UP Elections: ಬಿಜೆಪಿ ಕಾರ್ಯಕರ್ತರಿಗೆ ಕಾಂಗ್ರೆಸ್ ಪ್ರಣಾಳಿಕೆ ಕೊಟ್ಟ ಪ್ರಿಯಾಂಕಾ!

By Suvarna NewsFirst Published Feb 6, 2022, 8:51 AM IST
Highlights

* ಉತ್ತರ ಪ್ರದೇಶ ಚುನಾವಣೆಗೆ ದಿನಗಣನೆ

* ಬಿಜೆಪಿ ಕಾರ್ಯಕರ್ತರಿಗೆ ಕಾಂಗ್ರೆಸ್ ಪ್ರಣಾಳಿಕೆ ಕೊಟ್ಟ ಪ್ರಿಯಾಂಕಾ

* ಇದನ್ನು ಓದಿ ಎಂದು ಬಿಜೆಪಿ ಕಾರ್ಯಕರ್ತರಲ್ಲಿ ಮನವಿ

ನವದೆಹಲಿ(ಫೆ.06): ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರ ಭರದಿಂದ ಸಾಗಿದ್ದು, ಎಲ್ಲಾ ಪಕ್ಷಗಳ ಹಿರಿಯರು ತಮ್ಮ ಶಕ್ತಿ ಮೀರಿ ಶ್ರಮಪಡುತ್ತಿದ್ದಾರೆ. ಹೀಗಿರುವಾಗ, ಶನಿವಾರ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಅಲಿಗಢದಲ್ಲಿ ಪ್ರಚಾರ ನಡೆಸುತ್ತಿದ್ದಾಗ ನಡೆದ, ಆಸಕ್ತಿದಾಯಕ ಘಟನೆಯೊಂದು ಬೆಳಕಿಗೆ ಬಂದಿದೆ. ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪರ ಘೋಷಣೆಗಳನ್ನು ಕೂಗುತ್ತಿದ್ದ ಬಿಜೆಪಿ ಬೆಂಬಲಿಗರನ್ನು ಪ್ರಿಯಾಂಕಾ ಗಾಂಧಿ ಎದುರಿಸಿದರು. ಆವರನ್ನು ನೋಡಿದ ಪ್ರಿಯಾಂಕಾ ಮೊದಲು ಮುಗುಳ್ನಕ್ಕು, ಕೈಕುಲುಕಿ ನಂತರ ತನ್ನ ಪಕ್ಷದ ಯುವ ಪ್ರಣಾಳಿಕೆಯನ್ನು ಅವರಿಗೆ ನೀಡಿದ್ದಾರೆ.

ಪ್ರಿಯಾಂಕಾ ತನ್ನ ಕಾರಿನಿಂದ ಹೊರಕ್ಕೆ ಬಾಗಿ ಬಿಜೆಪಿ ಧ್ವಜಗಳನ್ನು ಬೀಸುತ್ತಾ ಪಕ್ಷದ ಉನ್ನತ ನಾಯಕರ ಪರವಾಗಿ ಘೋಷಣೆಗಳನ್ನು ಕೂಗುತ್ತಿದ್ದ ರಾಜ್ಯದಲ್ಲಿ ಆಡಳಿತ ಪಕ್ಷದ ಕಾರ್ಯಕರ್ತರಿಗೆ "ಇದನ್ನು ಓದಿ, ಇದನ್ನು ಓದಿ" ಎಂದು ಹೇಳಿದ್ದಾರೆ.

| Uttar Pradesh: Congress leader Priyanka Gandhi Vadra gave Congress' youth manifesto 'Bharti Vidhan' to BJP workers who were raising slogans in favor of PM Modi & CM Yogi during a roadshow in Aligarh ahead of pic.twitter.com/YRDUn4smO2

— ANI UP/Uttarakhand (@ANINewsUP)

Latest Videos

50 ವರ್ಷದ ಪ್ರಿಯಾಂಕಾ ಗಾಂಧಿ ವಾದ್ರಾ ಬಿಜೆಪಿ ಬೆಂಬಲಿಗರನ್ನು ನಗುತ್ತಲೇ ಕೈಮುಗಿದು ಸ್ವಾಗತಿಸಿದರು ಬಳಿಕ ಅವರ ಬೆಂಗಾವಲು ಪಡೆ ಮುಂದೆ ಸಾಗಿದೆ. 'ಭಾರತಿ ವಿಧಾನ’ ಎಂಬ ಕಾಂಗ್ರೆಸ್ ಯುವ ಪ್ರಣಾಳಿಕೆಯು ರಾಜ್ಯದ ಯುವಜನತೆಗೆ ಹೊಸ ದೃಷ್ಟಿಯನ್ನು ನೀಡುವ ಭರವಸೆಯನ್ನು ನೀಡಿದೆ. ಯುವಕರ ಸಲಹೆ ಪಡೆದು ಕರಡು ಸಿದ್ಧಪಡಿಸಲಾಗಿದೆ ಎಂದು ಪಕ್ಷ ಹೇಳಿದೆ.

ಕಳೆದ ತಿಂಗಳು ಪ್ರಣಾಳಿಕೆಯನ್ನು ಬಿಡುಗಡೆ ಮಾಡುವಾಗ, ಕಾಂಗ್ರೆಸ್ ನಾಯಕರು, "ಇಂದು ಯುಪಿಯಲ್ಲಿ ಯುವಕರು ಉದ್ಯೋಗ ಪಡೆಯಲು ಅಪಾರ ತೊಂದರೆ ಎದುರಿಸುತ್ತಿದ್ದಾರೆ. ಅವರು ಅರ್ಹರು ಮತ್ತು ನಿರುದ್ಯೋಗಿಗಳು. ಅವರಿಗೆ ಅಗತ್ಯವಿರುವ ಉದ್ಯೋಗವನ್ನು ಪಡೆಯಲು ಸಹಾಯ ಮಾಡುವುದು ನಮ್ಮ ಗುರಿಯಾಗಿದೆ" ಎಂದು ಹೇಳಿದ್ದರು.

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.
 

click me!