
ಬೆಂಗಳೂರು (ಮಾ.19): ಪ್ರಿ-ವೆಡಿಂಗ್ ಫೋಟೋಶೂಟ್‌ಗಳು ದಿನದಿಂದ ದಿನಕ್ಕೆ ಹೊಸ ಆಯಾಮ ಪಡೆಯುತ್ತಿವೆ. ಆದರೆ "ಸಿನೆಮ್ಯಾಟಿಕ್" ಆಗಿ ಕಾಣಿಸಿಕೊಳ್ಳುವ ಭರದಲ್ಲಿ ಜೋಡಿಯೊಂದು ಮಾಡಿದ ಸಾಹಸ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಹಾಸ್ಯಕ್ಕೆ ಆಹಾರವಾಗಿದೆ. ಕೆಸರು ನೀರಿನಲ್ಲಿ ಈ ಜೋಡಿ ಮಾಡಿದ ಭಂಗಿಯನ್ನು ಕಂಡು ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.'ಎಕ್ಸ್' (X) ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ, ನವಜೋಡಿಯು ಕಡು ಕೆಸರು ಮಿಶ್ರಿತ ನೀರಿನಲ್ಲಿ ಕಣ್ಣು ಮುಚ್ಚಿ ಮಲಗಿದ್ದಾರೆ. ನೋಡಲು ಇವರು ತೇಲುತ್ತಿರುವಂತೆ ಕಂಡರೂ, ಶವಗಳಂತೆ ಮಲಗಿರುವ ಈ ದೃಶ್ಯ ರೋಮ್ಯಾಂಟಿಕ್ ಎನಿಸುವ ಬದಲು ವಿಚಿತ್ರವಾಗಿ ಕಾಣುತ್ತಿದೆ. ಇನ್ನು ಮೊಣಕಾಲಿನವರೆಗೆ ಕೆಸರಿನಲ್ಲೇ ನಿಂತಿರುವ ಫೋಟೋಗ್ರಾಫರ್ಸ್ ತಂಡವು ಬಹಳ ಗಂಭೀರವಾಗಿ ಇವರಿಗೆ ಪೋಸ್ ನೀಡಲು ಸೂಚನೆ ಕೊಡುತ್ತಿರುವುದು ವಿಡಿಯೋದಲ್ಲಿದೆ.
ಪ್ರೀತಿ ಅನಂತ ಎಂದು ಬಿಂಬಿಸಲು ಹೋದ ಈ ಜೋಡಿಗೆ ಈಗ ನೆಟ್ಟಿಗರು "ಪ್ರಿ-ವೆಡಿಂಗ್ ಶೂಟ್‌ಗಳು ಅತಿಯಾದ ವಿಚಿತ್ರ ಹಂತಕ್ಕೆ ತಲುಪುತ್ತಿವೆ" ಎಂದು ಕಾಲೆಳೆಯುತ್ತಿದ್ದಾರೆ. ಈ ವಿಡಿಯೋ ಎಲ್ಲಿಯದು ಮತ್ತು ಯಾವಾಗ ಚಿತ್ರೀಕರಿಸಲಾಗಿದೆ ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.
ಈ ಫೋಟೋಶೂಟ್‌ನ ಉದ್ದೇಶ ರೋಮ್ಯಾಂಟಿಕ್ ಆಗಿರಬಹುದು, ಆದರೆ ಜನರ ಕಣ್ಣಿಗೆ ಮಾತ್ರ ಇದು ಯಾವುದೋ 'ಸರ್ವೈವಲ್ ಥ್ರಿಲ್ಲರ್' ಸಿನೆಮಾದ ಆರಂಭಿಕ ದೃಶ್ಯದಂತೆ ಅಥವಾ ಯಾವುದೋ ಒಂದು 'ಕ್ರೈಮ್ ಸೀನ್'ನಂತೆ ಕಾಣುತ್ತಿದೆ. ಈ ವಿಚಿತ್ರ ಪರಿಕಲ್ಪನೆಯು ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌ಗಳ ಸುರಿಮಳೆಗೇ ಕಾರಣವಾಗಿದೆ.
ಸೃಜನಶೀಲತೆ ಮತ್ತು ಗೊಂದಲದ ನಡುವಿನ ಗೆರೆ ಇಲ್ಲಿ ಅಳಿಸಿಹೋಗಿದೆ ಎಂದು ಅನೇಕರು ಪ್ರಶ್ನಿಸಿದ್ದಾರೆ. ಆದರೆ ಕೆಲವು ಫೋಟೋಗ್ರಾಫರ್‌ಗಳು ಮಾತ್ರ "ಇದೊಂದು ಹೊಸ ಸಿನೆಮ್ಯಾಟಿಕ್ ಸ್ಟೈಲ್, ಹಳೆಯ ಮಾದರಿಯ ಶೂಟ್‌ಗಳಿಗಿಂತ ಇದು ಭಿನ್ನವಾಗಿದೆ" ಎಂದು ಜೋಡಿಯ ಬೆಂಬಲಕ್ಕೆ ನಿಂತಿದ್ದಾರೆ.
ಒಬ್ಬ ಯೂಸರ್, "ನೀವು ವೈಲ್ಡ್‌ಲೈಫ್ ಫೋಟೋಗ್ರಾಫರ್ ಆಗಲು ಕಲಿತು, ಕೊನೆಗೆ ವೆಡಿಂಗ್ ಫೋಟೋಗ್ರಾಫರ್ ಆದರೆ ಹೀಗೆ ಆಗುವುದು!" ಎಂದು ಕಾಲೆಳೆದಿದ್ದಾರೆ. "ಬಜೆಟ್ 'ಸಿಂಪಲ್ ಫೋಟೋಶೂಟ್' ಎನ್ನುತ್ತಿದೆ, ಆದರೆ ಡೈರೆಕ್ಟರ್ 'ಟೈಟಾನಿಕ್ ಮತ್ತು ಗಂಗ್ನಮ್ ಸ್ಟೈಲ್' ಮಿಶ್ರಣ ಎನ್ನುತ್ತಿದ್ದಾರೆ. ಮುಂದಿನ ಹಂತದಲ್ಲಿ ಬಹುಶಃ ಜೋಡಿಯು ರೋಮ್ಯಾಂಟಿಕ್ ಆಗಿ ಮುಳುಗುತ್ತಿದ್ದರೆ ಡ್ರೋನ್ ಮೂಲಕ 8K ನಲ್ಲಿ ಶೂಟ್ ಮಾಡಬಹುದು!" ಎಂದು ತಮಾಷೆ ಮಾಡಿದ್ದಾರೆ. "ಇಷ್ಟೆಲ್ಲಾ ರಿಸ್ಕ್ ತೆಗೆದುಕೊಂಡು ಹಣ ಪೋಲು ಮಾಡುವುದೇಕೆ? ಎಐ (AI) ಮೂಲಕ ನಿಮಗೆ ಬೇಕಾದ ಹಾಗೆ ಎಡಿಟ್ ಮಾಡಿಸಿಕೊಳ್ಳಬಹುದಲ್ಲವೇ?" ಎಂದು ಪ್ರಶ್ನಿಸಿದ್ದಾರೆ. "ಇವರು ಮದುವೆಯಾಗುತ್ತಿದ್ದಾರಾ ಅಥವಾ ಇದು 'ಕ್ರೈಮ್ ಪೆಟ್ರೋಲ್' ಮುಂದಿನ ಸೀಸನ್‌ನ ತುಣುಕೇ?" ಎಂದು ಲೇವಡಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ