ಸುಳ್ಳು ರೇಪ್ ಕೇಸಲ್ಲಿ 20 ವರ್ಷ ಜೈಲಲ್ಲಿ ಕಳೆದ ವ್ಯಕ್ತಿ ಅಳುತ್ತಿರುವ ವೀಡಿಯೋ ಮತ್ತೆ ವೈರಲ್

Published : Feb 03, 2026, 06:41 PM IST
Vishnu Tiwari

ಸಾರಾಂಶ

ಸುಳ್ಳು ಅತ್ಯಾ*ಚಾರ ಪ್ರಕರಣದಲ್ಲಿ 20 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ ವಿಷ್ಣು ತಿವಾರಿ ಅವರನ್ನು 2021ರಲ್ಲಿ ಅಲಹಾಬಾದ್ ಹೈಕೋರ್ಟ್‌ ನಿರಪರಾಧಿ ಎಂದು ಘೋಷಿಸಿತ್ತು. ಜೈಲಿನಿಂದ ಬಿಡುಗಡೆಯಾಗುವಾಗ ಅವರು ಕಣ್ಣೀರಿಟ್ಟ ವೀಡಿಯೋ ಇದೀಗ ವೈರಲ್ ಆಗಿದೆ.

ಒಬ್ಬ ಅಪರಾಧಿಗೆ ಶಿಕ್ಷೆ ಆಗದೇ ಹೋದರು ಪರವಾಗಿಲ್ಲ, ನಿರಪರಾಧಿಗೆ ಶಿಕ್ಷೆಯಾಗಬಾರದು ಎಂದು ನಮ್ಮ ನ್ಯಾಯ ವ್ಯವಸ್ಥೆ ಹೇಳುತ್ತದೆ. ಆದರೆ ಅದು ನಿಜವಾಗಿಯೂ ಕಾರ್ಯರೂಪಕ್ಕೆ ಬರುತ್ತಿದೆಯೋ ಗೊತ್ತಿಲ್ಲ, ಅನೇಕ ವಿಚಾರಣಾಧೀನ ಕೈದಿಗಳು ಸರಿಯಾಗಿ ವಿಚಾರಣೆಯೂ ಆಗದೇ ಅತ್ತ ಅಪರಾಧಿಯೂ ಅಲ್ಲದೇ ಇತ್ತ ನಿರಪರಾಧಿಯೂ ಅಲ್ಲದೇ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಹೀಗೆ ತಾನು ಮಾಡದ ತಪ್ಪಿಗೆ 20 ವರ್ಷಗಳ ಕಾಲ ಜೈಲಿನಲ್ಲಿ ಕಳೆದ ವಿಷ್ಣು ತಿವಾರಿ ಎಂಬುವವರ ಕತೆ ಇದು. ಸುಳ್ಳು ಅತ್ಯಾ*ಚಾರ ಪ್ರಕರಣದಲ್ಲಿ 20 ವರ್ಷಗಳ ಕಾಲ ಜೈಲಿನಲ್ಲಿ ಕಳೆದ ನಂತರ 2021ರಲ್ಲಿ ಅಲಹಾಬಾದ್ ಹೈಕೋರ್ಟ್‌ ಇವರನ್ನು ನಿರಪರಾಧಿ ಎಂದು ತೀರ್ಪು ನೀಡಿ ಬಿಡುಗಡೆ ಮಾಡಿದಾಗ ಅವರು ವಿಷಾದದಿಂದ ಕಣ್ಣೀರಿಟ್ಟ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ವೀಡಿಯೋ ನೋಡಿ ಭಾರತದ ನ್ಯಾಯ ವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

2021ರಲ್ಲಿ ನಿರಪರಾಧಿಯಾಗಿ ಜೈಲಿನಿಂದ ಹೊರಬಂದಿದ್ದ ವಿಷ್ಣು ತಿವಾರಿ

2021ರಲ್ಲಿ ವಿಷ್ಣು ತಿವಾರಿ ಜೈಲಿನಿಂದ ಬಿಡುಗಡೆಯಾದಾಗ ಅವರಿಗೆ ಸ್ವಾತಂತ್ರ್ಯವೂ ಗೆಲುವಿನಂತೆ ಕಾಣಲಿಲ್ಲ, ಅವರು 20 ವರ್ಷಗಳನ್ನು ಕಂಬಿಗಳ ಹಿಂದೆ ಅವರು ಮಾಡದ ತಪ್ಪಿಗಾಗಿ ಕಳೆದಿದ್ದರು. , ಅವರಿಲ್ಲದೆ ಅವರ ಹೊರಗಿನ ಜೀವನವು ಸಂಪೂರ್ಣವಾಗಿ ಬದಲಾಗಿ ಸಾಗಿತ್ತು. ಅವರ ಪೋಷಕರು ಹೊರಟು ಹೋದರು, ಅವರ ಕುಟುಂಬವು ಛಿದ್ರವಾಗಿತ್ತು, ಮತ್ತು ಅವರು ಒಮ್ಮೆ ಜೀವಿಸಿದ್ದ ಜಗತ್ತು ಈಗ ಅಸ್ತಿತ್ವದಲ್ಲಿಲ್ಲ ಎಂಬುದನ್ನು ಅವರು ಅರಗಿಸಿಕೊಳ್ಳಬೇಕಿತ್ತು.

2000 ನೇ ಇಸವಿಯ ಸೆಪ್ಟೆಂಬರ್‌ನಲ್ಲಿ, ಉತ್ತರ ಪ್ರದೇಶದ ಲಲಿತಪುರ ಜಿಲ್ಲೆಯ ನಿವಾಸಿ ವಿಷ್ಣು ಅವರ ಮೇಲೆ ಅತ್ಯಾ*ಚಾರ ಆರೋಪಗಳು ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಆರೋಪಗಳು ದಾಖಲಾದ ನಂತರ ಅವರನ್ನು ಬಂಧಿಸಲಾಯಿತು. 2003 ರಲ್ಲಿ ವಿಚಾರಣಾ ನ್ಯಾಯಾಲಯವು ಅವರನ್ನು ಅಪರಾಧಿ ಎಂದು ಘೋಷಿಸಿ ಆಗ್ರಾ ಕೇಂದ್ರ ಜೈಲಿನಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತು. ಆ ಸಮಯದಲ್ಲಿ ಅವರಿಗೆ 23 ವರ್ಷ. ಅಂದಿನಿಂದ, ಅವರಿಗೆ ಒಮ್ಮೆಯೂ ಜಾಮೀನು ಸಿಗದೇ ಜೈಲಿನಲ್ಲೇ ಇದ್ದರು.

ಇದನ್ನೂ ಓದಿ: ಸಿಹಿತಿನಿಸು ತಯಾರಿಸುವ ಹಿಟ್ಟನ್ನು ಕಾಲಿನಲ್ಲಿ ತುಳಿದು ಹದಗೊಳಿಸಿದ ವ್ಯಕ್ತಿ: ತಿಂಡಿ ಅಂಗಡಿ ವೀಡಿಯೋಗೆ ನೆಟ್ಟಿಗರ ಸಮರ್ಥನೆ

ಮುಂದಿನ ಎರಡು ದಶಕಗಳಲ್ಲಿ, ವಿಷ್ಣು ಅವರು ಎಂದಿಗೂ ಜೈಲಿನ ಗೋಡೆಗಳಿಂದ ಒಮ್ಮೆಯೂ ಹೊರಗೆ ಕಾಲಿಡಲಿಲ್ಲ, ಕರೋನವೈರಸ್ ಸಾಂಕ್ರಾಮಿಕದ ಉತ್ತುಂಗದ ಸಮಯದಲ್ಲಿ, ಜೈಲುಗಳಲ್ಲಿನ ಜನದಟ್ಟಣೆಯನ್ನು ಕಡಿಮೆ ಮಾಡಲು ಹಲವಾರು ಕೈದಿಗಳನ್ನು ಬಿಡುಗಡೆ ಮಾಡಿದಾಗಲೂ ಅವರನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲಿಲ್ಲ. ಈ ಸಮಯದಲ್ಲಿ, ಅವರ ಪೋಷಕರು ಮತ್ತು ಇಬ್ಬರು ಸಹೋದರರು ನಿಧನರಾದರು, ಅವರ ಕುಟುಂಬವನ್ನು ಸಾಮಾಜಿಕವಾಗಿ ಬಹಿಷ್ಕರಿಸಲಾಯಿತು ಮತ್ತು ಅವರು ಹೊಂದಿದ್ದ ಐದು ಎಕರೆ ಭೂಮಿಯನ್ನು ಕೂಡ ಮಾರಾಟ ಮಾಡಲಾಯಿತು. ಅವರ ಕುಟುಂಬ ಸದಸ್ಯರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅವರಿಗೆ ಅವಕಾಶ ನೀಡಲಿಲ್ಲ.

ಆ ಸಮಯದಲ್ಲಿ ಮಾತನಾಡಿದ ಅವರು, ನಾನು ಸಂತೋಷವಾಗಿದ್ದೇನೆ, ಆದರೆ ಈಗ ಏನು ಮಾಡಬೇಕೆಂದು ನನಗೆ ತಿಳಿದಿಲ್ಲ. ನನ್ನ ಮನೆ ಹಾಳಾಗಿದೆ... ನನ್ನ ಕುಟುಂಬ ಸದಸ್ಯರು ಮೃತಪಟ್ಟಿದ್ದಾರೆ. ನಾವು ಆಡಳಿತದಿಂದ ಸಹಕಾರವನ್ನು ಕೋರುತ್ತಿದ್ದೇವೆ. ನನ್ನ ಪ್ರಕರಣದಲ್ಲಿ ತನಿಖಾ ಅಧಿಕಾರಿ ಸುಳ್ಳು ವರದಿಯನ್ನು ಸಲ್ಲಿಸಿದರು. ಹಸುವನ್ನು ಕಟ್ಟುವ ಬಗ್ಗೆ ವಿವಾದವಿತ್ತು. ನನ್ನ ವಕೀಲರು ಸಹ ನನ್ನನ್ನು ಕೈಬಿಟ್ಟರು ಎಂದು ಅವರು ವಿಷಾದದಿಂದ ನುಡಿದಿದ್ದರು.

ಇದನ್ನೂ ಓದಿ: ನಡುರಸ್ತೆಯಲ್ಲಿ ಸ್ಕೂಟರ್ ನಿಲ್ಲಿಸಿ ಜೋಡಿಯ ಫೋಟೋಶೂಟ್‌: ಎಚ್ಚರಿಸಿದ ಕಾರು ಚಾಲಕನ ಜೊತೆಗೂ ಗಲಾಟೆ

ಈಗ ವೈರಲ್ ಆಗಿರುವ ವೀಡಿಯೊ ವಿಷ್ಣುವಿಗೆ ಸಂಬಂಧಿಸಿದ್ದಾಗಿದ್ದು, ಜೈಲಿನಿಂದ ಹೊರಬರುವ ವೇಳೆ ದುಃಖ ತಾಳಲಾರದೇ ಅವರು ಅಳುತ್ತಿರುವುದನ್ನು ತೋರಿಸುತ್ತದೆ. ಹಲವಾರು ವರ್ಷಗಳ ಕಾಲ ಜೈಲಿನಲ್ಲಿ ಕಳೆದ ನಂತರ ಅವರ ಜೀವನ ಹೇಗೆ ಸಂಪೂರ್ಣವಾಗಿ ಕುಸಿದುಬಿತ್ತು ಎಂಬುದನ್ನು ಹಲವಾರು ಸೋಶಿಯಲ್ ಮೀಡಿಯಾ ಪೋಸ್ಟ್‌ಗಳು ವಿವರಿಸಿವೆ. ಈ ವೀಡಿಯೋ ಈಗ ಮತ್ತೆ ವೈರಲ್ ಆಗುತ್ತಿದ್ದು, ಭಾರತೀಯ ನ್ಯಾಯ ವ್ಯವಸ್ಥೆಯ ಬಗ್ಗೆ ಅನೇಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಫೀಸ್‌ಗೆ ಬಂದು ಮೀಟಿಂಗ್ ಹಾಜರಾಗಲು ವಾರ್ನಿಂಗ್, ಜೆನ್‌ಝಿ ಉದ್ಯೋಗಿ ಉತ್ತರಕ್ಕೆ ಬಾಸ್ ಕಂಗಾಲು
ಸಿಹಿತಿನಿಸಿ ಹಿಟ್ಟನ್ನು ಕಾಲಿನಲ್ಲಿ ತುಳಿದು ಹದಗೊಳಿಸಿದ ವ್ಯಕ್ತಿ:ತಿಂಡಿ ಅಂಗಡಿ ವೀಡಿಯೋಗೆ ನೆಟ್ಟಿಗರ ಸಮರ್ಥನೆ