
ನವದೆಹಲಿ(ಏ.23): ಕೊರೋನಾ ವೈರಸ್ ಹೆಚ್ಚಳದಿಂದ ದೇಶದಲ್ಲಿ ಆಕ್ಸಿಜನ್ ಕೊರತೆ ಎದುರಾಗಿದೆ. ಸೋಂಕಿತರ ಚಿಕಿತ್ಸೆ ಇದೀಗ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಆಕ್ಸಿಜನ್ ಕೊರತೆ ನೀಗಿಸಲು ಕೇಂದ್ರ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಇದೀಗ ಭಾರತದ ರಕ್ಷಣಾ ಸಚಿವಾಲಯ ಜರ್ಮನಿಯಿಂದ 23 ಆಕ್ಸಿಜನ್ ಉತ್ಪಾದಕ ಘಟಕ ಏರ್‌ಲಿಫ್ಟ್ ಮಾಡಲಿದೆ.
ಸೋಂಕಿತರ ಚಿಕಿತ್ಸೆಗೆ ನೆರವಾದ ರಿಲಯನ್ಸ್; ಪ್ರತಿ ದಿನ 700 ಟನ್ ಆಮ್ಲಜನಕ ಪೂರೈಕೆ!
ಜರ್ಮನಿಯಿಂದ ಏರ್‌ಲಿಫ್ಟ್ ಮಾಡಲಿರುವ ಆಮ್ಲಜನಕ ಉತ್ಪಾದಕ ಘಟಕ ಪ್ರತಿ ಗಂಟೆಗೆ 24,000 ಆಕ್ಸಿಜನ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಬೃಹತ್ ಘಟಕವನ್ನು ಜರ್ಮನಿಯಿಂದ ಹೊತ್ತು ಭಾರತಕ್ಕೆ ಬರಲಿದೆ. ಬಳಿಕ ಇಲ್ಲಿ ನಿರ್ಮಾಣ ಘಟಕವನ್ನು ಸ್ಥಾಪಿಸಿ, ಕಾರ್ಯರಂಭಿಸಲಿದೆ.
ಈಗಾಗಲೇ ಜರ್ಮನಿ ಜೊತೆ ಮಾತುಕತೆ ನಡೆಸಿದ್ದು, ಶೀಘ್ರದಲ್ಲೇ ಆಕ್ಸಿಜಿನ್ ಉತ್ಪಾದಕ ಘಟಕ ಭಾರತಕ್ಕೆ ಬರಲಿದೆ. ಇದು ತುರ್ತು ಪರಿಸ್ಥಿತಿಯಾಗಿದ್ದು, ಕ್ಷಿಪ್ರ ನಿರ್ಧಾರಗಳು ಅನಿವಾರ್ಯವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಈಗಾಗಲೇ ವಾಯುಸೇನೆಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಆಕ್ಸಿಜನ್ ಸೇರಿದಂತೆ ಕೊರೋನಾ ವೈದ್ಯಕೀಯ ಸಲಕರಣೆ ಏರ್‌ಲಿಫ್ಟ್‌ಗೆ ಸನ್ನದ್ದವಾಗಿರುವಂತೆ ಸೂಚಿಸಲಾಗಿದೆ. ಈ ಕುರಿತು ವಾಯುಸೇನೆ ಸದಾ ಸಿದ್ದವಾಗಿದ್ದು, ಭಾರತದ ಕೊರೋನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ