ಹಿರಿಯ ಪತ್ರಕರ್ತ ಮಾರ್ಕ್‌ ಟಲ್ಲಿ ನಿಧನ

Kannadaprabha News   | Kannada Prabha
Published : Jan 26, 2026, 04:48 AM IST
MARK TULLY

ಸಾರಾಂಶ

ಬಿಬಿಸಿ ಭಾರತದ ಮುಖ್ಯಸ್ಥರಾಗಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಹೆಸರಾಂತ ಹಿರಿಯ ಪತ್ರಕರ್ತ, ಪದ್ಮಭೂಷಣ ಬ್ರಿಟಿಷ್‌ ಸಂಜಾತ ಭಾರತೀಯ ಪತ್ರಕರ್ತ ಮಾರ್ಕ್‌ ಟಲ್ಲಿ (90) ಅವರು ಭಾನುವಾರ ದೆಹಲಿಯಲ್ಲಿ ನಿಧನರಾದರು.

ನವದೆಹಲಿ: ಬಿಬಿಸಿ ಭಾರತದ ಮುಖ್ಯಸ್ಥರಾಗಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಹೆಸರಾಂತ ಹಿರಿಯ ಪತ್ರಕರ್ತ, ಪದ್ಮಭೂಷಣ ಮಾರ್ಕ್‌ ಟಲ್ಲಿ (90) ಅವರು ಭಾನುವಾರ ದೆಹಲಿಯಲ್ಲಿ ನಿಧನರಾದರು.

ಕೋಲ್ಕತಾದಲ್ಲಿ ಬ್ರಿಟಿಷ್‌ ದಂಪತಿಗೆ ಜನಿಸಿದ್ದ ಟಲ್ಲಿ

1935ರ ಅ.24ರಂದು ಕೋಲ್ಕತಾದಲ್ಲಿ ಬ್ರಿಟಿಷ್‌ ದಂಪತಿಗೆ ಜನಿಸಿದ್ದ ಟಲ್ಲಿ ಅವರು ಭಾರತದಲ್ಲಿಯೇ ಇದ್ದು, ಸೇವೆ ಸಲ್ಲಿಸಿದ್ದರು. ಇವರ ಕೆಲ ಕಾಲದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕಳೆದ ವಾರ ದೆಹಲಿಯ ಸಾಕೇತ್‌ನ ಮ್ಯಾಕ್ಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಅಸುನೀಗಿದ್ದಾರೆ ಎಂದು ಟಲ್ಲಿ ಅವರ ಸ್ನೇಹಿತ ಸತೀಶ್ ಯಾಕೋಬ್‌ ಅವರು ತಿಳಿಸಿದ್ದಾರೆ.

ಅನನ್ಯ ಸೇವೆ:

ಟಲ್ಲಿ ಅವರು ಬಿಬಿಸಿ ನವದೆಹಲಿ ಬ್ಯೂರೋದ ಮುಖ್ಯಸ್ಥರಾಗಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಜೊತೆಗೆ ಬಿಬಿಸಿ ರೇಡಿಯೋಗಳಲ್ಲಿಯೂ ಕಾರ್ಯಕ್ರಮ ನಡೆಸುತ್ತಿದ್ದರು, ಸಾಕಷ್ಟು ಟೀವಿ ಚರ್ಚೆಗಳಲ್ಲಿಯೂ ಭಾಗವಹಿಸುತ್ತಿದ್ದರು. ಬ್ರಿಟಿಷ್‌ ರಾಜ್‌ ಮತ್ತು ಭಾರತೀಯ ರೈಲ್ವೆ ಕುರಿತು ಸಾಕ್ಷ್ಯ ಚಿತ್ರಗಳನ್ನು ರಚಿಸಿದ್ದರು. ಇಷ್ಟೇ ಅಲ್ಲದೇ ಭಾರತದ ಮೇಲೆ ಸಾಕಷ್ಟು ಪುಸ್ತಕಗಳನ್ನು ಬರೆದಿದ್ದ ಟಲ್ಲಿ ಅವರಿಗೆ 2002ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ನೀಡಿ ಗೌರವಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೈಸೂರಿನ ಮಾಜಿ ಬಸ್‌ ಕಂಡಕ್ಟರ್‌ ಸೇರಿ 45 ಅನನ್ಯ ತೆರೆಮರೆ ಸಾಧಕರಿಗೆ ಪದ್ಮ ಗೌರವ
ಧಾರಾವಾಹಿಗಳಲ್ಲಿ ಚಾನ್ಸ್ ಕೊಡಿಸೋದಾಗಿ ನಂಬಿಸಿ ಲೈಂಗಿಕ ಕಿರುಕುಳ! ನಟಿಗೆ ಡ್ರಗ್ಸ್ ನೀಡಿ ಅಶ್ಲೀಲ ವಿಡಿಯೋ ಚಿತ್ರೀಕರಣ!