ಕೋಲ್ಕತ್ತಾ(ಏ.4): ಪಶ್ಚಿಮ ಬಂಗಾಳದಲ್ಲಿ ಕಾಂಗರೂಗಳು ಓಡಾಡುತ್ತಿರುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕಾಂಗರೂಗಳು ಎಂಬ ಹೆಸರು ಕೇಳಿದ ಕೂಡಲೇ ಮೊದಲು ನೆನಪಾಗುವ ದೇಶ ಆಸ್ಟ್ರೇಲಿಯಾ, ನಂತರದಲ್ಲಿ ನ್ಯೂಗಿನಿಯಾ. ಸಾಮಾನ್ಯವಾಗಿ ಈ ಎರಡು ದೇಶಗಳು ಕಾಂಗರೂಗಲ ಆವಾಸಸ್ಥಾನಗಳು. ಆದರೆ ಅಲ್ಲಿ ಇರುವಂತಹ ಕಾಂಗರೂಗಳು ಇಷ್ಟು ದೂರದ ಭಾರತದವರೆಗೆ ಬಂದು ತಲುಪಿದ್ದ ಹೇಗೆ ಎಂದು ಅರಣ್ಯಾಧಿಕಾರಿಗಳು ಹಾಗೂ ಪ್ರಾಣಿತಜ್ಞರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಜನರು ಕಾಂಗರೂಗಳ ಬಗ್ಗೆ ಯೋಚಿಸಿದಾಗ, ಅವರು ಅವುಗಳನ್ನು ಆಸ್ಟ್ರೇಲಿಯಾ (Australia) ಮತ್ತು ನ್ಯೂ ಗಿನಿಯಾದಂತಹ (New Guinea) ದೇಶವನ್ನೇ ನೆನಪು ಮಾಡಿಕೊಳ್ಳುವುದು ಹೆಚ್ಚು ಆದರೆ ಈ ವಾರಾಂತ್ಯದಲ್ಲಿ ಪಶ್ಚಿಮ ಬಂಗಾಳದ (West Bengal) ಜಲ್ಪೈಗುರಿ (Jalpaiguri ) ಜಿಲ್ಲೆಯ ರಸ್ತೆಗಳಲ್ಲಿ ಕಾಂಗರೂಗಳು ತಿರುಗಾಡುತ್ತಿರುವುದನ್ನು ತೋರಿಸುವ ಹಲವಾರು ವೀಡಿಯೊಗಳು ಆನ್‌ಲೈನ್‌ನಲ್ಲಿ ಪ್ರಸಾರವಾಗಲಾರಂಭಿಸಿದವು. ಈ ಪ್ರಾಣಿಗಳು ತಮ್ಮ ನೈಸರ್ಗಿಕ ಆವಾಸಸ್ಥಾನಗಳಿಂದ ಸಾವಿರಾರು ಮೈಲುಗಳಷ್ಟು ದೂರದಲ್ಲಿವೆ ಎಂಬ ಅಂಶವು ಸಾಮಾನ್ಯ ಜನರನ್ನು ಮಾತ್ರವಲ್ಲದೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಹ ಬೆರಗುಗೊಳಿಸಿತು.
ಶನಿವಾರ, ಸಿಲಿಗುರಿ (Siliguri) ಪಟ್ಟಣದ ವಿವಿಧ ಭಾಗಗಳಲ್ಲಿ ಮೂರು ಕಾಂಗರೂಗಳನ್ನು ರಕ್ಷಿಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ಸುದ್ದಿಗಾರರಿಗೆ ತಿಳಿಸಿದರು. ಪ್ರಾಣಿಗಳ ಕಳ್ಳಸಾಗಣೆ ಪ್ರಕರಣದಲ್ಲಿ ಸತ್ತ ಕಾಂಗರೂ ಮರಿಯೂ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಿರಿಯ ಅರಣ್ಯ ಅಧಿಕಾರಿಯೊಬ್ಬರು, 'ರಕ್ಷಿಸಲ್ಪಟ್ಟ ನಂತರ ಎಲ್ಲಾ ಮೂರು ಕಾಂಗರೂಗಳನ್ನು (kangaroos) ಚಿಕಿತ್ಸೆಗಾಗಿ ಕಳುಹಿಸಲಾಗಿದೆ. ಈ ಕಾಂಗರೂಗಳನ್ನು ಯಾರು ಮತ್ತು ಹೇಗೆ ಇಲ್ಲಿಗೆ ತಂದರು ಎಂದು ನಮಗೆ ಆಶ್ಚರ್ಯವಾಗುತ್ತದೆ. ಈ ಕಾಂಗರೂಗಳನ್ನು ನೇಪಾಳಕ್ಕೆ (Nepal) ಕಳ್ಳಸಾಗಣೆ ಮಾಡಲಾಗುತ್ತಿದ್ದಿರಬಹುದು ಎಂದು ನಾವು ಶಂಕಿಸಿದ್ದೇವೆ. ಆದರೆ ನಾವು ಕಳ್ಳಸಾಗಣೆ ಹಿಂದಿನ ಉದ್ದೇಶವನ್ನು ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದರು.
ಈ ಪ್ರದೇಶದಲ್ಲಿ ಹಾದು ಹೋಗುತ್ತಿದ್ದ ಅನೇಕ ಸ್ಥಳೀಯ ನಿವಾಸಿಗಳು ಈ ಅಪರೂಪದ ಪ್ರಾಣಿಗಳನ್ನು ಗಮನಿಸಿ ವಿಡಿಯೋ ಮಾಡಿದ್ದಾರೆ. ಅಂತಹ ವಿಡಿಯೋವೊಂದರಲ್ಲಿ ಕಾಂಗರೂಗಳು ಸುತ್ತಮುತ್ತಲಿನ ಪ್ರದೇಶಗಳನ್ನು ಪರಿಶೀಲಿಸುತ್ತಿವೆ ಮತ್ತು ರಸ್ತೆಬದಿಯಲ್ಲಿ ಬೆಳೆದ ಹುಲ್ಲನ್ನು ತಿನ್ನಲು ಪ್ರಯತ್ನಿಸುತ್ತಿವೆ, ಕುತೂಹಲದಿಂದ ಜನರು ಈ ದೃಶ್ಯಗಳನ್ನು ಫೋನ್‌ಗಳಲ್ಲಿ ರೆಕಾರ್ಡ್ ಮಾಡಿದ್ದಾರೆ. ಕಾಂಗರೂಗಳು ಮೃಗಾಲಯದಿಂದ ತಪ್ಪಿಸಿಕೊಂಡಿರಬಹುದೇ ಎಂದು ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಂತಹ ಒಂದು ವೀಡಿಯೊಗೆ ಪ್ರತಿಕ್ರಿಯಿಸಿದ ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ (Parveen Kaswan), ಈ ಕಾಂಗರೂಗಳು ಯಾವುದೇ ಮೃಗಾಲಯದ ಭಾಗವಾಗಿಲ್ಲ ಮತ್ತು ಅವುಗಳನ್ನು ಅಧಿಕಾರಿಗಳು ರಕ್ಷಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ