ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಧಿಕಾರವದಿ ಅಂತ್ಯಗೊಳ್ಳುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ರಾಜ್ಯಸಭೆಯಲ್ಲಿ ಭಾಷಣ ಮಾಡಿದ್ದಾರೆ. ಈ ವೇಳೆ ನಾಯ್ಡು ಅವರ ಭಾಷೆಯ ಮೇಲಿನ ಹಿಡಿತ, ಪದಗಳಲ್ಲಿ ಎದುರಾಳಿಗಳ ಚಕಿತಗೊಳಿಸುವ ಸಾಮರ್ಥ್ಯ ಕುರಿತು ಮೋದಿ ಮಾತನಾಡಿದ್ದಾರೆ. ಮೋದಿ ಭಾಷಣದ ಸಂಪೂರ್ಣ ಮಾಹಿತಿ ಇಲ್ಲಿದೆ.
ನವದೆಹಲಿ(ಆ.08): ಭಾರತೀಯ ಭಾಷೆ ಮೇಲಿನ ಹಿಡಿತ, ಪ್ರಖರ ಮಾತುಗಳು, ಶಬ್ಧ ಬಂಡಾರ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಆಸ್ತಿ. ನಾಯ್ಡು ಅವರ ಕೆಲ ವಾಕ್ಯಗಳು ಅತ್ಯಂತ ಜನಪ್ರಿಯವಾಗಿದೆ. ವೆಂಕಯ್ಯ ನಾಯ್ಡು ಅವರ ಮಾರ್ಗದರ್ಶನ ಮುಂದೆಯೂ ಭಾರತಕ್ಕೆ ಅವಶ್ಯಕತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಉಪರಾಷ್ಟ್ರಪತಿ ಬೀಳ್ಕೂಡುಗೆ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ. ಈ ವೇಳೆ ವೆಂಕಯ್ಯ ನಾಯ್ಡು ಅವರ ಸೇವೆಯನ್ನು, ಅನುಭವವನ್ನು ಕೊಂಡಾಡಿದ್ದಾರೆ. ವೆಂಕಯ್ಯ ನಾಯ್ಡು ಅವರ ಒನ್ ಲೈನರ್ ಅತ್ಯಂತ ಪ್ರಸಿದ್ಧವಾಗಿದೆ. ನಾಯ್ಡು ಬುದ್ಧವಂತವಾರಾಗಿದ್ದಾರೆ. ಭಾಷೆಯ ಮೇಲಿನ ಹಿಡಿತ ಯಾವಾಗಲೂ ಬೆರಗುಗೊಳಿಸುತ್ತದೆ ಎಂದು ಮೋದಿ ಹೇಳಿದ್ದಾರೆ. ಸದನದಲ್ಲಿ ಎಲ್ಲಾ ಭಾಷೆಯನ್ನು ಬೆಳೆಸುವಲ್ಲಿ ವೆಂಕಯ್ಯ ನಾಯ್ಡು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಸದನದಲ್ಲಿ ಯಾವುದೇ ಸಂಸದ ಯಾವುದೇ ಭಾಷೆಯಲ್ಲಿ ಮಾತನಾಡಿದರೂ ಅದನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ ವೆಂಕಯ್ಯ ನಾಯ್ಡುಗಿದೆ. ಅದು ಅವರ ಶ್ರೇಷ್ಠತೆ ಎಂದು ಮೋದಿ ಹೇಳಿದ್ದಾರೆ.
ಭಾರತೀಯ ಭಾರತೀಯ ಭಾಷೆಗಳ ಬಗ್ಗೆ ವೆಂಕಯ್ಯ ನಾಯ್ಡು ಅವರ ಉತ್ಸಾಹ ಅದಮ್ಯವಾಗಿದೆ. ರಾಜ್ಯಸಭೆಯ ಉನ್ನತೀಕರಣ, ರಾಜ್ಯಸಭೆಯ ಗುಣಮಟ್ಟ ಉನ್ನತೀಕರಿಸುವಲ್ಲಿ ವೆಂಕಯ್ಯ ನಾಯ್ಡು ಅವರ ಪಾತ್ರ ಮುಖ್ಯವಾಗಿದೆ. ವೆಂಕಯ್ಯ ನಾಯ್ಡು ಅವರೊಂದಿಗೆ ಹಲವು ವರ್ಷಗಳಿಂದ ನಿಕಟವಾಗಿ ಕೆಲಸ ಮಾಡಿದ್ದೇನೆ. ವಿಭಿನ್ನ ಹಾಗೂ ಸವಾಲಿನ ಜವಾಬ್ದಾರಿ ತೆಗೆದುಕೊಳ್ಳುವುದನ್ನು ನೋಡಿದ್ದೇನೆ. ಅತ್ಯಂತ ಸಮರ್ಪಣಾ ಭಾವದಿಂದ ನಿರ್ವಹಿಸಿದ್ದಾರೆ ಎಂದು ಮೋದಿ ಭಾಷಣದಲ್ಲಿ ಹೇಳಿದ್ದಾರೆ.
Bengaluru: ಸಂಸ್ಕೃತ ಕಲಿಕೆ ಪುನರುಜ್ಜೀವನಗೊಳಿಸಿ: ವೆಂಕಯ್ಯ ನಾಯ್ಡು
ವೆಂಕಯ್ಯ ನಾಯ್ಡು ಮಾತನಾಡುತ್ತಿದ್ದರೆ ಎಲ್ಲರೂ ಮೌನವಾಗಿ ಕೇಳಿಸಿಕೊಳ್ಳುತ್ತಾರೆ. ಎಲ್ಲರನ್ನು ಹಿಡಿದಿಡುವ ಪ್ರಖರ ಮಾತುಗಳು, ಹಾಸ್ಯ, ಮೋಡಿ ಮಾಡುವ ಸಾಮರ್ಥ್ಯ ನಾಯ್ಡುಗಿದೆ ಎಂದು ಮೋದಿ ಹೇಳಿದ್ದಾರೆ.
ಭಾಷೆ ಕುರಿತು ಪ್ರತಿ ಭಾರಿ ವೆಂಕಯ್ಯ ನಾಯ್ಡು ತಮ್ಮ ಭಾಷಣದಲ್ಲಿ ಒತ್ತು ನೀಡಿದ್ದಾರೆ. ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂಬುದನ್ನು ಪ್ರತಿ ಭಾರಿ ಹೇಳಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಮಕ್ಕಳಿಗೆ ಕಡ್ಡಾಯವಾಗಿ ಮಾತೃಭಾಷೆಯಲ್ಲಿ ನೀಡಬೇಕು. ಪ್ರತಿಯೊಬ್ಬರೂ ಮಾತೃಭಾಷೆ ಮೊದಲು ಕಲಿತು ಪ್ರೋತ್ಸಾಹಿಸಬೇಕು. ಆದರೆ, ಅನ್ಯ ಭಾಷೆಗಳ ಬಗ್ಗೆ ಕೀಳರಿಮೆ, ನಿರ್ಲಕ್ಷ್ಯ ತೋರಬಾರದು ಎಂದಿದ್ದರು. ಮಾತೃಭಾಷೆ ಎಂಬುದು ಕಣ್ಣಿನ ದೃಷ್ಟಿಇದ್ದಂತೆ, ಉಳಿದ ಭಾಷೆಗಳು ಕನ್ನಡಕದ ರೀತಿ. ಕಣ್ಣಿನ ದೃಷ್ಟಿಯೇ ಇಲ್ಲದೆ ಕನ್ನಡಕ ಉಪಯೋಗಕ್ಕೆ ಬರುವುದಿಲ್ಲ. ಇದನ್ನು ಅರಿತು ನಾವು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃಭಾಷಾ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿರುವುದು ಸಂತಸದ ವಿಚಾರ. ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡಿದಾಗ ಮಾತ್ರ ಮಕ್ಕಳಿಗೆ ಶಿಕ್ಷಣದಲ್ಲಿ ಭದ್ರವಾದ ಬುನಾದಿ ಸಿಗುತ್ತದೆ. ಆ ನಂತರ ಇನ್ಯಾವುದೇ ಭಾಷೆಯಲ್ಲಿ ಶಿಕ್ಷಣ ನೀಡಿದರೂ ಸರಿ ಎಂದಿದ್ದರು.
Addressing the Rajya Sabha. https://t.co/moQCcpqQQP
— Narendra Modi (@narendramodi)
ದೇಶದ ಜನಸಂಖ್ಯೆಯಲ್ಲಿ ಶೇ.50ರಷ್ಟುಮಹಿಳೆಯರಿದ್ದಾರೆ. ಇವತ್ತು ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮದೇ ಸಾಧನೆ ತೋರುತ್ತಿದ್ದಾರೆ. ಅವರಿಗೆ ಪುರುಷರಷ್ಟೇ ಗೌರವ, ಅವಕಾಶ ನೀಡಬೇಕು. ದೇಶದಲ್ಲಿ ಇನ್ನಷ್ಟುಮಹಿಳಾ ಸಬಲೀಕರಣ ಆಗಬೇಕಿದೆ ಎಂದು ವೆಂಕಯ್ಯ ನಾಯ್ಡು ಹೇಳಿದ್ದರು.