗಾಗಿದ್ದಾಳೆ. ವೈದ್ಯರು ಬಾಲಕಿಯ ಸಂಪೂರ್ಣ ಚಿಕತ್ಸೆಗೆ 16 ಕೋಟಿ ಹಣದ ಅಗತ್ಯ ಇದೆ ಎಂದು ತಿಳಿಸಿದ್ದಾರೆ ಕೈಯಲ್ಲಿ ಆದವರು ಸಹಾಯ ಮಾಡಿ ಎಂಬ ಸುದ್ದಿ ಬಿತ್ತರವಾಗಿತ್ತು.

ಸುದ್ದಿ ನೋಡುತ್ತಿದ್ದಂತೆಯ ಬಿಮಲ್ ಕುಮಾರ್ ಸಾಹುಗೆ ಸಹಾಯ ಮಾಡುವ ಮನಸ್ಸು ಆಗಿದೆ. ಹೇಗಾದರೂ ಮಾಡಿ ಆ ಮಗುವನ್ನ ಬದುಕಿಸಲು ತನ್ನದೂ ಅಳಿಲು ಸೇವೆ ಇರಲಿ ಎಂದು ಚಡಪಡಿಸಿದ್ದಾರೆ. ಅವರು ಯಾವುದೇ ಫೋನ್ ಪೇ, ಗೂಗಲ್ ಪೇನಂತಹ ಯಾವುದೇ ಮೊಬೈಲ್ ಆಪ್‌ಗಳನ್ನ ಬಳಸೋದಿಲ್ಲ. ಹೀಗಾಗಿ ಅವರು ಏನು ಮಾಡೋದು ಅಂತಾ ಗೊತ್ತಾಗದೇ ಬೈಕ್‌ನಲ್ಲಿ ಹಣ ತುಂಬಿಕೊಂಡು ಒಡಿಯ ಖಾಸಗಿ ನ್ಯೂಸ್ ಚಾನಲ್‌ ಒಂದರ ಮುಂದೆ ಬಂದು ನಿಂತಿದ್ದಾರೆ.

ಅವರೇ ಹೇಳುವಂತೆ.. ಹಣವನ್ನು ಎಲ್ಲಿಗೆ ಮತ್ತು ಹೇಗೆ ಕಳುಹಿಸುವುದು ಎಂದು ಯೋಚಿಸುವ ಬದಲು, ನಾನೇ ಅಲ್ಲಿಗೆ ಹೋಗಿ ಅದನ್ನು ಹಸ್ತಾಂತರಿಸುವುದು ಉತ್ತಮ ಎಂದು ನಾನು ಭಾವಿಸಿದೆ ಅದಕ್ಕಾಗಿ ಬಂದುಬಿಟ್ಟೆ ಎಂದಿದ್ದಾರೆ. ಖಾಸಗಿ ಚಾನಲ್ ಅಧಿಕಾರಿಗಳ ಮುಂದೆ ತಾವು ಯಾಕೆ ಬಂದಿದ್ದೇನೆ ಎಂಬ ವಿಚಾರವನ್ನು ತಿಳಿಸಿದ್ದಾರೆ.

ನಂತರ ಆ ಖಾಸಗಿ ಸುದ್ದಿವಾಹಿನಿ ಸಹಾಯ ಕೋರಿದ್ದ 2 ವರ್ಷದ ಮಗುವನ್ನ ಕಚೇರಿಗೆ ಕರೆಸಿ ಬಿಮಲ್ ಕುಮಾರ್ ಸಾಹು ಅವರಿಂದಲೇ 26,304 ಹಣವನ್ನು ಹಸ್ತಾಂತರ ಮಾಡಿದ್ದಾರೆ. ಮಗುವಿಗೆ ಬೇಕಾದ ಚಿಕಿತ್ಸೆಯ ಹಣಕ್ಕೆ ಹೋಲಿಸಿದರೆ 26 ಸಾವಿರ ತುಂಬಾ ಚಿಕ್ಕದಾಗಿ ಕಾಣಬಹುದು. ಆದರೆ ಸಾಹುಗೆ ಅದು ಅವರ ಸಾಮರ್ಥ್ಯಕ್ಕಿಂತ ದೊಡ್ಡದಾಗಿದೆ. ಅಲ್ಲದೇ ಕಷ್ಟದಲ್ಲಿದ್ದವರಿಗೆ ಒಂದೂ ರೂಪಾಯಿ ಹಣವನ್ನೂ ಬಿಚ್ಚ ಜನರ ಮಧ್ಯೆ ಸಾಹು ಇಳಿ ವಯಸ್ಸಿನಲ್ಲೂ ಹೀರೋ ಆದರು.

ನಿವೃತ್ತಿ ಅಂಚಿನಲ್ಲಿ ಒಂದು ಸಂದೇಶ

ಸಾಹು ತಮ್ಮ ಅಂಚೆ ಸೇವಾ ಕೆಲಸದಿಂದ ನಿವೃತ್ತಿ ಹೊಂದಲು ಕೆಲವೇ ದಿನಗಳ ಬಾಕಿ ಇದೆ. ಸಾಧಾರಣ ಆದಾಯ ಮತ್ತು ಡಿಜಿಟಲ್ ಪಾವತಿ ಅಪ್ಲಿಕೇಶನ್‌ಗಳ ಬಗ್ಗೆ ಗಂಧ ಗಾಳಿಯೇ ಇಲ್ಲ. ಹೀಗಾಗಿ ತಮ್ಮ ಬಳಿಯಿರುವ ಹಣವನ್ನು ಹೇಗೆ ನೀಡಬೇಕು ಅನ್ನೋದು ಗೊತ್ತಿರಲಿಲ್ಲ. ಅದೇ ಕಾರಣಕ್ಕೆ ಸ್ಕೂಟರ್‍‌ ಡಿಕ್ಕಿಯೊಳಗೆ ಹಣ ತುಂಬಿ ಟಿವಿ ಚಾನಲ್ ಒಂದರ ಬಾಗಿಲು ತಟ್ಟಿ ಸಹಾಯ ಮಾಡಿದ್ದಾರೆ. ಇತ್ತ, ತ್ರಿಷಿಕಾ ಕುಟುಂಬ ನಿಧಿಸಂಗ್ರಹಣೆ ಪ್ರಯತ್ನವನ್ನು ಮುಂದುವರಿಸಿದೆ. ಕೆಲವು ವರದಿಗಳ ಪ್ರಕಾರ.. ಇಲ್ಲಿಯವರೆಗೆ 6 ಕೋಟಿ ರೂಪಾಯಿ ಹಣ ಸಂಗ್ರಹ ಆಗಿದೆ. ಇನ್ನೂ 10 ಕೋಟಿ ಹಣದ ಅಗತ್ಯ ಇದೆ ಎಂದು ವರದಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Bullet ರೈಲಿಗೂ ತಗಲಿತೇ ವಿಳಂಬದ ಗ್ರಹಣ? ಜಪಾನ್ ಆರೋಪ, ಭಾರತದ ತಿರುಗೇಟು! ಹೈ-ಸ್ಪೀಡ್ ಯೋಜನೆಗೆ ತಾಂತ್ರಿಕ 'ಬ್ರೇಕ್'!
‘ನಮ್ಮನ್ನು ನೋಡಿಕೊಳ್ಳಲಿ’ ಎಂದು ಮಗನನ್ನು ದತ್ತು ಪಡೆದ ದಂಪತಿ; ಇಂದು ಮನೆ ಕಳೆದುಕೊಂಡು ನ್ಯಾಯಕ್ಕಾಗಿ ಅಲೆದಾಟ!