ಮಹಿಳೆ ಹೋಟೆಲ್ ರೂಮ್‌ಗೆ ಬಂದಾಕ್ಷಣ ಸೆಕ್ಸ್‌ಗೆ ಒಪ್ಪಿಗೆ ನೀಡಿದಂತೆ ಅಲ್ಲ: ಹೈಕೋರ್ಟ್

By Mahmad Rafik  |  First Published Nov 12, 2024, 11:22 AM IST

ಮಹಿಳೆಯೊಬ್ಬರು ಪುರುಷನೊಂದಿಗೆ ಹೋಟೆಲ್‌ ಕೋಣೆಯಲ್ಲಿ ಭೇಟಿಯಾದರೆ ಅದು ದೈಹಿಕ ಸಂಪರ್ಕಕ್ಕೆ ಒಪ್ಪಿಗೆ ಎಂದರ್ಥವಲ್ಲ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ.


ಮುಂಬೈ: ಮಹಿಳಯೊಬ್ಬಳು ಪರಪುರುಷನ ಜೊತೆ ಹೋಟೆಲ್ ರೂಮ್‌ ಬುಕ್ ಮಾಡಿ ಹೋದ್ರೆ ಅದು ದೈಹಿಕ ಸಂಪರ್ಕಕ್ಕೆ ಒಪ್ಪಿಗೆ ನೀಡಿದೆ ಅಂತಲ್ಲ ಎಂದು ಬಾಂಬೈ ಹೈಕೋರ್ಟ್‌ನ ಬಾಂಬೆ  ಪೀಠದ ನ್ಯಾಯಾಧೀಶ ಭರತ್ ಪಿ ದೇಶಪಾಂಡೆ ಮಹತ್ವದ ತೀರ್ಪು ನೀಡಿದೆ. ಪ್ರಕರಣವೊಂದರ ವಿಚಾರಣೆ ನಡೆಸಿದ ಪೀಠ, ಹೋಟೆಲ್‌ನ ಕೋಣೆಯೊಂದರಲ್ಲಿ ಸಂತ್ರಸ್ತೆ ಮತ್ತು ಆರೋಪಿಗಳು ಭೇಟಿಯಾಗಿರಬಹುದು. ಹೋಟೆಲ್‌ ಕೋಣೆಗೆ ಬಂದಾಕ್ಷಣ ಮಹಿಳೆ ದೈಹಿಕ ಸಂಪರ್ಕಕ್ಕೆ ಅನುಮತಿ ನೀಡಿದ್ದಾರೆ ಎಂದರ್ಥವಾಗಲ್ಲ ಎಂದು ಹೇಳಿದೆ. 

ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳಿಗೆ ಪರಿಹಾರ ನೀಡುವ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಮಹಿಳೆಯೇ ಹೋಟೆಲ್‌ನಲ್ಲಿ ಕೋಣೆಯೊಂದನ್ನು ಕಾಯ್ದಿರಿಸಿ ಆರೋಪಿ ಜೊತೆ ಹೋಗಿದ್ದಾಳೆ ಎಂದು ವಿಚಾರಣಾ ನ್ಯಾಯಾಲಯದಲ್ಲಿ ವಾದ ಮಂಡಿಸಲಾಗಿತ್ತು. ಹಾಗಾಗಿ ಆರೋಪಿಗಳಿಗೆ ಪರಿಹಾರ ವಿತರಣೆ ಬಗ್ಗೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಈ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿ, ಕೆಲವು ಮಹತ್ವದ ವಿಷಯಗಳನ್ನು ಉಲ್ಲೇಖಿಸಿದೆ. 

Tap to resize

Latest Videos

ಇದು 2020ರಲ್ಲಿ ನಡೆದ ಘಟನೆಯಾಗಿದ್ದು, ಆರೋಪಿ ಗಲ್ಝರ್ ಅಹ್ಮದ್ ಎಂಬಾತ ವಿದೇಶದಲ್ಲಿ ಕೆಲಸ ಕೊಡಿಸುವದಾಗಿ ಹೋಟೆಲ್‌ಗೆ ಕರೆಸಿಕೊಂಡು ಸಹಚರರ ಜೊತೆ ಸೇರಿ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದರು. ಕೋಣೆಗೆ ಹೋಗುತ್ತಿದ್ದಂತೆ ಕೊಲೆ ಬೆದರಿಕೆ ಹಾಕಿ ಅತ್ಯಾಚಾರ ಮಾಡಲಾಗಿತ್ತು. ಆರೋಪಿಗಳು ಬಾತ್‌ರೂಮ್‌ಗೆ ಹೋಗುತ್ತಿದ್ದಂತೆ ಮಹಿಳೆ ಕೋಣೆಯಿಂದ ಹೊರ ಬಂದು, ಹೋಟೆಲ್‌ನಿಂದ ಹೊರಗೆ ಬಂದಿದ್ರು. ನಂತರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು ಎಂದು ವರದಿಯಾಗಿದೆ. 

ಇದನ್ನೂ ಓದಿ:ಗಂಡ-ಹೆಂಡ್ತಿ ಜಗಳದಲ್ಲಿ ಬಡವಾಗಿದ್ದು ಮಗು ಅಲ್ಲ, ಭಾರತೀಯ ರೈಲ್ವೆ; ಬರೋಬ್ಬರಿ 3 ಕೋಟಿ ನಷ್ಟ

ಆರೋಪಿಗಳು ಕೆಲಸದ ಆಮಿಷ ನೀಡಿ ಹೋಟೆಲ್‌ಗೆ ಕರೆಸಿಕೊಂಡಿದ್ದರು. ಅಲ್ಲಿಗೆ ಹೋಗುತ್ತಿದ್ದಂತೆ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಂಧಾನ ಆದರೆ ಲೈಂಗಿಕ ಕಿರುಕುಳ ಕೇಸು ರದ್ದಾಗದು: ಸುಪ್ರೀಂ
‘ಆರೋಪಿ ಮತ್ತು ಸಂತ್ರಸ್ತೆ ನಡುವೆ ಒಪ್ಪಂದ ಆಗಿದೆ ಎಂಬ ಕಾರಣ ನೀಡಿ ಆರೋಪಿ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ ಕೈಬಿಡಲಾಗದು’ ಎಂದು ಸುಪ್ರೀಂಕೋರ್ಟ್‌ ಮಹತ್ವದ ಆದೇಶ ನೀಡಿದೆ. ಅಲ್ಲದೆ ರಾಜಸ್ಥಾನದ ಆರೋಪಿ ವಿರುದ್ಧ ಕ್ರಿಮಿನಲ್‌ ಕಾನೂನುಗಳ ಅನ್ವಯ ವಿಚಾರಣೆ ಮುಂದುವರೆಸುವಂತೆ ಸೂಚಿಸಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಲೈಂಗಿಕ ಕಿರುಕುಳದ ಪ್ರಕರಣಗಳನ್ನು ಎರಡೂ ಪಕ್ಷಗಳ ನಡುವಿನ ಒಪ್ಪಂದದ ಕಾರಣ ನೀಡಿ ರದ್ದುಗೊಳಿಸುತ್ತಿರುವ ಹೊತ್ತಿನಲ್ಲೇ ನ್ಯಾಯಾಲಯದ ಈ ಆದೇಶ ಹೊರಬಿದ್ದಿದೆ.

ಇದನ್ನೂ ಓದಿ:ಸಂಬಂಧ ಬೆಳೆಸಲು ನಿರಾಕರಿಸ್ತಾಳೆ ಪತ್ನಿ ! ವಿಚ್ಛೇದನ ಕೋರಿ ಕೋರ್ಟ್‌ಗೆ ಹೋದವನಿಗೆ ಸಿಕ್ಕ ಉತ್ತರವೇನು?

click me!