ಉಪರಾಷ್ಟ್ರಪತಿ ಸ್ಥಾನಕ್ಕೆ ಬೆಂಗಳೂರಿನ ಹೊಸಮಠ ನಾಮಪತ್ರ

Published : Jul 06, 2022, 07:57 AM IST
ಉಪರಾಷ್ಟ್ರಪತಿ ಸ್ಥಾನಕ್ಕೆ ಬೆಂಗಳೂರಿನ ಹೊಸಮಠ ನಾಮಪತ್ರ

ಸಾರಾಂಶ

ಆ.6ರಂದು ನಡೆಯುವ ಉಪರಾಷ್ಟ್ರಪತಿ ಚುನಾವಣೆ ಉಪರಾಷ್ಟ್ರಪತಿ ಸ್ಥಾನಕ್ಕೆ ಬೆಂಗಳೂರಿನ ಹೊಸಮಠ ನಾಮಪತ್ರ

ನವದೆಹಲಿ(ಜು.06): ಆ.6ರಂದು ನಡೆಯುವ ಉಪರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ಮೊದಲ ದಿನವೇ ಕರ್ನಾಟಕದ ವಿಜಯಾನಂದ ಹೊಸಮಠ ಎಂಬುವವರು ಸೇರಿದಂತೆ 5 ಮಂದಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಆದರೆ ನಾಮಪತ್ರ ಅಂಗೀಕಾರ ಆಗಬೇಕೆಂದರೆ 20 ಸಂಸದರು ಸೂಚಕರು ಹಾಗೂ 20 ಸಂಸದರು ಅನುಮೋದಕರಾಗಿರಬೇಕು. ಆದರೆ ಈ ಅರ್ಹತೆಯನ್ನು ನಾಮಪತ್ರಗಳು ಪೂರೈಸಿಲ್ಲ. ಹೀಗಾಗಿ ಈ ನಾಮಪತ್ರಗಳು ಕೇವಲ ಸಾಂಕೇತಿಕವಾಗಿದ್ದು, ತಿರಸ್ಕಾರ ಆಗುವುದು ನಿಶ್ಚಿತ.

ನಾಮಪತ್ರ ಸಲ್ಲಿಸಿದ ಇತರರೆಂದರೆ ತಮಿಳುನಾಡಿನ ಸೇಲಂ ಜಿಲ್ಲೆಯ ಕೆ.ಪದ್ಮರಾಜು, ಅಹಮದಾಬಾದ್‌ನ ಪರೇಶ್‌ಕುಮಾರ್‌ ನಾನುಬಾಯ್‌ ಮುಲಾನಿ ಮತ್ತು ಆಂಧ್ರಪ್ರದೇಶದ ನಾಯ್ಡುಗರಿ ರಾಜಶೇಖರ ಶ್ರೀಮುಖಲಿಂಗಂ.

ಮಧ್ಯಪ್ರದೇಶದ ಆನಂದ್‌ಸಿಂಗ್‌ ಖುಷ್ವಾಹ ಅವರು 15 ಸಾವಿರ ರು. ಭದ್ರತಾ ಠೇವಣಿ ಸಲ್ಲಿಸಿಲ್ಲದ ಕಾರಣದಿಂದ ಅವರ ಅರ್ಜಿ ತಿರಸ್ಕೃತವಾಗಿದೆ. ಉಳಿದ ನಾಲ್ಕು ನಾಮಪತ್ರಗಳ ಪರಿಶೀಲನೆ ಜು.20ರಂದು ನಡೆಯಲಿದೆ. ಪ್ರಸ್ತುತ ಉಪರಾಷ್ಟ್ರಪತಿಯಾಗಿರುವ ವೆಂಕಯ್ಯನಾಯ್ಡು ಅವರ ಅಧಿಕಾರವಧಿ ಆ.10ಕ್ಕೆ ಮುಕ್ತಾಯವಾಗಲಿದೆ. ಹೊಸ ಉಪರಾಷ್ಟ್ರಪತಿ ಆ.11ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಚಾಲನೆ, ಜು.19ರವರೆಗೂ ಅವಕಾಶ

ಅ.6 ರಂದು ನಡೆಯಲಿರುವ ಉಪ-ರಾಷ್ಟ್ರಪತಿ ಚುನಾವಣೆಗೆ ನಾಮಪತ್ರಸಲ್ಲಿಕೆ ಪ್ರಕ್ರಿಯೆ ಮಂಗಳವಾರದಿಂದ ಪ್ರಾರಂಭಗೊಂಡಿದೆ. ಜು.19ರವರೆಗೂ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಜು.20ರಂದು ನಾಮಪತ್ರಗಳ ಪರೀಶಿಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಜು.22ರ ವರೆಗೆ ಅವಕಾಶವಿದೆ.

ಒಬ್ಬ ಅಭ್ಯರ್ಥಿ ಗರಿಷ್ಠ 4 ಸೆಟ್‌ ನಾಮ ಪತ್ರ ಸಲ್ಲಿಸಬಹುದಾಗಿರುತ್ತದೆ. ಉಪ-ರಾಷ್ಟಪತಿ ಚುನಾವಣೆಗೆ ಕೇವಲ ಲೋಕಸಭಾ ಹಾಗೂ ರಾಜ್ಯಸಭೆ ಸದಸ್ಯರಿಗೆ ಮಾತ್ರ ಮತಚಲಾಯಿಸಲು ಅಧಿಕಾರ ಇರುತ್ತದೆ. ಇದರಲ್ಲಿ ಗುಪ್ತ ಮತದಾನ ಮಾಡಲಾಗುವುದು. ಪ್ರಸ್ತುತ ಉಪರಾಷ್ಟ್ರಪತಿ ವೆಂಕಯ್ಯಾ ನಾಯ್ಡು ಅವರ ಅಧಿಕಾರ ಅ.10ರಂದು ಪೂರ್ಣಗೊಳ್ಳಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೇವಲ 2 ನಿಮಿಷ ಮಗಳ ನೋಡಲು 11ಗಂಟೆಗೆ ಸ್ಟೇಶನ್‌ಗೆ ಬಂದ ತಂದೆ, ಭಾವುಕ ಕ್ಷಣದ ವಿಡಿಯೋ
ಬೀದಿಯಲ್ಲಿ ಬಿದ್ದಿದ್ದ ಕಲ್ಲಿಂದ ಹಣ ಮಾಡೋದು ಹೇಗೆ ಎಂದು ತೋರಿಸಿಕೊಟ್ಟ ಹುಡುಗ: ವೀಡಿಯೋ ಭಾರಿ ವೈರಲ್