
ಇವತ್ತು ಪ್ರಪಂಚದ ಅನೇಕ ಭಾಗಗಳಲ್ಲಿ ನಿರ್ಮಾಣವಾಗಿರುವ ಉದ್ವಿಗ್ನತೆಗೆ ಪರಿಹಾರ ಭಾರತದಲ್ಲಿ ಮಾತ್ರ ಇದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ(RSS) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ನಾಗ್ಪುರದಲ್ಲಿ ಮಂಗಳವಾರ (ಅ.20)ರಂದು ನಡೆದ ವಿಜಯದಶಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್ ಅವರು, ನಾವು(ಭಾರತೀಯರು) ಯಾವಾಗೆಲ್ಲಾ ವಿಭಜಿತರಾಗಿದ್ದೇವೋ ಆಗೆಲ್ಲ ದುರ್ಬಲಗೊಂಡಿದ್ದೇವೆ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಭಾರತದ ಯುವಜನತೆ ಬಗ್ಗೆ ಪ್ರಸ್ತಾಪಿಸಿದ ಭಾಗವತ್, ಇಂದಿನ ಹೊಸ ಪೀಳಿಗೆಯು ಹಲವು ಮೂಲಗಳಿಂದ ಮಾಹಿತಿಯನ್ನು ಸ್ವೀಕರಿಸುವಾಗ ಯಾವುದು ಸೂಕ್ತ, ಯಾವುದು ಸೂಕ್ತವಲ್ಲ, ಯಾವುದು ನಿಜ, ಯಾವುದು ಸುಳ್ಳು ಎಂಬುದರ ನಡುವೆ ವ್ಯತ್ಯಾಸವನ್ನು ಗುರುತಿಸದೆ ಎಲ್ಲವನ್ನೂ ಒಪ್ಪಿಕೊಳ್ಳುತ್ತದೆ ಎಂದು ಗಮನಸೆಳೆದರು. ಅಲ್ಲದೆ ಸಾಮಾಜಿಕ ಜಾಲತಾಣಗಳು ಮತ್ತು ಒಟಿಟಿ (OTT) ಪ್ಲಾಟ್‌ಫಾರಂಗಳಲ್ಲಿ ನಿಯಮಾವಳಿಗಳನ್ನು ರೂಪಿಸುವ ಅಗತ್ಯವನ್ನೂ ಮುಖ್ಯವಾಗಿ ತಿಳಿಸಿದರು.
ಇಂದಿನ ಯುವಕರು ಎಲ್ಲವನ್ನೂ ಕಲಿಯಲು ಬಯಸ್ತಾರೆ. ಕಲಿಯುವ ಭರದಲ್ಲಿ ಅವರು ಯಾವುದು ತಪ್ಪು, ಯಾವುದು ಸರಿ ಎಂಬ ವ್ಯತ್ಯಾಸವನ್ನು ಅರಿಯದೆ ಎಲ್ಲವನ್ನೂ ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಇದರಿಂದ ಉಂಟಾಗುವ ದುಷ್ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು, ಅನೇಕ ದೇಶಗಳು ಸಾಮಾಜಿಕ ಜಾಲತಾಣಗಳು ಮತ್ತು ಒಟಿಟಿ (OTT) ಪ್ಲಾಟ್‌ಫಾರಂ ಕುರಿತು ನಿಯಂತ್ರಣಗಳನ್ನು ಜಾರಿಗೆ ತಂದಿವೆ. ನಮ್ಮ ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಎಂದರು.
ಸಂಘವು ನೂರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕಾರ್ಯವು 'ಸ್ವ'ವನ್ನು ಜಾಗೃತಗೊಳಿಸುವ ಗುರಿಯನ್ನು ಹೊಂದಿದೆ. ಇದು ಈ 'ಸ್ವ'ದ ಅಸ್ಮಿತೆ ಮತ್ತು ಇತಿಹಾಸದಲ್ಲಿ ಬೇರೂರಿರುವ, ಭಾರತವನ್ನು ಸಂಘಟಿಸುವ ಮತ್ತು ಸಬಲೀಕರಣಗೊಳಿಸುವ ಒಂದು ಪ್ರಯತ್ನವಾಗಿದೆ. ನಮ್ಮ ಗೌರವಾನ್ವಿತ ಪ್ರಾಂತ ಸಂಘಚಾಲಕರು ತಮ್ಮ ಆರಂಭಿಕ ನುಡಿಗಳಲ್ಲಿ 'ಪಂಚ ಪರಿವರ್ತನೆ'ಗಳ ಬಗ್ಗೆ ಪ್ರಸ್ತಾಪಿಸಿದರು ಅದರರ್ಥ; 'ಸ್ವಬೋಧ' (ತನ್ನ ಅಸ್ತಿತ್ವದ ಅರಿವು) ಜಾಗೃತಿ ಮತ್ತು 'ಸ್ವದೇಶಿ' (ಸ್ವಾವಲಂಬಿ ಜೀವನಶೈಲಿ) ಪಾಲನೆ. ಈ 'ಸ್ವ'ದ ಪರಿಕಲ್ಪನೆಯು ನಮ್ಮ ಸಂವಿಧಾನದ ಪೀಠಿಕೆಯಲ್ಲಿಯೂ ಪ್ರತಿಧ್ವನಿಸುತ್ತದೆ. ಅಲ್ಲಿ ನಾವು ನಮ್ಮನ್ನು 'ಭಾರತದ ಜನಗಳಾದ ನಾವು' (We, the People of India) ಎಂದು ಕರೆದುಕೊಂಡಿದ್ದೇವೆ' ಎಂದು ವಿವರಿಸಿದರು.
VIDEO | Nagpur: At Vijayadashami Utsav, RSS chief Mohan Bhagwat says, “…We became divided and weakened. Then we kept falling lower and lower, until we had to endure hundreds of years of slavery. Now, after gaining freedom from that slavery through the tremendous efforts and sacrifices of many great leaders and countless people, we have begun walking on the path of unity and progress. Therefore, we must strengthen that emotional bond among us, a bond whose continual reinforcement is itself mentioned in our Constitution, in the chapter on the Directive Principles of State Policy…The Chief Guest mentioned the atmosphere that existed at the time of India's independence and during the founding of the Rashtriya Swayamsevak Sangh (RSS). It was a different era…Today, the circumstances demand even greater effort than what was required then. When we look at the present situation, this becomes evident.”
He added, “India is a land of diversity. It has immense natural diversity, as well as diversity in faiths, regions, castes, languages, food habits, customs, and traditions. If this country is to continue moving forward as one, as it has throughout history and will continue to do, then it needs a foundational principle that accepts and embraces all these diversities.”
(Source: Third Party)
(Full video available on PTI Videos - https://t.co/bIyFWTfmBd)
— Press Trust of India (@PTI_News) October 20, 2026
ಈ ಒಗ್ಗಟ್ಟಿನ ಭಾವನೆ ನಮ್ಮ ಈ 'ಸ್ವತ್ವ', ಈ ಭಾವನಾತ್ಮಕ ಬಂಧ ಇದೇ ಕಾರಣದಿಂದಾಗಿ ನಮ್ಮಂತಹ ವೈವಿಧ್ಯಮಯ ದೇಶವು ಪ್ರಾಚೀನ ಕಾಲದಿಂದಲೂ ಒಂದು ರಾಷ್ಟ್ರವಾಗಿ, ಒಂದು ಸಮಾಜವಾಗಿ ಮತ್ತು ಒಂದೇ ಅಸ್ತಿತ್ವವಾಗಿ ಉಳಿದುಕೊಂಡು ಬರಲು ಸಾಧ್ಯವಾಗಿದೆ. ನಮ್ಮ ಪೂರ್ವಜರಿಗೆ ಸಮಸ್ತ ಅಸ್ತಿತ್ವದ ಏಕತೆಯ ಬಗ್ಗೆ ಆಳವಾದ ಅರಿವಿತ್ತು; ಈ ಅರಿವಿನ ಆಧಾರದ ಮೇಲೆ, ಅವರು ವಿವಿಧ ಹಂತಗಳನ್ನು ಒಳಗೊಂಡ ಒಂದು ಪ್ರಬುದ್ಧ ತತ್ತ್ವಜ್ಞಾನವನ್ನು ರೂಪಿಸಿದರು. ಇದು ಜನರಲ್ಲಿ ಪರಸ್ಪರ ಸಂಬಂಧ ಮತ್ತು ಒಡೆತನದ (ತಮ್ಮವರೆಂಬ) ಭಾವನೆಯನ್ನು ಬೆಳೆಸಿತು. ನಾವು ಯಾವಾಗ ಈ ಸಂಗತಿಯನ್ನು ಮರೆತೇವೆಯೋ, ಆಗಲೇ ನಮ್ಮ ಅವನತಿ ಪ್ರಾರಂಭವಾಯಿತು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ