
ಉತ್ತರಖಂಡ (ಆ.14): ಇಡೀ ದೇಶ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿದೆ. ಆದರೆ ಭಾರತೀಯ ಸೇನೆಯ ವೀರ ಯೋಧ ಲ್ಯಾನ್ಸ್ ನಾಯಕ್ ಚಂದ್ರಶೇಖರ್ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಕಳೆದ 38 ವರ್ಷಗಳಿಂದ ಯೋಧ ಲ್ಯಾನ್ಸ್ ನಾಯಕ್ ಚಂದ್ರಶೇಖರ್ ಹರ್ಬೋಲ್ ಆಗಮನಕ್ಕಾಗಿ ಕಾಯುತ್ತಿದ್ದ ಕುಟುಂಬಕ್ಕೆ ಬರ ಸಿಡಿಲು ಎರಗಿದೆ. ಸಿಯಾಚಿನ್ ವಲಯದಲ್ಲಿ ಕರ್ತವ್ಯದಲ್ಲಿದ್ದ ಚಂದ್ರಶೇಖರ್ 1984ರಲ್ಲಿ ನಾಪತ್ತೆಯಾಗಿದ್ದರು. ಇದೀಗ 38 ವರ್ಷಗಳ ಬಳಿಕ ಯೋಧನ ಶವ ಪತ್ತೆಯಾಗಿದೆ. ಈ ಕುರಿತು ಭಾರತೀಯ ಸೇನೆ, ಯೋಧನ ಕುಟುಂಬಕ್ಕೆ ಮಾಹಿತಿ ನೀಡಿದೆ. ಮುಂಜು ತುಂಬಿದ ಸಿಯಾಚಿನ್ ಪ್ರದೇಶದಲ್ಲಿ ಶವ ಪತ್ತೆಯಾಗಿದೆ. ಹೀಗಾಗಿ ಕಳೆದ 38 ವರ್ಷಗಳಿಂದ ಶವ ಮಂಜುಗಡ್ಡೆಯಲ್ಲಿದ್ದ ಕಾರಣ ಪತ್ತೆಯಾಗಿದೆ. ಚಂದ್ರಶೇಖರ್ ಪತ್ನಿ ಶಾಂತಿ ದೇವಿ ಹಾಗೂ ಕುಟುಂಬದ ಕಾಯುವಿಕೆ ಅಂತ್ಯಗೊಂಡಿದೆ. ಆದರೆ ದುಃಖ ಮುಗಿಲು ಮುಟ್ಟಿದೆ.
ಉತ್ತರಖಂಡದ ಯೋದ ಲ್ಯಾನ್ಸ್ ನಾಯಕ್ ಚಂದ್ರಶೇಖರ್ 19 ರೆಜಿಮೆಂಟ್‌ನಲ್ಲಿ ಯೋಧನಾಗಿದ್ದ. 1975ರಲ್ಲಿ ಶಾಂತಿ ದೇವಿ, ಚಂದ್ರಶೇಖರ್ ಅವರನ್ನು ಮದುವೆಯಾಗಿದ್ದರು. ಮದುವೆಯಾಗಿ 9 ವರ್ಷದ ಬಳಿಕ ಚಂದ್ರಶೇಖರ್ ನಾಪತ್ತೆಯಾಗಿದ್ದರು. ಶಾಂತಿ ದೇವಿಗೆ 25 ವರ್ಷ ವಯಸ್ಸಿದ್ದಾಗ, ಪತಿ ನಾಪತ್ತೆಯಾಗಿದ್ದರು. ಇದೀಗ 63 ವರ್ಷದ ಶಾಂತಿ ದೇವಿ ಬೇರೆ ಮದುವೆಯಾಗಿಲ್ಲ. ಒಂದಲ್ಲ ಒಂದು ದಿನ ಪತಿ ಮನಗೆ ಬಂದೇ ಬರುತ್ತಾರೆ ಅನ್ನೋ ವಿಶ್ವಾಸದಲ್ಲಿದ್ದರು. ಆದರೆ ಪತಿ ಮೃತದೇಹ ಮನೆಗೆ ಬರಲಿದೆ ಅನ್ನೋ ಯಾವ ಕಲ್ಪನೆಯೂ ಈ ಕುಟುಬಕ್ಕೆ ಇರಲಿಲ್ಲ.
ಉರಿ ಮಾದರಿಯಲ್ಲಿ ಸೇನಾ ಶಿಬಿರದ ಮೇಲೆ ಭಯೋತ್ಪಾದಕರ ದಾಳಿ 3 ಸೈನಿಕರು ಹುತಾತ್ಮ, ಇಬ್ಬರು ಉಗ್ರರ ಹತ್ಯೆ!
ಪತಿ ನಾಪತ್ತೆಯಾದಾಗ ಹಿರಿಯ ಮಗಳಿಗೆ ನಾಲ್ಕು ವರ್ಷ ಹಾಗೂ ಕಿರಿಯ ಮಗಳಿಗೆ ಒಂದೂವರೆ ವರ್ಷವಾಗಿತ್ತು. ಪತಿ ನಾಪತ್ತೆ ಬಳಿಕ ಕುಟುಂಬ ಒತ್ತಾಯದಿಂದ ನಿಧನದ ಬಳಿಕ ಮಾಡುವ ಕರ್ಮಗಳನ್ನು ಮಾಡಿದ್ದೇವು. ಆದರೆ ಪತಿ ಮರಳಿ ಬರುತ್ತಾರೆ ಅನ್ನೋ ವಿಶ್ವಾಸವಿತ್ತು. ಪತಿ ಇಲ್ಲದೆ ಇಬ್ಬರು ಮಕ್ಕಳನ್ನು ಬೆಳೆಸುವುದು ಅತೀವ ಕಷ್ಟವಾಗಿತ್ತು ಎಂದು ಶಾಂತಿ ದೇವಿ ಹೇಳಿದ್ದಾರೆ.
ಯೋಧ ಚಂದ್ರಶೇಕರ್ ಪುತ್ರಿ ಕವಿತಾಗೆ ತಂದೆಯೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಬೇಕು ಅನ್ನೋದು ಬಾಲ್ಯದ ಬಯಕೆಯಾಗಿತ್ತು. ಸ್ವಾತಂತ್ರ್ಯ ದಿನಾಚರಣೆಯಂದು ತಂದೆಯೊಂದಿಗೆ ಶಾಲೆಗೆ ಬರುವ ಇತರ ಮಕ್ಕಳನ್ನು ನೋಡಿದಾಗಿ ನನಗೂ ತಂದೆ ಜೊತೆಗೆ ಸ್ವಾತಂತ್ರ್ಯ ಆಚರಿಸಬೇಕು ಅನ್ನೋ ಬಯಕೆ ಇತ್ತು. ಆದರೆ ತಂದೆ ನಾಪತ್ತೆಯಾದರೂ ಆಸೆ ಹಾಗೇ ಇತ್ತು. ಈ ವರ್ಷ ಸ್ವಾತಂತ್ರ್ಯ ದಿನಾಚರಣೆ ಹೊಸ್ತಿಲಲ್ಲಿ ತಂದೆಯ ಶವ ಪತ್ತೆಯಾಗಿದೆ ಅನ್ನೋ ಮಾಹಿತಿ ಬಂದಾಗ ನನ್ನ ಬಾಲ್ಯದ ಆಸೆ ಕೊನೆಗೂ ಈಡೇರಿಸಲು ಸಾಧ್ಯವಾಗಲಿಲ್ಲ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ತಂದೆ ಮನೆಗೆ ಬರುತ್ತಿದ್ದಾರೆ. ಆದರೆ ಜೀವಂತವಾಗಿ ಅಲ್ಲ ಅನ್ನೋದು ಅರಗಿಸಿಕೊ್ಳ್ಳಲೇಬೇಕು ಎಂದು ಕವಿತಾ ಹೇಳಿದ್ದಾರೆ.
ಗಲ್ವಾನ್ ಘರ್ಷೆಣೆಯಲ್ಲಿ ಭಾರತಕ್ಕೆ ನೆರವಾಗಿದ್ದು 1948ರಲ್ಲಿ ನಿರ್ಮಾಣವಾದ ಏರ್‌ಸ್ಟ್ರಿಪ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ