ಗಾಜಿಯಾಬಾದ್‌ನ ಮಹಿಳೆಯರ ಸ್ನಾನಗೃಹದಲ್ಲಿ ಕ್ಯಾಮೆರಾ ಇರಿಸಿದ್ದಕ್ಕಾಗಿ ದೇವಾಲಯದ ಅರ್ಚಕನ ವಿರುದ್ಧ ದೂರು ದಾಖಲಾಗಿದೆ. ಇಲ್ಲಿನ ಛಾವಣಿಯಿಲ್ಲದ ಮಹಿಳೆಯರ ಸ್ನಾನಗೃಹದ ಮೇಲೆ ಅರ್ಚಕ ಮಹಂತ್ ಸ್ವಾಮಿ ಕ್ಯಾಮೆರಾ ಅಳವಡಿಸಿ ಮೊಬೈನ್‌ಲ್ಲಿ ಮಹಿಳೆಯರ ನಗ್ನ ದೃಶ್ಯ ನೋಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರಪ್ರದೇಶ: ಗಾಜಿಯಾಬಾದ್‌ನ ಮಹಿಳೆಯರ ಸ್ನಾನಗೃಹದಲ್ಲಿ ಕ್ಯಾಮೆರಾ ಇರಿಸಿದ್ದಕ್ಕಾಗಿ ದೇವಾಲಯದ ಅರ್ಚಕನ ವಿರುದ್ಧ ದೂರು ದಾಖಲಾಗಿದೆ. ಇಲ್ಲಿನ ಛಾವಣಿಯಿಲ್ಲದ ಮಹಿಳೆಯರ ಸ್ನಾನಗೃಹದ ಮೇಲೆ ಅರ್ಚಕ ಮಹಂತ್ ಸ್ವಾಮಿ ಕ್ಯಾಮೆರಾ ಅಳವಡಿಸಿದ್ದ. ಈತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ಪ್ರಕಾರ, ಈ ದೇವಾಲಯವು ಮುರಾದನಗರ ಗಂಗಾ ಕಾಲುವೆಯ ಪಕ್ಕದಲ್ಲಿದೆ. ಜನರು ಸಾಮಾನ್ಯವಾಗಿ ಕಾಲುವೆಯಲ್ಲಿ ಸ್ನಾನ ಮಾಡಿದ ನಂತರ ಪ್ರಾರ್ಥನೆ ಸಲ್ಲಿಸುತ್ತಾರೆ.
ಮೇ 21ರಂದು ತನ್ನ ಮಗಳೊಂದಿಗೆ ದೇವಸ್ಥಾನಕ್ಕೆ ತೆರಳಿದ್ದ ಮಹಿಳೆಯೊಬ್ಬರು ಮೇಲ್ಛಾವಣಿ ಇಲ್ಲದ ಬಾತ್ ರೂಂನಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಗಮನಿಸಿದಾಗ ವಿಷಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೇಲ್ಭಾಗದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾ ಮಹಿಳೆಯರು ಬಟ್ಟೆ ಬದಲಾಯಿಸುವ ಕೊಠಡಿಯ ಮೇಲೆ ಕೇಂದ್ರೀಕರಿಸಿರುವುದನ್ನು ಮಹಿಳೆ ಗಮನಿಸಿದ್ದಾರೆ ಎಂದು ಪೊಲೀಸ್ ಉಪ ಆಯುಕ್ತ (ಗ್ರಾಮೀಣ) ವಿವೇಕ್ ಚಂದ್ರ ಯಾದವ್ ಹೇಳಿದ್ದಾರೆ.
undefined
ತೀರ್ಥದಲ್ಲಿ ನಿದ್ರೆಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ಚಾನೆಲ್ ನಿರೂಪಕಿಯ ರೇಪ್!
ಮಹಿಳೆ ಕ್ಯಾಮರಾವನ್ನು ಗಮನಿಸಿ ಮಹಂತ್ ಗೋಸ್ವಾಮಿ ಅವರನ್ನು ಸಂಪರ್ಕಿಸಿ ಈ ಬಗ್ಗೆ ಹೇಳಿದ್ದಾರೆ. ಆಗ ಅರ್ಚಕ ಕ್ಯಾಮರಾದ ಬಗ್ಗೆ ಯಾರಿಗಾದರೂ ಹೇಳಿದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಡಿಸಿಪಿ ತಿಳಿಸಿದ್ದಾರೆ. ಸಿಸಿಟಿವಿಯ ಡಿಸ್‌ಪ್ಲೇಯನ್ನು ಮಹಂತ್ ಅವರ ಮೊಬೈಲ್ ಫೋನ್‌ನೊಂದಿಗೆ ಲಿಂಕ್ ಮಾಡಲಾಗಿದೆ, ಅದರಲ್ಲಿ ಅವರು ಮಹಿಳೆಯರ ನಗ್ನ ದೃಶ್ಯವನ್ನು ವೀಕ್ಷಿಸುತ್ತಿದ್ದ ಎಂದು ಡಿಸಿಪಿ ಹೇಳಿದರು.
'ದೂರು ಪಡೆದ ನಂತರ, ಮುರಾದನಗರ ಪೊಲೀಸರು ಶುಕ್ರವಾರ ಎಫ್‌ಐಆರ್ ದಾಖಲಿಸಿದ್ದಾರೆ. ಅರ್ಚಕನನ್ನು ಬಂಧಿಸಲು ಪೊಲೀಸ್ ತಂಡ ದೇವಸ್ಥಾನಕ್ಕೆ ಬಂದಾಗ ಮಹಂತ್ ಸ್ವಾಮಿ ಅಲ್ಲಿ ಇರಲ್ಲಿಲ್ಲ' ಎಂದು ಡಿಸಿಪಿ ಹೇಳಿದರು. ಪೊಲೀಸರು ಮಹಂತ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಮಹಿಳೆಯ ಮೇಲೆ ಕ್ರಿಮಿನಲ್ ಹಲ್ಲೆ), 354 ಸಿ (ಖಾಸಗಿ ಕೃತ್ಯದಲ್ಲಿ ತೊಡಗಿರುವ ಮಹಿಳೆಯರ ಚಿತ್ರವನ್ನು ವೀಕ್ಷಿಸುವುದು ಅಥವಾ ಸೆರೆಹಿಡಿಯುವುದು), 504 (ಉದ್ದೇಶಪೂರ್ವಕ ಅವಮಾನ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಭಕ್ತರು ನೀಡಿದ್ದ ಹಸುಗಳು ಕಸಾಯಿಖಾನೆಗೆ! ನೀರಮಾನ್ವಿ ಯಲ್ಲಮ್ಮ ದೇವಸ್ಥಾನದ ಅರ್ಚಕರ ವಿರುದ್ಧ ಭಕ್ತರು ಆಕ್ರೋಶ!
ನ್ಯೂಸ್ 18 ವೆಬ್‌ಸೈಟ್‌ನಲ್ಲಿ ಲೋಕಸಭೆ ಚುನಾವಣೆ 2024 ರ ವೇಳಾಪಟ್ಟಿ, ಮತದಾರರ ಮತದಾನ, ಮುಂಬರುವ ಹಂತ ಮತ್ತು ಹೆಚ್ಚಿನವುಗಳ ಆಳವಾದ ವ್ಯಾಪ್ತಿಯನ್ನು ಅನ್ವೇಷಿಸಿ