ಯೋಧರಿಗಾಗಿ ರೊಬೋ ಹೆಲ್ಮೆಟ್ ಆವಿಷ್ಕರಿಸಿದ ವಾರಣಾಸಿ ವಿದ್ಯಾರ್ಥಿನಿ!

By Suvarna NewsFirst Published Aug 15, 2020, 6:14 PM IST
Highlights

ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಕ್ಷೇತ್ರ ವಾರಣಾಸಿ ವಿದ್ಯಾರ್ಥಿನಿ ಹೊಸ ಸಂಶೋಧನೆ ಮಾಡಿ ದೇಶದ ಗಮನಸೆಳೆದಿದ್ದಾಳೆ. ಯುದ್ಧದ ಸಂದರ್ಭದಲ್ಲಿ ಯೋಧರಿಗೆ ನೆರವಾಗುವ ರೊಬೋ ಹೆಲ್ಮೆಟ್ ಅಭಿವೃದ್ಧಿ ಪಡಿಸಿದ್ದಾಳೆ. ವಿದ್ಯಾರ್ಥಿನಿ ಅಭಿವೃದ್ಧಿ ಪಡಿಸಿದ ಯೋಧರ ರೊಬೋ ಹೆಲ್ಮೆಟ್ ವಿಶೇಷತೆ ಏನು?

ವಾರಣಾಸಿ(ಆ.15): ಭಾರತದ ವಿದ್ಯಾರ್ಥಿಗಳ ಸಂಶೋಧನೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ, ಪುಸ್ಕಾರ ಸಿಕ್ಕಿದ ಅದೆಷ್ಛೋ ಉದಾಹರಣೆಗಳಿವೆ. ಇದೀಗ ಪ್ರಧಾನಿ ನರೇಂದ್ರ ಮೋದಿ ವಾರಣಾಸಿ ಕ್ಷೇತ್ರದ ವಿದ್ಯಾರ್ಥಿನಿ ಅಂಜಲಿ ಶ್ರೀವಾತ್ಸವ ಯುದ್ಧದ ಸಂದರ್ಭದಲ್ಲಿ ಅತೀ ಉಪಯುಕ್ತವಾದ ಯೋಧರ ರೊಬೋ ಹೆಲ್ಮೆಟ್ ಅಭಿವೃದ್ಧಿ ಪಡಿಸಿದ್ದಾಳೆ. ವಿಶ್ವದ ರಕ್ಷಣಾ ವ್ಯವಸ್ಥೆಗೆ ದಿಕ್ಕನ್ನೇ ಬದಲಿಸಬಲ್ಲ ಈ ರೊಬೋ ಹೆಲ್ಮೆಟ್ ಹಲವು ವಿಶೇಷತೆ ಹೊಂದಿದೆ.

ವಿದ್ಯಾರ್ಥಿಗಳಿಗಾಗಿ ಪ್ರಧಾನಿ ಮೋದಿ ಹೊಸ ಐಡಿಯಾ!

ವಾರಣಾಸಿಯ ಆಶೋಕ ಟೆಕ್ನಾಲಜಿ ಸಂಸ್ಥೆ ವಿದ್ಯಾರ್ಥಿನಿ ಅಂಜಲಿ ನೂತನ ಆವಿಷ್ಕಾರ ಮಾಡಿದ್ದಾಳೆ. ರೆಡಿಯೋ ಸಿಗ್ನಲ್ ಮೂಲಕ ಶತ್ರುಗಳನ್ನು ಪತ್ತೆ ಹೆಚ್ಚಬಲ್ಲ ಹಾಗೂ ಮೈಕ್ರೋ ಗನ್ ಮೂಲಕ ಶತ್ರುಗಳ ಮೇಲೆ ದಾಳಿ ನಡೆಸಬಲ್ಲ ವಿಶೇಷ ಸಾಮರ್ಥ್ಯವೂ ಈ ರೊಬೋ ಹೆಲ್ಮೆಟ್‌ಗೆ ಇದೆ. 

ರಫೇಲ್‌ ವಿಮಾನ ಪೈಲಟ್‌ ಅರುಣ್‌ ವಿಜಯಪುರ ಸೈನಿಕ ಶಾಲೆ ವಿದ್ಯಾರ್ಥಿ!

ರೊಬೊ ಹೆಲ್ಮೆಟ್ ಧರಿಸಿದ ಯೋಧನಿಗೆ ಹಲವು ಸಿಗ್ನಲ್‌ಗಳನ್ನು ನೀಡಲಿದೆ. ಹಿಂದಿನಿಂದ ದಾಳಿ ಮಾಡುವ ಯತ್ನ ನಡೆದರೆ ಈ ಹೆಲ್ಮೆಟ್ ಯೋಧನಿಗೆ ಎಚ್ಚರಿಸಲಿದೆ. ಇಷ್ಟೇ ಅಲ್ಲ ಮೈಕ್ರೋ ಗನ್ ಮೂಲಕ ಪ್ರತಿ ದಾಳಿ ನಡೆಸಲು ನೆರವು ನೀಡಲಿದೆ. ರೆಡಿಯೋ ಸಿಗ್ನಲ್ ಮೂಲಕ ಶತ್ರು ಹಾಗೂ ಶತ್ರುಗಳ ಶಸ್ತ್ರಾಸ್ತಗಳನ್ನು ಪತ್ತೆ ಹಚ್ಚಲಿದೆ. ಇಷ್ಟೇ ಅಲ್ಲ ಯೋಧನಿಗೆ ಸೂಚನೆ ನೀಡಲಿದೆ. ಇದರ ಆಧಾರದ ಮೇಲೆ ಯೋಧರ ಪ್ರತಿ ದಾಳಿ ಅಥಲಾ ಶತ್ರು ಸೈನ್ಯದ ಮೇಲೆ ದಾಳಿ ನಡೆಸಬುಹುದು.

ನೂತನ ರೊಬೋ ಹೆಲ್ಮೆಟ್ ಭಾರತೀಯ ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಿದೆ. ಯೋಧರಿಗೆ ಯುದ್ಧದ ಸಂದರ್ಭದಲ್ಲಿ, ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ನೆರವಾಗಲಿದೆ. ಕೇಂದ್ರ ರಕ್ಷಣಾ ಇಲಾಖೆಗೆ ಈ ಕುರಿತು ಪತ್ರ ಬರೆಯಲಾಗಿದೆ. ರಕ್ಷಣ ಇಲಾಖೆ ಕೈಜೋಡಿಸಿದರೆ ಮತ್ತಷ್ಟು ಪರಿಣಾಮಕಾರಿಯಾದ ಹೆಲ್ಮೆಟ್ ಅಭಿವೃದ್ಧಿ ಪಡಿಸಲು ಸಾಧ್ಯವಾಗಲಿದೆ ಎಂದು ಅಂಜಲಿ ಶ್ರೀವಾತ್ಸವ್ ಹೇಳಿದ್ದಾರೆ.
 

click me!