150 ವರ್ಷ ಹಳೆಯ ಹಿಂದೂ ಕ್ಯಾಲೆಂಡರ್ ಜರ್ಮನಿಯಲ್ಲಿ ಪತ್ತೆ

By Anusha Kb  |  First Published Nov 12, 2024, 12:21 PM IST

ಜರ್ಮನಿಯ ಒಂದು ಸೆಕೆಂಡ್‌ ಹ್ಯಾಂಡ್ ಮಾರುಕಟ್ಟೆಯಲ್ಲಿ 150 ವರ್ಷ ಹಳೆಯ ಹಿಂದೂ ಕ್ಯಾಲೆಂಡರ್ ಪತ್ತೆಯಾಗಿದೆ. 


ಜರ್ಮನಿಯ ಸೆಕೆಂಡ್‌ ಹ್ಯಾಂಡ್ ವಸ್ತುಗಳನ್ನು ಮಾರಾಟ್ಮಾಡುವ ಮಾರುಕಟ್ಟೆಯೊಂದರಲ್ಲಿ (flea market) 150 ವರ್ಷ ಹಳೆಯ ಹಿಂದೂ ಕ್ಯಾಲೆಂಡರ್‌ ಪತ್ತೆಯಾಗಿದೆ. ಜರ್ಮನಿ ಮೂಲದ ವ್ಯಕ್ತಿಯೊಬ್ಬರು ಇದರ ಫೋಟೋ ತೆಗೆದು ಸಾಮಾಜಿಕ ಜಾಲತಾಣವಾದ ರೆಡಿಟ್‌ನಲ್ಲಿ ಹಂಚಿಕೊಂಡಿದ್ದು, ಇದು ಏನು ಎಂದು ಪ್ರಶ್ನೆ ಮಾಡಿದ್ದಾರೆ. ಕೆಲ ಕ್ಷಣದಲ್ಲೇ ಇದು ಭಾರತೀಯರ ಗಮನ ಸೆಳೆದಿದ್ದು, ಅನೇಕ ಭಾರತೀಯರು ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. 185ಕ್ಕೂ ಅಧಿಕ ಜನ ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. 

ಜರ್ಮನಿಯ ಹಂಬ್ರಗ್‌ನ (Hamburg) ಸೆಕೆಂಡ್‌ ಹ್ಯಾಂಡ್ ಮಾರುಕಟ್ಟೆಯಲ್ಲಿ ಈ ಕ್ಯಾಲೆಂಡರ್ ಲಭ್ಯವಾಗಿದೆ.  ದೇವನಾಗರಿ ಲಿಪಿಯಲ್ಲಿರುವ ಈ ಪಠ್ಯದ ಅರ್ಥ ಹಾಗೂ ಮೂಲ ಏನು ಎಂದು ಪ್ರಶ್ನಿಸಿದ್ದಾರೆ.  ಅಕ್ಷರಗಳಿಂದ ತುಂಬಿದ ಎರಡು ಹಳೆಯ, ಹಳದಿ ಪುಟಗಳ ಚಿತ್ರಗಳನ್ನು ಅವರು ಪೋಸ್ಟ್‌ ಮಾಡಿದ್ದು, ಹಿಂದಿ ಅಥವಾ ಸಂಸ್ಕೃತದಲ್ಲಿ ಇರುವಂತೆ ಕಾಣಿಸುತ್ತಿದೆ.  ಪೋಸ್ಟ್ ಮಾಡಿದ ವ್ಯಕ್ತಿ ಇದರಲ್ಲಿ ಇರುವುದನ್ನು ಅರ್ಥಮಾಡಿಕೊಳ್ಳಲು ನೆಟ್ಟಿಗರ ಸಲಹೆ ಕೇಳಿದ್ದಾರೆ. 

Tap to resize

Latest Videos

undefined

ಅನೇಕ ಭಾರತೀಯರು ಕೂಡಲೇ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದು, ಇದು ಹಿಂದೂ ಪಂಚಾಂಗವಾಗಿದೆ ಎಂದಿದ್ದಾರೆ. ಜ್ಯೋತಿಷ್ಯ, ಹಾಗೂ ಶುಭಕಾರ್ಯಗಳನ್ನು ನಡೆಸುವುದಕ್ಕೆ ಕೆಟ್ಟ ಗಳಿಗೆ ಒಳ್ಳೆಯ ಗಳಿಗೆಗಳನ್ನು ತಿಳಿಸುವ ಹಿಂದೂ ಪಂಚಾಗವಾಗಿದೆ. ಈ ಪುಟಗಳು ಮೂಲತಃ ಭಾರತದ ವಾರಣಾಸಿ ಮೂಲದ್ದು ಎಂದು ಜನಗುರುತಿಸಿದ್ದಾರೆ. 

ಇದು ಹಿಂದೂ ಕ್ಯಾಲೆಂಡರ್ ಭಾರ್ಗವ ಪ್ರೆಸ್ ಇದನ್ನು ಪ್ರಿಂಟ್ ಮಾಡಿದೆ. ಈ ಭಾರ್ಗವ ಪ್ರೆಸನ್ನು ಪಂಡಿತ್ ನವಲ್ ಕಿಶೋರ್ ಭಾರ್ಗವ ಅವರು ನಡೆಸುತ್ತಿದ್ದರು. ಪಂಡಿತ್ ನವಲ್ ಕಿಶೋರ್ ಭಾರ್ಗವ ಅವರು ಆ ಕಾಲದ ದೊಡ್ಡ ಪ್ರಕಾಶಕರಲ್ಲಿ ಒಬ್ಬರಾಗಿದ್ದರು. ಇವರ ಮಹತ್ವದ ಬಗ್ಗೆ 'ಮಿರ್ಜಾ ಘಾಲಿಬ್ (Mirza Ghalib) ಎಂಬ ಸಿನಿಮಾದಲ್ಲೂ ಉಲ್ಲೇಖಿಸಲಾಗಿದೆ. ಅದರಲ್ಲಿ ಅವರು ಘಲಿಬ್(Ghalib) ಅನ್ನು ಪಬ್ಲಿಷ್ ಮಾಡುವುದಕ್ಕೆ ನಿರಾಕರಿಸುವ ದೃಶ್ಯವಿದೆ. ಈ ಕ್ಯಾಲೆಂಡರ್ ಅಂದಾಜು 150ರಿಂದ 180 ವರ್ಷ ಹಳೆಯದ್ದು, ತಪ್ಪಾಗಿ ಭಾವಿಸದೇ ಇರುವುದಾದರೆ, ಈ ವಿಚಾರಗಳೆಲ್ಲವೂ ನನಗೆ ಹೇಗೆ ತಿಳಿದಿದೆ ಎಂದರೆ ಅವರು ನಮ್ಮ ಪೂರ್ವಜರಾಗಿದ್ದಾರೆ, ಸುಮಾರು 5 ತಲೆಮಾರುಗಳ ಹಿಂದಿನಿಂದಲೂ ಅವರು ನಮ್ಮ ಸಂಬಂಧಿಯಾಗಿದ್ದಾರೆ. ಅವರ ವಂಶಸ್ಥರು ಈಗಲೂ ಉತ್ತರ ಪ್ರದೇಶದ ಲಕ್ನೋದಲ್ಲಿ ವಾಸ ಮಾಡುತ್ತಿದ್ದಾರೆ. ಆದರೆ ಅವರು ಈಗ ಮುದ್ರಣಾಲಯವನ್ನು ನಿರ್ವಹಣೆ ಮಾಡುತ್ತಿಲ್ಲ ಎಂದು ಜರ್ಮನಿ ವ್ಯಕ್ತಿಯ ರೆಡಿಟ್ ಪೋಸ್ಟ್ ನೋಡಿದ ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. 

ಬಳಕೆದಾರನ ವಿವರಣೆಗೆ ಧನ್ಯವಾದ ಸಲ್ಲಿಸಿದ ಜರ್ಮನ್ ವ್ಯಕ್ತಿ ಇದು ಅಮೂಲ್ಯ ಹಾಗೂ ಅಪರೂಪವೇ ಅಪರೂಪದ್ದಾದರೆ ನಾನು ಇದನ್ನು ರಕ್ಷಿಸುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕೆಲ ಬಳಕೆದಾರರು ಇದು ಅಂತಹ ಅಮೂಲ್ಯ ಅಲ್ಲದೇ ಇದ್ದರೂ, ಭಾರತದಿಂದ ಅದು ಜರ್ಮನಿಗೆ ಹೇಗೆ ತಲುಪಿತು ಎಂಬ ಕಾರಣಕ್ಕೆ ಮಹತ್ವದ್ದಾಗಿ ಎಂದು ಹೇಳಿದರು. 

Found this on a flea market in Hamburg, Germany. Can you tell me what it is?
byu/AcceptableTea8746 inindia

 

click me!