ಪಾಸ್‌ಪೋರ್ಟ್‌ ಅರ್ಜಿದಾರರ ಸೋಶಿಯಲ್ ಮೀಡಿಯಾ ಖಾತೆ ಪರಿಶೀಲಿಸಲಿದ್ದಾರೆ ಪೊಲೀಸರು!

By Suvarna NewsFirst Published Feb 5, 2021, 12:55 PM IST
Highlights

ಪಾಸ್‌ಪೋರ್ಟ್‌ ಅರ್ಜಿದಾರರಿಗೆ ಮತ್ತೊಂದು ಸಂಕಷ್ಟ| ಇನ್ನು ಪಾಸ್‌ಪೋರ್ಟ್‌ ಸಿಗಬೇಕಾದ್ರೆ ಸೋಶಿಯಲ್ ಮೀಡಿಯಾ ಖಾತೆ ಪರಿಶೀಲನೆ| ರಾಷ್ಟ್ರವಿರೋಧಿ ಪೋಸ್ಟ್‌ ಇದ್ದರೆ ಪಾಸ್‌ಪೋರ್ಟ್‌ ಕೂಡಾ ಸಿಗುವುದಿಲ್ಲ

ಡೆಹ್ರಾಡೂನ್(ಫೆ.05): ಉತ್ತರಾಖಂಡ್ ಪೊಲೀಸ್ ಮಹಾ ನಿರ್ದೇಶಕ ಅಶೋಕ್ ಕುಮಾರ್ ಗುರುವಾರದಂದು ಮಾತನಾಡುತ್ತಾ ಸಾಮಾಜಿಕ ಜಾಲತಾಣಗಳ ದುರುಪಯೋಗ ತಡೆಯಲು ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದವರ ಸಾಮಾಜಿಕ ಖಾತೆ ಪರಿಶೀಲನೆ ನಡೆಸುವ ಅಗತ್ಯವಿದೆ. ಉತ್ತರಾಖಂಡ್ ಪೊಲೀಸರು ಇತ್ತೀಚೆಗಷ್ಟೇ ಪೊಲೀಸ್ ಮಹಾನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಸ್‌ಪೋರ್ಟ್‌ ಅರ್ಜಿದಾರರ ಪೊಲೀಸ್ ವೆರಿಫಿಕೇಷನ್ ಪ್ರಕ್ರಿಯೆ ವೇಳೆ ಅವರ ಸೋಶಿಯಲ್ ಮಿಡಿಯಾ ಖಾತೆಗಳ ಪರಿಶೀಲನೆ ನಡೆಸಲು ನಿರ್ಧರಿಸಲಾಗಿದೆ.

ಸೋಶಿಯಲ್ ಮೀಡಿಯಾ ಖಾತೆಗಳ ದುರುಪಯೋಗ ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಇದು ಯಾವುದೇ ಕಠಿಣ ಅಥವಾ ಹೊಸ ಕ್ರಮ ಅಲ್ಲ ಎಂದಿರುವ ಅವರು ಪಾಸ್‌ಪೋರ್ಟ್‌ ಕಾನೂನಿನಲ್ಲಿ ಈ ಕುರಿತು ಈ ಹಿಂದಿನಿಂದಲೇ ಇರುವ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ ಎಂದು ಪೊಲೀಸ್ ಮಹಾನಿರ್ದೇಶಕರು ಹೇಳಿದ್ದಾರೆ.

ಪಾಸ್‌ಪೋರ್ಟ್‌ ಕಾನೂನಿನಲ್ಲಿ ರಾಷ್ಟ್ರ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗೆ ಪಾಸ್‌ಪೋರ್ಟ್‌ ಜಾರಿಗೊಳಿಸುವ ಅವಕಾಶವಿಲ್ಲ. ದೆಹಲಿ ರೈತ ಪ್ರತಿಭಟನೆಯಲ್ಲಿ ಸೋಶಿಯಲ್ ಮಿಡಿಯಾ ಪ್ರಭಾವ ಹೆಚ್ಚಾಗುತ್ತಿರುವ ಬೆನ್ನಲ್ಲೇ ಪೊಲೀಸರು ಇಂತಹುದ್ದೊಂದು ಕ್ರಮ ಜಾರಿಗೊಳಿಸಿದ್ದಾರೆಂಬುವುದು ಉಲ್ಲೇಖನೀಯ. 

click me!