ವೈಕುಂಠ ಏಕಾದಶಿ ಸಂಭ್ರಮ: ತಿರುಪತಿ ಕಾಲ್ತುಳಿತದ ಗಾಯಾಳುಗಳಿಗೆ ತಿಮ್ಮಪ್ಪನ ವಿಶೇಷ ದರ್ಶನ!

By Kannadaprabha News  |  First Published Jan 11, 2025, 8:58 AM IST

ತಿರುಪತಿಯಲ್ಲಿ ಕಾಲ್ತುಳಿತ ದುರಂತದ ನಡುವೆಯೇ ವೈಕುಂಠ ಏಕಾದಶಿ ಸಂಭ್ರಮ ಜೋರಾಗಿದ್ದು, ಕಾಲ್ತುಳಿತದಲ್ಲಿ ಗಾಯಗೊಂಡ ಭಕ್ತರಿಗೆ ಶುಕ್ರವಾರ ವೆಂಕಟೇಶ್ವರನ ವಿಶೇಷ ದರ್ಶನ ವ್ಯವಸ್ಥೆಯನ್ನು ಕಲ್ಪಿಸಲಾಯಿತು.


ತಿರುಪತಿ: ತಿರುಪತಿಯಲ್ಲಿ ಕಾಲ್ತುಳಿತ ದುರಂತದ ನಡುವೆಯೇ ವೈಕುಂಠ ಏಕಾದಶಿ ಸಂಭ್ರಮ ಜೋರಾಗಿದ್ದು, ಕಾಲ್ತುಳಿತದಲ್ಲಿ ಗಾಯಗೊಂಡ ಭಕ್ತರಿಗೆ ಶುಕ್ರವಾರ ವೆಂಕಟೇಶ್ವರನ ವಿಶೇಷ ದರ್ಶನ ವ್ಯವಸ್ಥೆಯನ್ನು ಕಲ್ಪಿಸಲಾಯಿತು.

52 ಗಾಯಾಳುಗಳಿಗೆ ಸಿಎಂ ಚಂದ್ರಬಾಬು ನಾಯ್ಡು ಸೂಚನೆ ಮೇರೆಗೆ ವಿಶೇಷ ತಿರುಮಲ ತಿರುಪತಿ ದೇವಸ್ಥಾನಂ ಸಮಿತಿ (ಟಿಟಿಡಿ) ವಿಶೇಷ ವೈಕುಂಠ ದ್ವಾರ ಪ್ರವೇಶದ ವ್ಯವಸ್ಥೆ ಮಾಡಿತ್ತು.

Tap to resize

Latest Videos

ದರ್ಶನದ ಬಳಿಕ ಅವರಿಗೆ ವಾಹನ ವ್ಯವಸ್ಥೆ ಮಾಡಿ ಅವರ ಸ್ವಂತ ಊರುಗಳಿಗೆ ಕಳಿಸಿಕೊಡಲಾಯಿತು.ಗಾಯಗೊಂಡ ಭಕ್ತರು ದರ್ಶನಕ್ಕೆ ವಿಶೇಷ ಅವಕಾಶ ಕಲ್ಪಿಸಿದ ಟಿಟಿಡಿ, ಸಿಎಂ ಚಂದ್ರಬಾಬು ನಾಯ್ಡು, ಡಿಸಿಎಂ ಪವನ್ ಕಲ್ಯಾಣ್‌ಗೆ ಧನ್ಯವಾದ ಸಲ್ಲಿಸಿದ್ದಾರೆ.

Tirupati Temple Stamped: ತಿರುಪತಿಯಲ್ಲಿ ಕಾಲ್ತುಳಿಕ್ಕೆ ಕಾರಣ ಬಯಲು! ಪೊಲೀಸರ ಆ ಎಡವಟ್ಟಿನಿಂದಲೇ ದುರಂತ!

ಘಟನೆ ಹಿನ್ನೆಲೆ

ಜ.10ರಿಂದ 19ರವರೆಗೆ ತಿರುಪತಿಯಲ್ಲಿ ವೈಕುಂಠ ದ್ವಾರ ದರ್ಶನ ನಡೆಯಲಿದೆ. ಇದಕ್ಕೆ ಗುರುವಾರ ಬೆಳಗ್ಗೆ 5 ಗಂಟೆಯಿಂದ ಟಿಕೆಟ್‌ ವಿತರಿಸಲು ಟಿಟಿಡಿ 8 ಕಡೆ ಕೌಂಟರ್‌ಗಳನ್ನು ತೆರೆದಿತ್ತು. ಆದರೆ ಬುಧವಾರ ಮಧ್ಯಾಹ್ನದಿಂದಲೇ ಸಾವಿರಾರು ಜನರು ಈ ಟಿಕೆಟ್‌ ವಿತರಣೆ ಕೌಂಟರ್‌ ಬಳಿ ನೆರೆದಿದ್ದರು. ಈ ವೇಳೆ ಶ್ರೀನಿವಾಸಂ, ಬೈರಾಗಿಪಟ್ಟೇಡ ರಾಮಾನಾಯ್ಡು ಶಾಲೆ ಮತ್ತು ಸತ್ಯಾನಾರಾಯಣಪುರಂ ಕೌಂಟರ್‌ಗಳಿಗೆ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿ ಸಾವು-ನೋವು ಸಂಭವಿಸಿದೆ. ಘಟನೆಯಲ್ಲಿ  6 ಭಕ್ತರು ಸಾವನ್ನಪ್ಪಿ 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 

ತಿರುಪತಿ ಕಾಲ್ತುಳಿತ ಪ್ರಕರಣ, ಮುಂಜಾಗೃತ ಕ್ರಮ ಇಲ್ಲದೇ ಟಿಕೆಟ್‌ ವಿತರಣೆ ಕಾರಣ?

2022ರಲ್ಲೂ ಕಾಲ್ತುಳಿತ:

2022ರ ಏಪ್ರಿಲ್‌ನಲ್ಲಿ ಸರ್ವದರ್ಶನ ಟಿಕೆಟ್ ಪಡೆಯಲು ಜನರು ನುಗ್ಗಿದ ಕಾರಣ ಕಾಲ್ತುಳಿತ ಸಂಭವಿಸಿ ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ಆದರೆ ಅದೃಷ್ಟವಶಾತ್‌ ಯಾವುದೇ ಸಾವು ಸಂಭವಿಸಿರಲಿಲ್ಲ.

click me!