Covid-19 Vaccine: ಶೀಘ್ರದಲ್ಲೇ ಮಕ್ಕಳಿಗೆ ಕೊರೊನಾ ಲಸಿಕೆ, ವಯೋವೃದ್ಧರಿಗೆ ಬೂಸ್ಟರ್‌ ಡೋಸ್‌?

Kannadaprabha News   | Asianet News
Published : Nov 23, 2021, 10:21 AM IST
Covid-19 Vaccine: ಶೀಘ್ರದಲ್ಲೇ ಮಕ್ಕಳಿಗೆ ಕೊರೊನಾ ಲಸಿಕೆ, ವಯೋವೃದ್ಧರಿಗೆ ಬೂಸ್ಟರ್‌ ಡೋಸ್‌?

ಸಾರಾಂಶ

*ಆರೋಗ್ಯ ಸಮಸ್ಯೆ ಇರುವ ಮಕ್ಕಳಿಗೆ ಮೊದಲು ಲಸಿಕೆ ನೀಡಿಕೆ *ವಯೋವೃದ್ಧರಿಗೆ ಬೂಸ್ಟರ್‌ ಡೋಸ್‌ ಬಗ್ಗೆಯೂ ಸಮಾಲೋಚನೆ *ಆದರೆ ಬೂಸ್ಟರ್‌ ಡೋಸ್‌ ಅಗತ್ಯ ಸಾಬೀತಿಗೆ ಪುರಾವೆಯಿಲ್ಲ *4 ರಾಜ್ಯಗಳಲ್ಲಿ ಲಸಿಕೆ ಪ್ರಮಾಣ ಹೆಚ್ಚಿಸಲು ಮಾಂಡವೀಯ ಮನವಿ  

ನವದೆಹಲಿ (ನ.23): ಮಕ್ಕಳಿಗೆ ಕೋವಿಡ್‌ ಲಸಿಕೆ (Covid-19 Vaccine for Children) ನೀಡುವ ಹಾಗೂ ವಯಸ್ಕರಿಗೆ ಬೂಸ್ಟರ್‌ ಡೋಸ್‌ (Booster Dose for adults) ನೀಡುವ ಕುರಿತು ಕೇಂದ್ರ ಸರ್ಕಾರ ಮುಂದಿನ 2 ವಾರಗಳಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಕೋವಿಡ್‌ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಲು ರಚಿಸಲಾಗಿರುವ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯು (Advisory on immunisation) ಮುಂದಿನ 2 ವಾರದಲ್ಲಿ ತನ್ನ ಮುಂದಿನ ಸಭೆ ಸೇರಲಿದೆ. ಅಲ್ಲಿ ಮಕ್ಕಳಿಗೆ ಲಸಿಕೆ ನೀಡುವ ಕುರಿತು ಚರ್ಚೆ ನಡೆಯಲಿದೆ. ಒಂದೊಮ್ಮೆ ಮಕ್ಕಳಿಗೆ ಲಸಿಕೆ ನೀಡಲು ಅನುಮೋದನೆ ನೀಡಿದರೆ, ವಿವಿಧ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಮಕ್ಕಳಿಗೆ ಆದ್ಯತೆಯ ಮೇರೆಗೆ ಕೋವಿಡ್‌ ಲಸಿಕೆ ನೀಡಲು ಶಿಫಾರಸು ಮಾಡಲಾಗುವುದು. ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನ 2022ರ ಜನವರಿಯಿಂದ ಆರಂಭವಾಗುವ ಸಾಧ್ಯತೆ ಇದ್ದು, ಮಾಚ್‌ರ್‍ ತಿಂಗಳೊಳಗೆ ಎಲ್ಲಾ ಮಕ್ಕಳಿಗೂ ಲಸಿಕೆ ನೀಡುವ ಉದ್ದೇಶವಿದೆ ಎಂದು ಮೂಲಗಳು ತಿಳಿಸಿವೆ.

12 ವರ್ಷ ಮೇಲ್ಪಟ್ಟವರಿಗೆ ಝೈಕೋವ್‌-ಡಿ ಲಸಿಕೆ!  

ಸದ್ಯ ಝೈಕೋವ್‌-ಡಿ ಲಸಿಕೆಯನ್ನು (ZyCoV-D vaccine) 12 ವರ್ಷ ಮೇಲ್ಪಟ್ಟಎಲ್ಲಾ ಮಕ್ಕಳಿಗೂ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಮತ್ತೊಂದೆಡೆ ಕೋವ್ಯಾಕ್ಸಿನ್‌ 2 ವರ್ಷ ಮೇಲ್ಪಟ್ಟಎಲ್ಲಾ ವಯೋಮಾನದ ಮಕ್ಕಳಿಗೂ ನೀಡಬಹುದಾದ ಲಸಿಕೆ ಅಭಿವೃದ್ಧಿಪಡಿಸಿದೆ. ಅದಕ್ಕೆ ಶೀಘ್ರವೇ ಅನುಮೋದನೆ ಸಿಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮಕ್ಕಳಿಗೂ ಲಸಿಕೆ ಅಭಿಯಾನ ಆರಂಭಿಸಲು ಸಿದ್ಧತೆ ನಡೆಯುತ್ತಿದೆ ಎನ್ನಲಾಗಿದೆ.

ZyCoV-D vaccine| ಮಕ್ಕಳಿಗೆ ನೀಡುವ ಲಸಿಕೆ ದರ ಡೋಸ್‌ಗೆ 358 ರು.!

ಇನ್ನು 60 ವರ್ಷದ ದಾಟಿದವರು ಈಗಾಗಲೇ ಎರಡೂ ಡೋಸ್‌ ಪಡೆದುಕೊಂಡು 6-9 ತಿಂಗಳು ತುಂಬುತ್ತಾ ಇರುವ ಹಿನ್ನೆಲೆಯಲ್ಲಿ ಅವರಿಗೆ ಬೂಸ್ಟರ್‌ ಡೋಸ್‌ ನೀಡಬೇಕಾ ಎಂಬ ಚಿಂತನೆ ಸರ್ಕಾರದ ಮಟ್ಟದಲ್ಲಿದೆ. ಈ ಬಗ್ಗೆಯೂ ತಾಂತ್ರಿಕ ಸಲಹಾ ಸಮಿತಿ ತನ್ನ ಶಿಫಾರಸು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಬೂಸ್ಟರ್‌ ಡೋಸ್‌ ಅಗತ್ಯ ಸಾಬೀತಿಗೆ ಪುರಾವೆಯಿಲ್ಲ!

ಕೋವಿಡ್‌- 19ರ ವಿರುದ್ಧ ಬೂಸ್ಟರ್‌ ಲಸಿಕೆಯ ಅಗತ್ಯವನ್ನು ಸಾಬೀತು ಪಡಿಸುವಂತಹ ಯಾವುದೇ ವೈಜ್ಞಾನಿಕ ಪುರಾವೆಗಳು (Scientific Proof) ಇದುವರೆಗೆ ದೊರೆತಿಲ್ಲ. ಹೀಗಾಗಿ ಇದುವರೆಗೂ 2ನೇ ಡೋಸ್‌ ಪಡೆದುಕೊಳ್ಳದೇ ಇದ್ದವರಿಗೆ ಅದನ್ನು ವಿತರಿಸುವುದೇ ಸರ್ಕಾರದ ಆದ್ಯತೆಯಾಗಬೇಕು ಎಂದು ಐಸಿಎಂಆರ್‌ ಮಹಾ ನಿರ್ದೇಶಕ ಡಾ. ಬಲರಾಮ್‌ ಭಾರ್ಗವ ಸೋಮವಾರ ಹೇಳಿದ್ದಾರೆ.

Mysuru ಮಕ್ಕಳಿಗೆ ಕಡ್ಡಾಯ ನ್ಯೂಮೋಕಾಕಲ್‌ ಕಾಂಜುಗೇಟ್‌ ಲಸಿಕೆಗೆ ಚಾಲನೆ

ಈ ಕುರಿತು ಪಿಟಿಐ (PTI) ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಭಾರ್ಗವ ‘ಬೂಸ್ಟರ್‌ ಡೋಸ್‌ ವಿಷಯದಲ್ಲಿ ಸರ್ಕಾರ ಏಕಪಕ್ಷೀಯವಾಗಿ ಈ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗದು. ಈ ಬಗ್ಗೆ ಐಸಿಎಂಆರ್‌ ಮತ್ತು ತಜ್ಞರ ಸಮಿತಿ ಶಿಫಾರಸಿನ ಬಳಿಕಷ್ಟೇ ಸರ್ಕಾರ ಮುಂದಿನ ಹೆಜ್ಜೆ ಇಡಬಹುದು. ಮೇಲಾಗಿ, ಲಸಿಕೆ ಸಂಶೋಧನೆಯಿಂದ ಹಿಡಿದು, ಲಸಿಕೆ ವಿತರಣೆಯ ಎಲ್ಲಾ ವಿಷಯದಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರು ತಜ್ಞರ ಸಮಿತಿಗೇ ಹೆಚ್ಚಿನ ಮನ್ನಣೆ ನೀಡಿದ್ದಾರೆ. ಬೂಸ್ಟರ್‌ ಡೋಸ್‌ ವಿಷಯದಲ್ಲೂ ಅದೇ ಸಂಪ್ರದಾಯ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

4 ರಾಜ್ಯಗಳಲ್ಲಿ ಲಸಿಕೆ ಪ್ರಮಾಣ ಹೆಚ್ಚಿಸಲು ಮಾಂಡವೀಯ ಮನವಿ

ಕಡಿಮೆ ಪ್ರಮಾಣದ ಕೋವಿಡ್‌ ಲಸಿಕೆ ವಿತರಣೆ ಮಾಡಿರುವ ಮಣಿಪುರ, ಮೇಘಾಲಯ, ನಾಗಾಲ್ಯಾಂಡ್‌, ಪುದುಚೇರಿ ರಾಜ್ಯಗಳು, ಲಸಿಕಾ ಅಭಿಯಾನಕ್ಕೆ ಇನ್ನಷ್ಟುವೇಗ ನೀಡಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ (Mansukh Mandaviya) ಸೋಮವಾರ ಮನವಿ ಮಾಡಿದ್ದಾರೆ. ನಾಲ್ಕು ರಾಜ್ಯಗಳ ಆರೋಗ್ಯ ಕಾರ‍್ಯದರ್ಶಿಗಳು, ಹಿರಿಯ ಅಧಿಕಾರಿಗಳೊಂದಿಗೆ ಆನ್‌ಲೈನ್‌ ಮೂಲಕ ಮಾತನಾಡಿದ ಅವರು, ‘ ಕೋವಿಡ್‌ ವೈರಸ್ಸಿನ ವಿರುದ್ಧ ಹೋರಾಡುವ ಅತ್ಯಂತ ಪ್ರಬಲ ಅಸ್ತ್ರ ಎಂದರೆ ಲಸಿಕೆ. ಹಾಗಾಗಿ ಲಸಿಕಾ ಅಭಿಯಾನವನ್ನು ಚುರುಕುಗೊಳಿಸಬೇಕು. ಮನೆಮನೆಗೂ ತೆರಳಿ ಲಸಿಕೆ ನೀಡುವ ಅಭಿಯಾನವನ್ನು ಉತ್ತೇಜಿಸಬೇಕು’ ಎಂದು ಹೇಳಿದರು.

ಪುದುಚೇರಿಯಲ್ಲಿ ಶೇ.66ರಷ್ಟುಜನರು ಮೊದಲ ಡೋಸ್‌ ಮತ್ತು ಶೇ.39ರಷ್ಟುಜನರು ಎರಡನೇ ಡೋಸ್‌ ಸ್ವೀಕರಿಸಿದ್ದಾರೆ. ನಾಗಾಲ್ಯಾಂಡ್‌ನಲ್ಲಿ 49% ಜನ ಮೊದಲ ಡೋಸ್‌ ಮತ್ತು 36% ಮಂದಿ ಎರಡೂ ಡೋಸ್‌ ಪಡೆದಿದ್ದಾರೆ. ಮೇಘಾಲಯದಲ್ಲಿ ಶೇ.57ರಷ್ಟುಜನರು ಮೊದಲ ಡೋಸ್‌, 38% ಜನರು ಎರಡೂ ಡೋಸ್‌ ಸ್ವೀಕರಿಸಿದ್ದಾರೆ. ಇನ್ನು ಮಣಿಪುರದಲ್ಲಿ ಶೇ.54ರಷ್ಟುಮಂದಿ ಮೊದಲ ಡೋಸ್‌, ಶೇ.36ರಷ್ಟುಮಂದಿ ಎರಡೂ ಡೋಸ್‌ ಪಡೆದಿದ್ದಾರೆ. ಈ ಮೂಲದ ನಾಲ್ಕು ರಾಜ್ಯಗಳು ದೇಶದ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಪ್ರಮಾಣದ ಲಸಿಕೆಯನ್ನು ವಿತರಣೆ ಮಾಡಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!