Thalapathy Vijay: ಕರೂರು ಕಾಲ್ತುಳಿತಕ್ಕೆ ಸ್ಟ್ಯಾಲಿನ್‌ ನೇರ ಕಾರಣ ಎಂದ ವಿಜಯ್‌ ಜೋಸೆಫ್‌!

Published : Sep 30, 2025, 04:52 PM IST
Vijay Joseph TVK

ಸಾರಾಂಶ

Vijay Blames Stalin for Karur Stampede FIR ಪಕ್ಷದ ರಾಲಿ ವೇಳೆ ನಡೆದ ಕಾಲ್ತುಳಿತದಲ್ಲಿ 41 ಮಂದಿ ಮೃತಪಟ್ಟ ಘಟನೆಗೆ ಸಂಬಂಧಿಸಿ ನಟ ವಿಜಯ್ ವೀಡಿಯೊ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಘಟನೆಗೆ ತೀವ್ರ ದುಃಖ ವ್ಯಕ್ತಪಡಿಸಿರುವ ಅವರು, ಇದೊಂದು ರಾಜಕೀಯ ಪಿತೂರಿ ಎಂದಿದ್ದಾರೆ.

ಚೆನ್ನೈ (ಸೆ.30): ಪಕ್ಷದ ರಾಲಿ ವೇಳೆ ಸಂಭವಿಷ್ಯದ ಕಾಲ್ತುಳಿತದಲ್ಲಿ 41 ಮಂದಿ ದಾರುಣವಾಗಿ ಸಾವು ಕಂಡ ಮೂರು ದಿನಗಳ ಬಳಿಕ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಜೋಸೆಫ್‌ ತಮ್ಮ ಮೊದಲ ವೀಡಿಯೊ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಘಟನೆಯ ಕುರಿತಾಗಿ ನಡೆಯುತ್ತಿರುವ ರಾಜಕೀಯ ವಿವಾದಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

"ನನ್ನ ಜೀವನದಲ್ಲಿ ಇಂತಹ ನೋವಿನ ಪರಿಸ್ಥಿತಿಯನ್ನು ನಾನು ಎಂದಿಗೂ ಎದುರಿಸಿಲ್ಲ. ನನ್ನ ಹೃದಯ ನೋವು ಅನುಭವಿಸುತ್ತಿದೆ. ನನ್ನ ಹೃದಯದಲ್ಲಿ ನೋವು ಬಿಟ್ಟರೆ ಮತ್ತೇನೂ ಇಲ್ಲ. ಜನರು ಪ್ರಚಾರದಲ್ಲಿ ನನ್ನನ್ನು ನೋಡಲು ಬಂದರು. ಜನರು ನನ್ನ ಮೇಲೆ ಇಟ್ಟಿರುವ ಪ್ರೀತಿ ಮತ್ತು ವಾತ್ಸಲ್ಯಕ್ಕೆ ನಾನು ಯಾವಾಗಲೂ ಕೃತಜ್ಞನಾಗಿದ್ದೇನೆ. ಜನರ ಸುರಕ್ಷತೆಯ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳಬಾರದು ಇದೇ ಕಾರಣಕ್ಕೆ ನಾನು ರಾಜಕೀಯವನ್ನು ಬದಿಗಿಟ್ಟು ಜನರಿಗೆ ಸುರಕ್ಷಿತವಾದ ಸ್ಥಳವನ್ನು ಆರಿಸಿಕೊಂಡು ಪೊಲೀಸ್ ಇಲಾಖೆಗೆ ವಿನಂತಿ ಮಾಡಿದ್ದೆ. ಆದರೆ, ಏನು ಆಗಬಾರದಿತ್ತೋ ಅದು ಆಗಿ ಹೋಗಿದೆ" ಎಂದು ಅವರು ಸಂದೇಶದಲ್ಲಿ ತಿಳಿಸಿದ್ದಾರೆ.

"ನಾನೂ ಒಬ್ಬ ಮನುಷ್ಯ. ಇಷ್ಟೊಂದು ಜನರು ಸಂಕಷ್ಟದಲ್ಲಿದ್ದಾಗ, ನಾನು ಆ ಜನರನ್ನು ಬಿಟ್ಟು ಹೇಗೆ ಹಿಂತಿರುಗಲಿ? ಮತ್ತೆ ಯಾವುದೇ ಅಹಿತಕರ ಘಟನೆ ನಡೆಯಬಾರದು ಎನ್ನುವ ಕಾರಣಕ್ಕಾಗಿ ನಾನು ಅಂದು ಹೋಗಿರಲಿಲ್ಲ" ಎಂದು ಅವರು ಹೇಳಿದರು.

ಸೇಡು ತೀರಿಸಿಕೊಳ್ಳೋದಿದ್ದರೆ ನನ್ನ ಮೇಲೆ ತೀರಿಸಿಕೊಳ್ಳಿ

ವಿಜಯ್ ತಮ್ಮ ಪಕ್ಷದ ನಾಯಕರನ್ನು ಟಾರ್ಗೆಟ್‌ ಮಾಡುತ್ತಿರುವ ವಿಚಾರದ ಬಗ್ಗೆಯೂ ಮಾತನಾಡಿದರು, ಅವರು ಅಥವಾ ಅವರ ಸಂಘಟಕರು ನಿರ್ಲಕ್ಷ್ಯದಿಂದ ವರ್ತಿಸಿಲ್ಲ ಎಂದು ಹೇಳಿದ್ದಾರೆ. "ನಾವು ಯಾವುದೇ ತಪ್ಪು ಮಾಡಿಲ್ಲ. ಆದರೆ ಪಕ್ಷದ ನಾಯಕರು, ಸ್ನೇಹಿತರು ಮತ್ತು ಸೋಶಿಯಲ್‌ ಮೀಡಿಯಾ ಯೂಸರ್‌ಗಳು ಅವರ ವಿರುದ್ಧ ಎಫ್‌ಐಆರ್ ದಾಖಲಿಸುತ್ತಿದ್ದಾರೆ. ಮುಖ್ಯಮಂತ್ರಿ ಸರ್, ನೀವು ಸೇಡು ತೀರಿಸಿಕೊಳ್ಳುವ ಉದ್ದೇಶ ಹೊಂದಿದ್ದರೆ, ನನಗೆ ಏನಾದರೂ ಮಾಡಿ. ಅವರನ್ನು ಮುಟ್ಟಬೇಡಿ. ನಾನು ಮನೆಯಲ್ಲಿಯೇ ಇರುತ್ತೇನೆ ಅಥವಾ ನನ್ನ ಕಚೇರಿಯಲ್ಲಿಯೇ ಇರುತ್ತೇನೆ. ನೀವು ನನಗೆ ಏನು ಬೇಕಾದರೂ ಮಾಡಿ, ”ಎಂದು ಅವರು ಹೇಳಿದ್ದಾರೆ.

ರಾಜಕೀಯ ಪಿತೂರಿ ಇದೆ ಎಂದ ವಿಜಯ್‌

ರಾಜಕೀಯ ಪಿತೂರಿಯ ಬಗ್ಗೆ ಸುಳಿವು ನೀಡುತ್ತಾ ಅವರು, "ನಾವು ಐದು ಜಿಲ್ಲೆಗಳಲ್ಲಿ ಪ್ರಚಾರ ಮಾಡಿದ್ದೇವೆ, ಹಾಗಾದರೆ ಕರೂರಿನಲ್ಲಿ ಮಾತ್ರ ಇದು ಏಕೆ ಸಂಭವಿಸಿತು? ಇದು ಹೇಗೆ ಸಂಭವಿಸಿತು? ಜನರಿಗೆ ಸತ್ಯ ತಿಳಿದಿದೆ ಮತ್ತು ಅವರು ಎಲ್ಲವನ್ನೂ ಗಮನಿಸುತ್ತಿದ್ದಾರೆ" ಎಂದು ಹೇಳಿದರು."ನಮಗೆ ನೀಡಲಾದ ಸ್ಥಳದಿಂದಲೇ ನಾವು ಮಾತನಾಡಿದ್ದೇವೆ. ಅವರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಕರೂರಿನ ಜನರು ಸತ್ಯವನ್ನು ಹರಡುವುದನ್ನು (ಸೋಶಿಯಲ್‌ ಮೀಡಿಯಾ ಕ್ಲಿಪ್ಸ್‌) ನೋಡಿದಾಗ, ಸರ್ವಶಕ್ತನು ಸತ್ಯವನ್ನು ಮಾತನಾಡಲು ಭೂಮಿಗೆ ಇಳಿದಂತೆ ಭಾಸವಾಯಿತು. ಸತ್ಯವು ಶೀಘ್ರದಲ್ಲೇ ಹೊರಬರುತ್ತದೆ ಎಂದು ನನಗೆ ವಿಶ್ವಾಸವಿದೆ" ಎಂದು ಅವರು ಹೇಳಿದರು.

ಕಾಲ್ತುಳಿತದಿಂದ ಹಾನಿಗೊಳಗಾದ ಕುಟುಂಬಗಳ ನೋವನ್ನು ನಟ-ರಾಜಕಾರಣಿ ಒಪ್ಪಿಕೊಂಡರು. "ಈ ಸಮಯದಲ್ಲಿ ನಾವೆಲ್ಲರೂ ಇದರಿಂದ ದುಃಖದಲ್ಲಿದ್ದೇವೆ. ಅನೇಕ ಕುಟುಂಬಗಳು ಬಳಲುತ್ತಿವೆ ಎಂದು ನನಗೆ ತಿಳಿದಿದೆ. ಎಲ್ಲರೂ ಬೇಗ ಗುಣಮುಖರಾಗುತ್ತಾರೆ ಎಂದು ನಾನು ಭಾವಿಸುತ್ತೇನೆ. ಸಾಧ್ಯವಾದಷ್ಟು ಬೇಗ ನಿಮ್ಮೆಲ್ಲರನ್ನೂ ಭೇಟಿಯಾಗುತ್ತೇನೆ" ಎಂದು ಅವರು ಹೇಳಿದರು.

"ನಮ್ಮ ರಾಜಕೀಯ ಪ್ರಯಾಣವು ಹೆಚ್ಚಿನ ಶಕ್ತಿ ಮತ್ತು ನಿರ್ಭಯತೆಯಿಂದ ಮುಂದುವರಿಯುತ್ತದೆ. ಈ ಸಮಯದಲ್ಲಿ, ರಾಜಕಾರಣಿಗಳು, ಪಕ್ಷದ ಸದಸ್ಯರು, ನಾಯಕರು ಮತ್ತು ನನ್ನ ಪರವಾಗಿ ಮಾತನಾಡಿದ ಎಲ್ಲರಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ" ಎಂದು ಹೇಳುವ ಮೂಲಕ ವಿಜಯ್ ತಮ್ಮ ಮಾತನ್ನು ಮುಗಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..