ಪ್ರಶ್ನಿಸಿದ ಪಿಯುಸಿ ವಿದ್ಯಾರ್ಥಿನಿಗೆ ಕಪಾಳಕ್ಕೆ ಭಾರಿಸಿದ ತಹಸಿಲ್ದಾರ್, ಅಧಿಕಾರಿಗೆ ಸಂಕಷ್ಟ ತಂದ ವಿಡಿಯೋ!

By Suvarna News  |  First Published Aug 10, 2023, 6:36 PM IST

ಅವ್ಯವಸ್ಥೆ ಕುರಿತು 12ನೇ ತರಗತಿ ವಿದ್ಯಾರ್ಥಿನಿ ತಹಸಿಲ್ದಾರ್‌ನ್ನು ಪ್ರಶ್ನಿಸಿದ್ದಾಳೆ. ಸಂಯಮದಿಂದ ಕೇಳಬೇಕಿದ್ದ ತಹಸಿಲ್ದಾರ್ , ವಿದ್ಯಾರ್ಥಿನಿ ಕಪಾಳಕ್ಕೆ ಭಾರಿಸಿದ್ದಾರೆ. ಇದು ಭಾರಿ ಗದ್ದಲಕ್ಕೆ ಕಾರಣವಾಗಿದೆ. ನೆರೆದಿದ್ದ ಜನ ಒಂದೇ ಸಮನೆ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ತಹಸಿಲ್ದಾರ್ ಪರಾರಿಯಾಗಿದ್ದಾರೆ. ಆದರೆ ಈ ವಿಡಿಯೋ ಅಧಿಕಾರಿಯ ದರ್ಪವನ್ನು ಬಯಲಿಗೆಳೆದಿದೆ.
 


ವಾರಣಾಸಿ(ಆ.10)  ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿರುವುದು ಸರ್ಕಾರಿ ಅಧಿಕಾರಿಯ ಕರ್ತವ್ಯವಾಗಿದೆ. ಆದರೆ ಅವ್ಯವಸ್ಥೆಯನ್ನು ಪ್ರಶ್ನಿಸಿದ ಕಾರಣಕ್ಕೆ ತಹಸಿಲ್ದಾರ್ ಪಿಯುಸಿ ವಿದ್ಯಾರ್ಥಿನಿ ಕಪಾಳಕ್ಕೆ ಭಾರಿಸಿದ ಘಟನೆ ವಾರಣಾಸಿಯಲ್ಲಿ ನಡೆದಿದೆ. ವಿದ್ಯಾರ್ಥಿನಿ ಕಪಾಳಕ್ಕೆ ಭಾರಿಸಿದ ಬೆನ್ನಲ್ಲೇ ನೆರೆದಿದ್ದ ಸಾರ್ವಜನಿಕರು ಒಂದೇ ಸಮನೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರ ಆಕ್ರೋಶ ನೋಡಿ ಗಾಬರಿಗೊಂಡ ತಹಸಿಲ್ದಾರ್ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇತ್ತ ಪೊಲೀಸರು ಮಧ್ಯಪ್ರವೇಶಿಸಿ ಆಕ್ರೋಶಿತ ಸಾರ್ವಜನಿಕರನ್ನು ತಡೆದು ಪರಿಸ್ಥಿತಿ ತಿಳಿಸಿಗೊಳಿಸಿದ್ದಾರೆ.

12ನೇ ತರಗತಿ ವಿದ್ಯಾರ್ಥಿನಿ ದಾಖಲೆಗಳನ್ನು ಹಿಡಿದು ಮಹಿಳಾ ತಹಸಿಲ್ದಾರ್ ಭೇಟಿಯಾಗಿದ್ದಾರೆ. ವಿದ್ಯಾರ್ಥಿನಿ ಜೊತೆಗೆ ಕೆಲ ಸಾರ್ವನಿಕರು ತೆರಳಿದ್ದಾರೆ. ತಹಸಿಲ್ದಾರ್ ಭೇಟಿಯಾಗ ವಿದ್ಯಾರ್ಥಿನಿ ದಾಖಲೆ ಹಿಡಿದು ಅವ್ಯಸ್ಥೆಯನ್ನು ಪ್ರಶ್ನಿಸಿದ್ದಾಳೆ. ಇದಕ್ಕೆ ಇತರರು ಸಾಥ್ ನೀಡಿದ್ದಾರೆ. ತಹಸಿಲ್ದಾರ್ ಪ್ರಶ್ನಿಸುವ ವೇಳೆ ವಿದ್ಯಾರ್ಥಿನಿ ಧ್ವನಿ ಏರಿಸಿದ್ದಾರೆ. ಆಕ್ರೋಶ ಹೊರಹಾಕಿದ್ದಾರೆ.

Tap to resize

Latest Videos

ದೇವಸ್ಥಾನಕ್ಕೆ ನುಗ್ಗಿದ ಭಯೋತ್ಪಾದಕನ ಕಪಾಳಕ್ಕೆ ಭಾರಿಸಿದ ವ್ಯಕ್ತಿ, ಬಳಿಕ ನಡೆದಿದ್ದೇ ಬೇರೆ!

ಇತ್ತ ವಿದ್ಯಾರ್ಥಿನಿ ಪ್ರಶ್ನೆಯನ್ನು ಸಂಯಮದಿಂದ ಆಲಿಸಿ ಸೂಕ್ತ ಪರಿಹಾರ ಅಥವಾ ಸ್ಪಷ್ಟನೆ ನೀಡುವ ಕೆಲಸವನ್ನು ತಹಸಿಲ್ದಾರ್ ಮಾಡಬೇಕಿತ್ತು. ಆದರೆ ವಿದ್ಯಾರ್ಥಿನಿ ಪ್ರಶ್ನೆಯಿಂದ ಉರಿದು ಬಿದ್ದ ತಹಸಿಲ್ದಾರ್ ಕೂಡ ಧ್ವನಿ ಏರಿಸಿ ಮಾತನಾಡಿದ್ದಾರೆ. ಬಳಿಕ ಸಂಯಮ ಕಳೆದುಕೊಂಡ ತಹಸಿಲ್ದಾರ್, ವಿದ್ಯಾರ್ಥಿನಿಯ ಕಪಾಳಕ್ಕೆ ಭಾರಿಸಿದ್ದಾರೆ. 

ತಹಸಿಲ್ದಾರ್ ನಡೆಯಿಂದ ವಿದ್ಯಾರ್ಥಿನಿ ಆಕ್ರೋಶ ಹೆಚ್ಚಾಗಿದೆ.  ಇತ್ತ ವಿದ್ಯಾರ್ಥಿನಿ ಜೊತೆಗಿತ್ತ ಇತರರು ಆಕ್ರೋಶಗೊಂಡಿದ್ದರೆ. ವಿದ್ಯಾರ್ಥಿನಿ ಪ್ರಶ್ನೆಗೆ ಉತ್ತರ ಕೊಡುವ ಬದಲು ಕಪಾಳಕ್ಕೆ ಭಾರಿಸಿದ್ದು ಯಾಕೆ? ನಿಮಗೆ ಹೊಡೆಯಲು ಅಧಿಕಾರ ಕೊಟ್ಟವರು ಯಾರು? ಸರ್ಕಾರಿ ಅಧಿಕಾರಿ ಅನ್ನೋ ಮಾತ್ರಕ್ಕೆ ನಿಮ್ಮ ಮೂಗಿನ ನೇರಕ್ಕೆ ಎಲ್ಲವೂ ನಡೆಯಲು ಪ್ರಯತ್ನಿಸುವುದು ಸರಿಯಲ್ಲ ಎಂದು ಇತರರು ಆಕ್ರೋಶ ಹೊರಹಾಕಿದ್ದಾರೆ.

ವಿದ್ಯಾರ್ಥಿನಿ ಕಪಾಳಕ್ಕೆ ಭಾರಿಸಿದ ಮರುಕ್ಷಣದಲ್ಲೇ ಜನರು ಆಕ್ರೋಶಗೊಂಡಿದ್ದಾರೆ. ಜನರ ಆಕ್ರೋಶಕ್ಕೆ ಬೆದರಿದ ತಹಸಿಲ್ದಾರ್ ಮೆಲ್ಲನೆ ಹಿಂದೆ ಸರಿದಿದ್ದಾರೆ. ಇದೇ ವೇಳೆ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ. ಜನರನ್ನು ಸಮಾಧಾನಪಡಿಸಲು ಮುಂದಾಗಿದ್ದಾರೆ. ಆದರೆ ಜನರ ಆಕ್ರೋಶ ಹೆಚ್ಚಾಗಿದೆ. ಪರಿಸ್ಥಿತಿ ಕೈಮೀರಿದೆ ಎಂದು ಅರಿತ ತಹಸಿಲ್ದಾರ್ ಮೆಲ್ಲನೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ. 

ಕಂಡವರಿಗೆಲ್ಲ ಕಪಾಳ ಮೋಕ್ಷ ಮಾಡ್ತಿದ್ದ ಅಪರಿಚಿತ: ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೊಪ್ಪಿಸಿದ ಜನರು

ಇತ್ತ ಜನರು ವಿದ್ಯಾರ್ಥಿನಿಯ ಕಪಾಳಕ್ಕೆ ಬಾರಿಸಿದ ತಹಸಿಲ್ದಾರ್ ಕ್ಷಮೇ ಕೇಳಬೇಕು ಎಂದು ಜನರು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದ್ದಾರೆ. ಪರಿಸ್ಥಿತಿ ಕೈಮೀರದಂತೆ ನೋಡಿಕೊಂಡಿದ್ದಾರೆ. ಸ್ಥಳದಿಂದ ತೆರಳಿದ ತಹಸಿಲ್ದಾರ್ ವಿರುದ್ಧ ಇದೀಗ ಸಾಮಾಜಿಕ ಜಾಲತಾಣಧಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ವಿದ್ಯಾರ್ಥಿನಿಯ ಪ್ರಶ್ನೆ ಅಸಮರ್ಪಕ ಇರಬಹುದು, ಅಥವಾ ಆಧಾರ ರಹಿತವಾಗಿರಬದು, ಕಠೋರವಾಗಿರಬಹುದು. ಆದರೆ ತಹಸಿಲ್ದಾರ್ ತಾಳ್ಮೆಯಿಂದ ಕೇಳಿಸಿಕೊಂಡ ಪರಿಹಾರ ಸೂಚಿಸಬೇಕು. ಕಪಾಳಕ್ಕೆ ಭಾರಿ ಪ್ರಶ್ನಿಸಿದ ಧ್ವನಿಯನ್ನು ಅಡಗಿಸುವ ಪ್ರಯತ್ನ ಭಾರತದಲ್ಲಿ ನಡೆಯುವುದಿಲ್ಲ ಎಂದು ಹಲವರು ಪ್ರತಿಕ್ರಿಯೆ ನಡೆಸಿದ್ದಾರೆ.

click me!