
ದೆಹಲಿ(ಜು.23): ಭಾರತದಲ್ಲಿ ವಧು-ವರರ ಫನ್‌ಗಳನ್ನು ನೆಟ್ಟಿಗರು ಸಖತ್ ಎಂಜಾಯ್ ಮಾಡ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ಕೆಲವು ವಾರಗಳಿಂದ ಇಂತಹ ಬಹಳಷ್ಟು ವಿಡಿಯೋಗಳು ವೈರಲ್ ಆಗುತ್ತಿವೆ.
ಕೆಲವು ಭಾರತೀಯ ವಿವಾಹಗಳು ಅತಿರೇಕಕ್ಕೆ ಹೋಗುತ್ತವೆ. ಫನ್, ತಮಾಷೆ, ಹಾಸ್ಯ, ಕೀಟಲೆ ಇಲ್ಲದೆ ಭಾರತೀಯ ಮದುವೆಗಳು ಮುಗಿಯೋದೇ ಇಲ್ಲ.
21 ಆಮೆ, ಲ್ಯಾಬ್ರಡಾರ್ ವರದಕ್ಷಿಣೆ ಕೇಳಿದ ವರ..!
ಕಿಡಿಗೇಡಿತನ ಮತ್ತು ಚಿಕ್ಕಪುಟ್ಟ ಅಪಾಯವಿಲ್ಲದೆ ಭಾರತೀಯ ವಿವಾಹಗಳು ಅಪೂರ್ಣವಾಗಿವೆ. ಆದರೆ ಕೆಲವೊಮ್ಮೆ, ಅತಿಥಿಗಳು ಸ್ವಲ್ಪ ಹೆಚ್ಚೇ ವರ್ತಿಸಿಬಿಟ್ಟು ಪೇಚಿಗೀಡಾಗುತ್ತಾರೆ.
ಕೆಲವು ವಾರಗಳ ಹಿಂದೆ, ವಧುವಿನ ಕುಟುಂಬವು ಜಜ್ಪುರದ ಸುಕಿಂದಾದಲ್ಲಿ ವರನ ದಿಬ್ಬಣಕ್ಕೆ ಮಟನ್ ಬಡಿಸದ ಕಾರಣ ಮದುವೆ ಮುರಿದುಬಿತ್ತು. ವರನು ತನ್ನ ಮದುವೆಯಿಂದ ಹೊರನಡೆದಿದ್ದಾನೆ. ನಂತರ ಮಹೋಬಾದಲ್ಲಿನ ವಧು ಆರು ಸುತ್ತುಗಳ ಪವಿತ್ರ ಬೆಂಕಿಯನ್ನು ತೆಗೆದುಕೊಂಡ ನಂತರ ತನ್ನ ಮದುವೆಯನ್ನು ರದ್ದುಗೊಳಿಸಿದಳು.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಹೊಸ ವಿಡಿಯೋವು ವರನ ಸ್ನೇಹಿತರಿಂದ ಉಡುಗೊರೆಯನ್ನು ಪಡೆದ ಮೇಲೆ ವಧು ಕೋಪದಿಂದ ಪ್ರತಿಕ್ರಿಯಿಸುತ್ತಿರುವುದನ್ನು ತೋರಿಸುತ್ತದೆ. ವರನ ಪಕ್ಕದಲ್ಲಿ ಕುಳಿತಿದ್ದ ವಧು, ವರನ ಸ್ನೇಹಿತರಿಂದ ಪ್ಯಾಕ್ ಮಾಡಿದ ಉಡುಗೊರೆಯನ್ನು ಪಡೆಯುತ್ತಾರೆ.
ವರಮಾಲೆ ಹಾಕೋವಾಗ ಸತಾಯಿಸಿದ ವರ..! ಮುಂದಾಗಿದ್ದೇನು ?
ಅವಳು ಪೆಟ್ಟಿಗೆಯನ್ನು ತೆರೆಯುತ್ತಾರೆ. ಅದರೊಳಗೆ ಮಗುವಿನ ಫೀಡಿಂಗ್ ಬಾಟಲ್ ಇರುತ್ತದೆ. ಉಡುಗೊರೆಯಿಂದ ವಧು ಖುಷಿಯಾಗುವುದಿಲ್ಲ. ಪ್ಯಾಕೇಟ್ ಎಸೆಯುವ ಮೊದಲು ಅದನ್ನು ಹಸ್ತಾಂತರಿಸಿದ ವ್ಯಕ್ತಿಯನ್ನು ದುರುಗುಟ್ಟಿ ನೋಡುತ್ತಾಳೆ ವಧು.
ಈ ವಿಡಿಯೋವನ್ನು ಬಂಟಿ ಠಾಕೂರ್ ಎಂಬ ಬಳಕೆದಾರರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ಈಗ 10 ಮಿಲಿಯನ್ ವೀಕ್ಷಣೆಗಳನ್ನು ಮತ್ತು 3.17 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ