ಕೊರೋನಾ ರೋಗಿಗಳಿಗಾಗಿ ಊಟ ತಯಾರಿಸಿದ ತಾಯಿ: 'ಖುಷಿಯಾಗಿರಿ' ಎಂದ ಮಗು!

By Suvarna NewsFirst Published May 19, 2021, 2:15 PM IST
Highlights

* ದೇಶದಲ್ಲಿ ಕೊರೋನಾ ಅಬ್ಬರ

* ಕೊರೋನಾ ಪೀಡಿತರಿಗೆ ಸಹಾಯ ಮಾಡುತ್ತಿರುವ ಜನ ಸಾಮಾನ್ಯರು 

* ಕೊರೋನಾ ರೋಗಿಗಳಿಗಾಗಿ ಊಟ ತಯಾರಿಸಿದ ತಾಯಿ: 'ಖುಷಿಯಾಗಿರಿ' ಎಂದ ಮಗು!

ನವದೆಹಲಿ(ಮೇ.19): ಕೊರೋನಾ ಪೀಡಿತರಿಗಾಗಿ ತಾಯಿ ತಯಾರಿಸಿದ ಊಟದ ಡಬ್ಬಿಯಲ್ಲಿ ಬಾಲಕನೊಬ್ಬ ಬರೆದ ಸಂದೇಶ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಮನಗೆಲ್ಲುತ್ತಿದೆ. ಊಟದ ತಿಂಡಿಯಲ್ಲಿ ಖುಚಷಿಯಾಗಿರಿ ಎಂದು ಪುಟ್ಟ ಬಾಲಕನೊಬ್ಬ ಬರೆಯುತ್ತಿರುವ ಫೋಟೋ ವೈರಲ್ ಆಗಿದೆ. ಬಾಲಕನ ಈ ಹೃದಯ ವೈಶಾಲ್ಯತೆಗೆ ಜನರು ಭೇಷ್ ಎಂದಿದ್ದಾರೆ. ಭಾರತ ಸಂಕಷ್ಟವನ್ನೆದುರಿಸುತ್ತಿರುವಾಗ ಬಾಲಕನ ಈ ಫೋಟೋ ಜನರ ಮನದಲ್ಲಿ ಭರವಸೆಯ ಬೆಳಕಾಗಿದೆ.

ಕಳೆದೆರಡು ದಿನದ ಹಿಂದೆ ಈ ಬಾಲಕನ ಫೋಟೋ ಫೇಸ್‌ಬುಕ್, ಟ್ವಿಟರ್, ರೆಡಿಟ್‌ನಲ್ಲಿ ಶೇರ್ ಆಗಿದ್ದು, ಸಾವಿರಾರು ಮಂದಿಯನ್ನು ಇದು ತಲುಪಿದೆ. 

इस बच्चे की माँ Covid patient के लिए खाना बनाती है और यह प्यारा बच्चा खाने वाली हर packing पर उनके लिये खुश रहिए लिखता है 😊✌️😊 pic.twitter.com/mTZ10jJR4y

— Thinker!!!!! (@manishsarangal1)

Latest Videos

ಹಸಿರು ಬಣ್ಣದ ಟೀ ಶರ್ಟ್ ಧರಿಸಿದ ಬಾಲಕ ತನ್ನ ತಾಯಿ ತಯಾರಿಸಿಟ್ಟ ಈ ಊಟದ ಡಬ್ಬದ ಮೇಲೆ ಈ ಸಂದೇಶದ ಜೊತೆ ನಗುವ ಚಿತ್ರವನ್ನೂ ಮಾಡಿದ್ದು, ಕೊರೋನಾ ರೋಗಿಗಳ ಮನೋಬಲ ಹೆಚ್ಚಿಸುವಂತೆ ಮಾಡಿದೆ. @ manishsarangal1 ಹೆಸರಿನ ಟ್ವಿಟರ್‌ ಖಾತೆಯಿಂದ ಈ ಫೋಟೋ ಶೇರ್ ಮಾಡಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!