ನಿಮ್ಮ ಆಶೀರ್ವಾದ ಇದ್ದರೆ ಸುರಕ್ಷಿತವಾಗಿ ಬರುತ್ತೇನೆ, ಭಾರತದ ತುದಿಯಲ್ಲಿ ಕೊಡಗಿನ ಯೋಧ!

Published : Sep 05, 2020, 02:39 PM ISTUpdated : Sep 05, 2020, 02:46 PM IST
ನಿಮ್ಮ ಆಶೀರ್ವಾದ ಇದ್ದರೆ ಸುರಕ್ಷಿತವಾಗಿ ಬರುತ್ತೇನೆ, ಭಾರತದ ತುದಿಯಲ್ಲಿ ಕೊಡಗಿನ ಯೋಧ!

ಸಾರಾಂಶ

ದೇಶದ ರಕ್ಷಣೆ ವಿಚಾರದಲ್ಲಿ ಶತ್ರುಗಳ ವಿರುದ್ಧ ಸೆಣಸಾಡಿ ಪ್ರಾಣ ಬಲಿದಾನ ಮಾಡಲು ಹಿಂಜರಿಯದ ಭಾರತೀಯ ಯೋಧರು| ಗಡಿಯಲ್ಲಿ ಕರ್ತವ್ಯದಲ್ಲಿರುವ ಯೋಧನ ವೀಡಿಯೋ ವೈರಲ್| Loc ಬಳಿ ವೀಡಿಯೋ ಮಾಡಿ ಬಿಟ್ಟಿರುವ ಸೈನಿಕ

ಶ್ರೀನಗರ(ಸೆ.05): ದೇಶದ ರಕ್ಷಣೆ ವಿಚಾರದಲ್ಲಿ ಶತ್ರುಗಳ ವಿರುದ್ಧ ಸೆಣಸಾಡಿ ತಮ್ಮ ಜೀವವನ್ನು ಬಲಿದಾನ ಮಾಡಲು ಹಿಂಜರಿಯದ ಭಾರತೀಯ ಸೇನೆಯ ಯೋಧರಿಗೆ ಇಡೀ ವಿಶ್ವವೇ  ತಲೆ ಬಾಗುತ್ತದೆ. ಹಗಲಿರುಳೆನ್ನದೆ ಬಿಸಿಲು ಚಳಿ, ಕಣಿವೆ, ಬೆಟ್ಟ ಗುಡ್ಡ ಹೀಗೆ ಎಲ್ಲಾ ಕಷ್ಟಗಳನ್ನು ಕಡೆಗಣಿಸಿ ಯೋಧನೊಬ್ಬ ತನ್ನ ಭಾರತಮಾತೆಯನ್ನು ರಕ್ಷಿಸುತ್ತಾನೆ ಪಾಕ್ ಗಡಿ, ಭಾರತದ ತುದಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕನ್ನಡಿಗ, ಕೊಡಗಿನ ವೀರನ ಭಾವಿಡಿಯೋ ಒಂದು ಫುಲ್​ ವೈರಲ್ ಆಗಿದೆ.

ಕೊಡಗಿನ ಸೋಮವಾರಪೇಟೆಯ ನಿವಾಸಿಯಾಗಿರುವ ಯೋಧನೊಬ್ಬ ಭಾರತದ ಗಡಿಯಾದ LoC ಬಳಿ ನಿಂತು ವೀಡಿಯೋ ಒಂದನ್ನು ಮಾಡಿದ್ದಾನೆೆ. ವಿಡಿಯೋದಲ್ಲಿ ತಾನೂ ಗಡಿಯಲ್ಲಿ ಬಾಂಬ್ ಪತ್ತೆ ದಳದ ಮುಖ್ಯಸ್ಥನಾಗಿ ಕರ್ತವ್ಯ ಮಾಡುತ್ತಿದ್ದು, ಸಮುದ್ರ ಮಟ್ಟದಿಂದ 22,000 ಅಡಿ ಎತ್ತರದಲ್ಲಿದ್ದೇನೆ ಎಂದು ಯೋಧ ತಾನಿರುವ ಸ್ಥಳದ ಬಗ್ಗೆ ವಿವರಣೆ ನೀಡಿದ್ದಾರೆ. 

ಅಲ್ಲದೇ ಕೇವಲ ಒಂದು ಕಿ. ಮೀಟರ್ ದೂರಲ್ಲಿರುವ ಪಾಕಿಸ್ತಾದ ಗಡಿ ಬಳಿಯ LOC ಬಳಿ ತಾನು ಕರ್ತವ್ಯ ನಿರ್ವಹಿಸಲು ತೆರಳುತ್ತಿರುವುದಾಗಿ ಹೇಳಿರುವ ಯೋಧ, ಈ ಹಿಂದೆ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಲು ಹೋಗಿದ್ದ ಇಬ್ಬರು ಸೈನಿಕರು ಆಯತಪ್ಪಿ ಪಾಕಿಸ್ತಾನದ ಗಡಿಯೊಳಗೆ ಬಿದ್ದಿದ್ದರು. ಅವರ ಮೃತದೇಹವನ್ನೂ ತರಲು ಬಿಟ್ಟಿರಲಿಲ್ಲ. ಇಂತಹ ಜಾಗಕ್ಕೆ ತೆರಳುತ್ತಿರುವ ನಾನು ಜೀವಂತವಾಗಿ ಮರಳುತ್ತೇನೋ, ಇಲ್ಲವೋ ತಿಳಿದಿಲ್ಲ. ಆದರೆ ನಿಮ್ಮ ಆಶೀರ್ವಾದ ಮತ್ತು ಪ್ರಾರ್ಥನೆ ಇದ್ದರೆ ಖಂಡಿತವಾಗಿಯೂ ಸುರಕ್ಷಿತವಾಗಿ ಮರಳುತ್ತೇನೆ ಎಂದು ಕೆಚ್ಚೆದೆಯಿಂದ ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್