ಕೇದಾರನಾಥ ಸೇರಿ 51 ದೇಗುಲ ನಿರ್ವಹಣೆ ಸರ್ಕಾರದ ಕೈಗೆ: ವಿಎಚ್‌ಪಿ ವಿರೋಧ

By Suvarna News  |  First Published Feb 18, 2021, 11:21 AM IST

ಕೇದಾರನಾಥ, ಬದ್ರೀನಾಥ, ಗಂಗೋತ್ರಿ ಮತ್ತು ಯಮುನೋತ್ರಿ ಸೇರಿದಂತೆ ಪ್ರಮುಖ 51 ದೇವಾಲಯಗಳ ಜವಾಬ್ದಾರಿ ಸರ್ಕಾರಕ್ಕೆ| ಸರ್ಕಾರದ ನಿರ್ಧಾರಕ್ಕೆ  ವಿಎಚ್‌ಪಿ ವಿರೋಧ


ದೆಹ್ರಾಡೂನ್‌(ಫೆ.18): ಕೇದಾರನಾಥ, ಬದ್ರೀನಾಥ, ಗಂಗೋತ್ರಿ ಮತ್ತು ಯಮುನೋತ್ರಿ ಸೇರಿದಂತೆ 51 ದೇವಾಲಯಗಳ ನಿರ್ವಹಣಾ ಜವಾಬ್ದಾರಿಯನ್ನು ಸರ್ಕಾರದಿಂದ ರಚನೆಯಾಗುವ ಒಂದು ಮಂಡಳಿಗೆ ವಹಿಸುವ ಸಂಬಂಧ ಉತ್ತರಾಖಂಡ ಬಿಜೆಪಿ ಸರ್ಕಾರ ಕಾನೂನು ಜಾರಿ ಮಾಡಿದೆ.

ಹಿಂದೂಗಳ ಭಾವನೆ ಪುರಸ್ಕರಿಸಿದ ರಾಜ್ಯ ಸರ್ಕಾರ...!

Tap to resize

Latest Videos

ಆದರೆ ಇದಕ್ಕೆ ವಿಶ್ವ ಹಿಂದೂ ಪರಿಷತ್‌ ಅಸಮಾಧಾನ ವ್ಯಕ್ತಪಡಿಸಿದೆ. ಮತ್ತು ರಾಮಮಂದಿರ ದೇಣಿಗೆ ಅಭಿಯಾನ ಮುಕ್ತಾಯವಾದ ಬಳಿಕ ಉತ್ತರಾಖಂಡ ಸರ್ಕಾರದ ಈ ನಿರ್ಧಾರದ ವಿರುದ್ಧ ಆಂದೋಲನ ಆರಂಭಿಸುವುದಾಗಿ ತಿಳಿಸಿದೆ.

2019ರ ಡಿಸೆಂಬರ್‌ನಲ್ಲಿ ಉತ್ತರಾಖಂಡ ಸರ್ಕಾರ ‘ಉತ್ತರಾಖಂಡ ದೇವಸ್ಥಾನ ನಿರ್ವಹಣಾ ಮಸೂದೆ’ಯನ್ನು ವಿಧಾನಸಭೆಯಲ್ಲಿ ಮಂಡಿಸಿತ್ತು. ಮಸೂದೆ ಬಳಿಕ ಕಾನೂನಾಗಿ ಮಾರ್ಪಟ್ಟಿದೆ. ಆದರೆ ಈ ನಿರ್ಧಾರದ ವಿರುದ್ಧ ದೇವಾಲಯಗಳ ಪುರೋಹಿತರು ಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ ಅಲ್ಲಿನ ಹೈಕೋರ್ಟ್‌ ಸರ್ಕಾರದ ನಿರ್ಧಾರ ಸಂವಿಧಾನಬದ್ಧವಾಗಿದೆ ಎಂದು ತೀರ್ಪು ನೀಡಿತ್ತು.

ವಿಎಚ್‌ಪಿ ಕಾರ್ಯಕರ್ತರು ಪೋಲಿ, ಪುಂಡರಲ್ಲ: ಪೇಜಾವರ ಶ್ರೀ

ಇಲ್ಲಿನ ಪ್ರಸಿದ್ಧ ಕೇದಾರನಾಥ ದೇಗುಲವನ್ನು ವೀರಶೈವರ ಪಂಚಪೀಠಗಳಲ್ಲಿ ಒಂದಾದ ಕೇದಾರ ಪೀಠ ನಿರ್ವಹಿಸುತ್ತಿದೆ.

click me!