ಕ್ಯೂಆರ್ ಕೋಡ್ ಮೂಲಕ ರಾಮ ಮಂದಿರ ದೇಣಿಗೆ ಸಂಗ್ರಹ ವಂಚನೆ ಬಯಲು, VHP ಎಚ್ಚರಿಕೆ!

By Suvarna News  |  First Published Dec 31, 2023, 5:41 PM IST

ಶ್ರೀ ರಾಮಜನ್ಮಭೂಮಿ ತೀರ್ಥ ಛೇತ್ರ ಆಯೋಧ್ಯೆ ಅನ್ನೋ ನಕಲಿ ಪೇಜ್ ಸೃಷ್ಟಿಸಲಾಗಿದೆ. ಕ್ಯೂಆರ್ ಕೋಡ್ ಪೋಸ್ಟ್ ಮಾಡಿ ಇದೇಗ ದೇಣಿಗೆ ಸಂಗ್ರಹ ನಡೆಸುತ್ತಿರುವ ವಂಚನೆ ಕುರಿತು ವಿಶ್ವ ಹಿಂದೂ ಪರಿಷತ್ ಎಚ್ಚರಿಸಿದೆ. 


ಆಯೋಧ್ಯೆ(ಡಿ.31) ಶ್ರೀ ರಾಮ ಮಂದಿರ ಉದ್ಘಾಟನೆ ಜನವರಿ 22ರಂದು ನಡೆಯಲಿದೆ. ಅಂತಿಮ ಹಂತದ ನಿರ್ಮಾಣ ಕಾಮಗಾರಿಗಳು ನಡೆಯುತ್ತಿದೆ. ರಾಮ ಮಂದಿರ ನಿರ್ಮಾಣಕ್ಕೆ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ದೇಣಿಗೆ ಸಂಗ್ರಹಿಸಿದೆ. ಈ ದೇಣಿಗೆ ಸಂಗ್ರಹ ಕಾರ್ಯಗಳು ಮುಗಿದು ವರ್ಷಗಳೇ ಉರುಳಿದೆ. ಆದರೆ ಕೆಲ ವಂಚಕರು ಹೊಸ ಹೊಸ ರೂಪದಲ್ಲಿ ದೇಣಿಗೆ ವಂಚನೆ ಆರಂಭಿಸಿದ್ದಾರೆ. ಇತ್ತೀಚೆಗೆ ಮನೆ ಮನೆಗೆ ತೆರಳಿ ನಕಲಿ ರಶೀದಿ ನೀಡಿ ದೇಣಿಗೆ ಸಂಗ್ರಹ ವಂಚನೆ ಕುರಿತು ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ ನೀಡಿತ್ತು. ಇದೀಗ ಸಾಮಾಜಿಕ ಮಾಧ್ಯಮಗಳ ಮೂಲಕ ನಕಲಿ ಪೇಜ್ ಸೃಷ್ಟಿಸಿ ಕ್ಯೂಆರ್ ಕೋಡ್ ಮೂಲಕ ದೇಣಿಗೆ ಸಂಗ್ರಹಿಸುತ್ತಿರುವ ಬಹುದೊಡ್ಡ ವಂಚನೆ ಕುರಿತು ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ ನೀಡಿದೆ. 

ಶ್ರೀರಾಮ ಜನ್ಮಭೂಮಿ ತೀರ್ಥ ಛೇತ್ರ ಟ್ರಸ್ಟ್ ಅನ್ನೋ ನಕಲಿ ಪೇಜ್ ಸೃಷ್ಟಿಸಲಾಗಿದೆ. ಈ ಪೇಜ್‌ನಲ್ಲಿ ಕ್ಯೂಆರ್ ಕೋಡ್ ನೀಡಲಾಗಿದೆ. ಇಷ್ಟೇ ಅಲ್ಲ ಐತಿಹಾಸಿಕ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿ ಎಂದು ಬರೆಯವಾಗಿದೆ. ನಿಮ್ಮ ಕೈಲಾದ ದೇಣಿಗೆ ನೀಡಿ ಮಂದಿರ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿ ಎಂದು ಮನವಿ ಮಾಡಲಾಗಿದೆ. ಆದರೆ ಇದು ಬಹುದೊಡ್ಡ ವಂಚನೆಯಾಗಿದೆ. ಹೀಗಾಗಿ ಈ ವಂಚನೆಯಿಂದ ಭಕ್ತರು ದೂರವಿರಬೇಕಾಗಿ ವಿಶ್ವ ಹಿಂದೂ ಪರಿಷತ್ ಎಚ್ಚರಿಸಿದೆ.

Tap to resize

Latest Videos

ಆಯೋಧ್ಯೆ ತೆರಳಿದ ಮೊದಲ ವಿಮಾನದಲ್ಲಿ ಪ್ರಯಾಣಿಕರಿಂದ ಹನುಮಾನ್ ಚಾಲೀಸ ಪಠಣ!

ವಿಶ್ವಹಿಂದೂ ಪರಿಷತ್ ವಕ್ತಾರ ವಿನೋದ್ ಬನ್ಸಾಲ್ ಈ ಕುರಿತು ಎಚ್ಚರಿಕೆ ನೀಡಿದ್ದಾರೆ. ಶ್ರೀ ರಾಮಜನ್ಮಭೂಮಿ ತೀರ್ಥ ಛೇತ್ರ ಟ್ರಸ್ಟ್ ಅನ್ನೋದು ನಕಲಿ ಪೇಜ್. ಕ್ಯೂಆರ್ ಕೋಡ್ ಮೂಲಕ ಯಾರೂ ಕೂಡ ದೇಣಿಗೆ ನೀಡಬೇಡಿ. ರಾಮ ಜನ್ಮಭೂಮಿ ಟ್ರಸ್ಟ್, ವಿಶ್ವಹಿಂದೂ ಪರಿಷತ್ ಯಾವುದೇ ರೀತಿಯ ದೇಣಿಗೆ ಸಂಗ್ರಹ ಮಾಡುತ್ತಿಲ್ಲ. ಹೀಗಾಗಿ ಯಾರೂ ಕೂಡ ಮೋಸಹೋಗಬೇಡಿ ಎಂದು ವಿನೋದ್ ಬನ್ಸಾಲ್ ಹೇಳಿದ್ದಾರೆ.

ಇತ್ತ ಭಕ್ತರಿಗೆ ಎಚ್ಚರಿಕೆ ನೀಡಿರುವ ವಿಶ್ವ ಹಿಂದೂ ಪರಿಷತ್, ಕೇಂದ್ರ ಗೃಹ ಸಚಿವಾಲಯ ಹಾಗೂ ಪೋಲೀಸರಿಗೆ ಈ ಕುರಿತು ಮಾಹಿತಿ ನೀಡಿದೆ. ರಾಮ ಮಂದಿರ ಟ್ರಸ್ಟ್ ಯಾರಿಗೂ ದೇಣಿಗೆ ಸಂಗ್ರಹ ಮಾಡಲು ಸೂಚಿಲಿಲ್ಲ. ಟ್ರಸ್ಟ್ ವತಿಯಿಂದ ದೇಣಿಗ ಸಂಗ್ರಹ ಮುಕ್ತಾಯಗೊಂಡಿದೆ. ಸದ್ಯ ಯಾರೂ ಕೂಡ ಮೋಸ ಹೋಗಬಾರದು. ನಿಮ್ಮ ಬಳಿ ದೇಣಿಗೆ ಸಂಗ್ರಹ ರಶೀದಿ ಹಿಡಿದು ಯಾರೇ ಬಂದರೂ ಪೊಲೀಸರಿಗೆ ಮಾಹಿತಿ ನೀಡಿ ಎಂದು ವಿಶ್ವ ಹಿಂದೂ ಪರಿಷತ್ ಮನವಿ ಮಾಡಿದೆ.

ಆಯೋಧ್ಯೆಯಲ್ಲಿ ಮೋದಿಗೆ ಹೂಮಳೆ ಸ್ವಾಗತ ನೀಡಿದ ಬಾಬ್ರಿ ಮಸೀದಿ ಅರ್ಜಿದಾರ ಇಕ್ಬಾಲ್ ಅನ್ಸಾರಿ!

click me!