
ಡೆಹ್ರಾಡೂನ್(ಆ.15): ಕೊರೋನಾತಂಕ ದೇಶವನ್ನು ಕಂಗೆಡಿಸಿದೆ. ಹೀಗಿರುವಾಗ ಉತ್ತರಾಖಂಡ್ ಸರ್ಕಾರ ಕೊರೋನಾವನ್ನು ಮಣಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದೆ. ಸುಗ್ರೀವಾಜ್ಞೆಯೊಂದನ್ನು ಜಾರಿಗೊಳಿಸಿದ್ದು, ಇದರ ಅನ್ವಯ ಎಲ್ಲಾ ಶಾಸಕರ ವೇತನದಿಂದ ಶೇ. 30ರಷ್ಟು ಅನುದಾನ ಕೊರೋನಾ ಸಮರಕ್ಕೆ ನೀಡುವುದು ಖಡ್ಡಾಯಗೊಳಿಸಿದೆ.
ಪ್ಲೇಸ್‌ಮೆಂಟ್: ಪಿಇಎಸ್ ವಿವಿ 3 ವಿದ್ಯಾರ್ಥಿಗಳಿಗೆ ವರ್ಷಕ್ಕೆ 39 ಲಕ್ಷ ರು. ವೇತನ..!
ಗುರುವಾರ ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಸುಗ್ರೀವಾಜ್ಞೆ ಜಾರಿಗೊಳಿಸಲಾಗಿದೆ. ಇದರ ಅನ್ವಯ ಪ್ರತಿಯೊಬ್ಬ ಶಾಸಕನೂ ತಮ್ಮ ವೇತನದ ಶೇ. 30ರಷ್ಟು ಭಾಗವನ್ನು ಕೊರೋನಾ ಹೋರಾಟಕ್ಕೆ ಖಡ್ಡಾಯವಾಗಿ ನೀಡಬೇಕು. ಇದು ಏಪ್ರಿಲ್ 2020ರಿಂದ ಮಾರ್ಚ್ 2021ವರೆಗೆ ಜಾರಿಯಲ್ಲಿರಲಿದೆ.
ಲಾಕ್‌ಡೌನ್ ಅವಧಿಯಲ್ಲಿ ಸೇವೆ ಸಲ್ಲಿಸದಿದ್ದರೂ ಬಿಎಂಟಿಸಿ ಎಲ್ಲ ಸಿಬ್ಬಂದಿಗೂ ವೇತನ!
ಈ ಸಭೆಯಲ್ಲಿ ಮೂರು ದಿನಗಳ ಸೆಪ್ಟೆಂಬರ್ 23 ರಿಂದ 25ವರೆಗೆ ಡೆಹ್ರಾಡೂನ್‌ನಲ್ಲಿ ಮೂರು ದಿನಗಳ ವಿಶೇಷ ಅಧಿವೇಶನವನ್ನು ನಡೆಸುವ ಕುರಿತಾಗಿಯೂ ಉಲ್ಲೇಖಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ