2012ರಲ್ಲಿ ಗುಜರಾತ್ ಸರ್ಕಾರ ಯೂಸುಫ್ ಪಠಾಣ್‌ರಿಗೆ ಸರ್ಕಾರಿ ಜಾಗವನ್ನು ನೀಡುವುದು ಬೇಡ ಎಂದು ಆದೇಶಿಸಿದ್ದರೂ ಇತ್ತೀಚೆಗೆ ಯೂಸುಫ್ ಆ ಜಾಗದಲ್ಲಿ ತಡೆಗೋಡೆ ನಿರ್ಮಿಸುತ್ತಿರುವ ಕುರಿತು ದೂರು ಬಂದಿದೆ.
ವಡೋದರಾ: ಮಾಜಿ ಕ್ರಿಕೆಟಿಗ ಹಾಗೂ ಬಂಗಾಳದ ಹಾಲಿ ಟಿಎಂಸಿ ಸಂಸದ ಯೂಸುಫ್ ಪಠಾಣ್ ಅವರು ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದು, ಅದನ್ನು ತೆರವು ಮಾಡಬೇಕು ಎಂದು ಗುಜರಾತ್‌ನ ವಡೋದರಾ ನಗರ ಪಾಲಿಕೆ ನೋಟಿಸ್ ನೀಡಿದೆ.
ಪಠಾಣ್ ಈಗ ಬಂಗಾಳದಿಂದ ಆಯ್ಕೆ ಆಗಿದ್ದರೂ ವಡೋದರಾ ಮೂಲದವರು. 2012ರಲ್ಲಿ ಗುಜರಾತ್ ಸರ್ಕಾರ ಯೂಸುಫ್ ಪಠಾಣ್‌ರಿಗೆ ಸರ್ಕಾರಿ ಜಾಗವನ್ನು ನೀಡುವುದು ಬೇಡ ಎಂದು ಆದೇಶಿಸಿದ್ದರೂ ಇತ್ತೀಚೆಗೆ ಯೂಸುಫ್ ಆ ಜಾಗದಲ್ಲಿ ತಡೆಗೋಡೆ ನಿರ್ಮಿಸುತ್ತಿರುವ ಕುರಿತು ದೂರು ಬಂದಿದೆ. ಈ ಹಿನ್ನೆಲೆಯಲ್ಲಿ ಪಾಲಿಗೆ ಜೂ.6ರಂದು ಸಂಸದರಿಗೆ ನೋಟಿಸ್ ನೀಡಿದೆ.
ನಟಿ ರೋಜಾ ವಿರುದ್ಧ ತಿರುಪತಿ ದರ್ಶನಕ್ಕಾಗಿ ಭಕ್ತರಿಂದ ಹಣ ಸಂಗ್ರಹದ ಆರೋಪ? ತನಿಖೆಗೆ ಒತ್ತಾಯ
ಏನಿದು ಪ್ರಕರಣ?:
2012ರಲ್ಲಿ ವಡೋದರ ನಗರದ ತನದಲ್ಜ ಪ್ರದೇಶದಲ್ಲಿ ತಮ್ಮ ಮನೆಯ ಪಕ್ಕದಲ್ಲಿದ್ದ ಸರ್ಕಾರಿ ನಿವೇಶನವನ್ನು ತಮಗೇ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ನಗರ ಪಾಲಿಕೆ ಒಪ್ಪಿದರೂ ಗುಜರಾತ್ ಸರ್ಕಾರ ಪ್ರಸ್ತಾವವನ್ನು ತಿರಸ್ಕರಿಸಿತ್ತು. ಆದರೂ ಯೂಸುಫ್ ನಿಯಮಬಾಹಿರವಾಗಿ ನಿವೇಶನವನ್ನು ಒತ್ತುವರಿ ಮಾಡಿಕೊಂಡು ತಡೆಗೋಡೆ ನಿರ್ಮಿಸುತ್ತಿರುವ ಕುರಿತು ಬಿಜೆಪಿ ನಗರ ಪಾಲಿಕೆ ಸದಸ್ಯ ವಿಜಯ್ ಪವಾರ್ ಪಾಲಿಕೆಯ ಸಭೆಯಲ್ಲಿ ವಿಷಯ ಮಂಡಿಸಿದ್ದರು.
ಪಶ್ಚಿಮ ಬಂಗಾಳದ ಬಹರಂಪುರ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಯುಸೂಫ್ ಪಠಾಣ್, 85 ಸಾವಿರಕ್ಕೂ ಅಧಿಕ ಮತಗಳಿಂದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನು ಸೋಲಿಸಿದ್ದಾರೆ. ಅಧೀರ್ ರಂಜನ್ ಚೌಧರಿ ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.
ಪ್ರಮಾಣ ಸ್ವೀಕರಿಸಿದ ಮರುದಿನವೇ ಶಾಸಕ ಸ್ಥಾನಕ್ಕೆ ಸಿಎಂ ಪತ್ನಿ ರಾಜೀನಾಮೆ