ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದರೂ, ಈ ವಿಷಯ ಗಮನಕ್ಕೆ ಬಂದ ನಂತರ ಯುವತಿಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿರುವುದಾಗಿ ವರದಿಗಳು ತಿಳಿಸಿವೆ. ಈ ಮಧ್ಯೆ, ಆ ಸ್ಥಳದಲ್ಲಿದ್ದ ವೀಕ್ಷಕರು ವಿವಾದದ ವಿಡಿಯೋ ಮಾಡುತ್ತಿದ್ದರೇ ಹೊರತು ಜಗಳವನ್ನು ತಡೆಯಲು ಯಾರೂ ಮುಂದಾಗಲಿಲ್ಲ ಎಂದು ತಿಳಿದುಬಂದಿದೆ.
ನಾಲ್ವರು ಯುವತಿಯರು (Girls) ಗಲಾಟೆ ಸೃಷ್ಟಿಸಿ ಮತ್ತೊಬ್ಬಳು ಯುವತಿಯನ್ನು ಥಳಿಸುವ (Beaten) ವಿಡಿಯೋ (Viral Video) ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಈ ವಿಡಿಯೋದಲ್ಲಿ, ನಾಲ್ವರು ಯುವತಿಯರು ಮತ್ತೊಬ್ಬಳು ಯುವತಿಯನ್ನು ಅಮಾನುಷವಾಗಿ ಥಳಿಸುತ್ತಿರುವುದನ್ನು ಕಾಣಬಹುದು. ಆ ನಾಲ್ವರು ಯುವತಿಯರು ಕುಡಿದಿದ್ದರು ಎನ್ನಲಾಗಿದ್ದು, ರಸ್ತೆಯಲ್ಲೇ ಮತ್ತೊಬ್ಬಳ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಆಕೆಯ ಮೊಬೈಲ್ ಅನ್ನು ಒಡೆದು ಹಾಕಿದ್ದಾರೆ. ಗುರುವಾರ ರಾತ್ರಿ ಮಧ್ಯಪ್ರದೇಶದ (Madhya Pradesh) ಇಂದೋರ್‌ನಲ್ಲಿರುವ (Indore) ಎಲ್‌ಐಸಿ ತಿರಾಹಾದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಪಬ್‌ವೊಂದರ ಹೊರಗೆ ಈ ಘಟನೆ ನಡೆದಿದ್ದು, ಆರೋಪಿ ಯುವತಿಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದರೂ, ಈ ವಿಷಯ ಗಮನಕ್ಕೆ ಬಂದ ನಂತರ ಯುವತಿಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿರುವುದಾಗಿ ವರದಿಗಳು ತಿಳಿಸಿವೆ. ಈ ಮಧ್ಯೆ, ಆ ಸ್ಥಳದಲ್ಲಿದ್ದ ವೀಕ್ಷಕರು ವಿವಾದದ ವಿಡಿಯೋ ಮಾಡುತ್ತಿದ್ದರೇ ಹೊರತು ಜಗಳವನ್ನು ತಡೆಯಲು ಯಾರೂ ಮುಂದಾಗಲಿಲ್ಲ ಎಂದು ತಿಳಿದುಬಂದಿದೆ.
ಇದನ್ನು ಓದಿ: Kerala Crime: ನಾಯಿಗೆ ಊಟ ಹಾಕದ್ದಕ್ಕೆ ಸೋದರ ಸಂಬಂಧಿಯನ್ನು ಹೊಡೆದು ಕೊಂದ ವ್ಯಕ್ತಿ ಬಂಧನ
ಮೂವರು ಯುವತಿಯರು ಮತ್ತೊಬ್ಬಳು ಯುವತಿಯ ಮೇಲೆ ಕಿಕ್ ಹಾಗೂ ಪಂಚ್‌ಗಳನ್ನು ಮಾಡಿದ್ದು ಅಮಾನುಷವಾಗಿ ಥಳಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಪ್ರಜ್ಞೆ ತಪ್ಪಿ ರಸ್ತೆಯ ಮೇಲೆ ಬಿದ್ದಿರುವ ಯುವತಿ ಆ ನಾಲ್ವರನ್ನು ವಿರೋಧಿಸುವ ಸ್ಥಿತಿಯಲ್ಲಿ ಕಂಡುಬಂದಿಲ್ಲ ಎಂಬುದನ್ನೂ ವಿಡಿಯೋದಲ್ಲಿ ನೋಡಬಹುದಾಗಿದೆ..
ವೈರಲ್ ವಿಡಿಯೋವನ್ನು ಇಲ್ಲಿ ನೋಡಿ..
उड़ता इंदौर.. नशे में धुत्त लड़कियों का पब के बाहर मारपीट का वायरल वीडियो pic.twitter.com/ZXt8Q8OzaP
— सत्यनिष्ठा (@esp_india)ಮಹಿಳೆಯರು ಪಬ್‌ನ ಹೊರಗೆ ಅಮಲೇರಿದ ಸ್ಥಿತಿಯಲ್ಲಿ ಕೂದಲು ಎಳೆಯುವುದು, ಒದೆಯುವುದು ಮತ್ತು ಬೆಲ್ಟ್ ಹಾಗೂ ಕೋಲಿನಿಂದ ಹೊಡೆಯುವುದನ್ನು ನೋಡಬಹುದು. ಈ ಮಧ್ಯೆ, ರಸ್ತೆ ಮಧ್ಯೆ ಈ ಘಟನೆ ನಡೆದಿದ್ದ, ಜನರು ಜಗಳ ನಿಲ್ಲಿಸುವ ಬದಲು ವಿಡಿಯೋ ಮಾಡುತ್ತಾ ಹಾಘೂ ನೋಡುತ್ತಾ ನಿಂತಿದ್ದಾರೆ. ಹಲ್ಲೆಗೊಳಗಾದ ಯುವತಿಯನ್ನು
ಇಂದೋರ್‌ನ ಧೇನು ಮಾರುಕಟ್ಟೆಯಲ್ಲಿರುವ ಕೀಟನಾಶಕ ಅಂಗಡಿಯಲ್ಲಿ ಕೆಲಸ ಮಾಡುವ ಸೇಲ್ಸ್ ಗರ್ಲ್ ಎಂದು ಗುರುತಿಸಲಾಗಿದೆ. ಅಲ್ಲದೆ, ವಿನಾಕಾರಣ ತನ್ನನ್ನು ಥಳಿಸಲಾಗಿದೆ ಎಂದು ಆಕೆ ಹೇಳಿದ್ದಾಳೆಂದು ತಿಳಿದುಬಂದಿದೆ.
ಇದನ್ನೂ ಓದಿ: ಕುಡುಕಿಯ ಅವಾಂತರ : ವಿಮಾನ ತುರ್ತು ಭೂಸ್ಪರ್ಶ
ಇನ್ನು, ಈ ಘಟನೆ ಸಂಬಂಧ ವಿವರ ನೀಡಿದ ಪೊಲೀಸ್ ಠಾಣೆಯ ಮೇಲ್ವಿಚಾರಕ ಅಜಯ್ ವರ್ಮಾ, ಇಂತಹ ಅನೈತಿಕ ನಡವಳಿಕೆಯಲ್ಲಿ ತೊಡಗಿರುವ ಆರೋಪಿ ಯುವತಿಯರು ಸ್ಥಳೀಯರಾಗಿದ್ದಾರೆ. ಅವರು ಡ್ರಗ್ಸ್ ಮತ್ತು ಮದ್ಯಪಾನ ಸೇವಿಸುತ್ತಾರೆ ಹಾಗೂ ಪ್ರತಿದಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಜಗಳವಾಡುತ್ತಿದ್ದಾರೆ ಎಂದು ತಿಳಿದುಬಂದಿದೆ ಎಂದೂ ಹೇಳಿದ್ದಾರೆ.
ಈ ವಿಡಿಯೋ ವೈರಲ್ ಆದ ಕೂಡಲೇ, ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅನಾಗರಿಕ ವರ್ತನೆ ತೋರಿದ ಆರೋಪಿ ಯುವತಿಯರನ್ನು ಅವರು ದೂಷಿಸಿದ್ದಾರೆ. ಒಬ್ಬ ಟ್ವಿಟ್ಟರ್ ಬಳಕೆದಾರ, ಯುವತಿಯರ ವಿರುದ್ಧ ಟೀಕೆ ಮಾಡಿದ್ದು, ಮತ್ತು ಈ ಘಟನೆಯನ್ನು ಮಹಿಳಾ ಸಬಲೀಕರಣದ ಸಾರಾಂಶ ಎಂದು ಕರೆದರು.
ಇದನ್ನೂ ಓದಿ: ಮಣಿಪಾಲ್‌ನಲ್ಲಿ ನೈತಿಕ ಪೊಲೀಸ್ ಗಿರಿ: ಕುಡಿದ ಕಾರಣಕ್ಕೆ ಯುವತಿಯ ಮೇಲೆ ಸಾಮೂಹಿಕ ಹಲ್ಲೆ
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ವೈಫಲ್ಯದ ಬಗ್ಗೆಯೂ ಮತ್ತೊಬ್ಬ ಬಳಕೆದಾರ ಮಧ್ಯಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಈಗಲಾದರೂ ಆರೋಪಿ ಯುವತಿಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮತ್ತೊಬ್ಬ ಸಾಮಾಜಿಕ ಬಳಕೆದಾರ ಆಗ್ರಹಿಸಿದ್ದಾರೆ.