
ಡೆಹ್ರಡೂನ್ (ಅ.30) ಹವಾಮಾನ ವೈಪರಿತ್ಯದಿಂದ ಬದ್ರಿನಾಥತಿಂದ ಡೆಹ್ರಡೂನ್‌ಗೆ ತೆರಳುತ್ತಿದ್ದ ವಿಮಾನ ಪತನಗೊಂಡಿದೆ. ಪೈಲೆಟ್ ಸೇರಿದಂತೆ 6 ಮಂದಿ ಸಜೀವ ದಹನಗೊಂಡ ಘಟನೆ ಉತ್ತರಖಂಡದ ಜೋಶಿಮಠ ಮಾರ್ಗದಲ್ಲಿ ನಡೆದಿದೆ. ಹೆಲಿಕಾಪ್ಟರ್ ಸಂಪರ್ಕ ಕಡಿದಕೊಂಡ ಬಳಿಕ ನಾಪತ್ತೆಯಾಗಿದೆ. ಹೀಗಾಗಿ ಮತ್ತೊಂದು ಹೆಲಿಕಾಪ್ಟರ್ ಮೂಲಕ ಹುಡುಕಾಟ ನಡೆಸುವಾಗ ಪತನ ಪತ್ತೆಯಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಅಧಿಕಾರಿಗಳು, ರಕ್ಷಣಾ ತಂಡಕ್ಕೆ ಸ್ಥಳಕ್ಕೆ ಧಾವಿಸಿದೆ.
ಉತ್ತರಖಂಡದಲ್ಲಿ ಭಾರಿ ಹವಾಮಾನ ವೈಪರಿತ್ಯ ಸಂಭವಿಸಿದೆ. ಹಲವು ಭಾಗದಲ್ಲಿ ತೀವ್ರ ಚಳಿ ಹಾಗೂ ಮಂಜು ಮುಸುಕಿದ ವಾತರಣವಿದೆ. ಪ್ರಯಾಣಿಕರ ಹೊತ್ತು ಸಾಗುತ್ತಿದ್ದ ಹೆಲಿಕಾಪ್ಟರ್ ವಾಯು ಮಾರ್ಗದಲ್ಲಿ ತೀವ್ರ ಆತಂಕ ಎದುರಿಸಿದೆ. ಹೆಲಿಕಾಪ್ಟರ್ ಟ್ರಾನ್ಸ್ ಭಾರತ್ ಏವಿಯೇಷನ್ (Trans Bharat Aviation) ಸಂಸ್ಥೆಯ ಹೆಲಿಕಾಪ್ಟರ್ ಇದಾಗಿದೆ. VT-HCX ನೋಂದಣಿಯ ಹೆಲಿಕಾಪ್ಟರ್ ಸಂಪರ್ಕ ಕಡಿತಗೊಂಡ ಬೆನ್ನಲ್ಲೇ ದುರಂತ ಸಂಭವಿಸಿದೆ.
ಬದ್ರೀನಾಥ ಧಾಮದಿಂದ ಪ್ರಯಾಣ ಆರಂಭಿಸಿದ ಹೆಲಿಕಾಪ್ಟರ್ ಜೋಶಿಮಠ ಮಾರ್ಗದ ಮೂಲಕ ಡೆಹ್ರಡೂನ್‌ಗೆ ಸಾಗಿತ್ತು. ದಿಢೀರ್ ಏರ್ ಟ್ರಾಫಿಕ್ ಕಂಟ್ರೋಲ್ (ATC) ಹಾಗೂ ಸಂಪರ್ಕ ವ್ಯವಸ್ಥೆಯಿಂದ ಸಂಪೂರ್ಣವಾಗಿ ಕಡಿತಗೊಂಡಿತ್ತು. ಆ ಸಮಯದಲ್ಲಿ ಹಿಮಾಲಯದ ಈ ಭಾಗದಲ್ಲಿ ಭಾರೀ ಮಳೆ ಹಾಗೂ ದಟ್ಟವಾದ ಮಂಜು ಕವಿದ ವಾತಾವರಣದಲ್ಲಿ ವಿಸಿಬಿಲಿಟಿ ಕಡಿಮೆಯಾಗಿತ್ತು. ಗೋಚರತೆ ಇಲ್ಲದ ಕಾರಣ ಹೆಲಿಕಾಪ್ಟರ್ ಬೆಟ್ಟದ ಕಂದಕಕ್ಕೆ ಅಪ್ಪಳಿಸಿ ಪತನಗೊಂಡಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸ್ಥಳಕ್ಕೆ ಧಾವಿಸಿರುವ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಪಡೆ ಕಾರ್ಯಾಚರಣೆಯಲ್ಲಿ ತೊಡಗಿದೆ. ಮುಂಜಿನ ಮಳೆ, ಮಂಜು ಮುಸುಕಿದ ವಾತಾವರಣದಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಬೆಟ್ಟಕ್ಕೆ ಅಪ್ಪಳಿಸಿ ಹೆಲಿಕಾಪ್ಟರ್ ಪತನಗೊಂಡಿರುವ ಕಾರಣ ಹೆಲಿಕಾಪ್ಟರ್ ಸಂಪೂರ್ಣವಾಗಿ ಪುಡಿ ಪುಡಿಯಾಗಿದೆ.
ಘಟನೆ ಕುರಿತು ಉತ್ತರಖಂಡ ಮುಖ್ಯಮಂತ್ರಿ ಕಾರ್ಯಾಲಯ ಆಘಾತ ವ್ಯಕ್ತಪಡಿಸಿದೆ. ಉತ್ತರಖಂಡ ಮುಖ್ಯಮಂತ್ರಿ ಚಮೋಲಿ ಜಿಲ್ಲಾಡಳಿತ ಕುರಿತು ದೂರವಾಣಿ ಮೂಲಕ ಮಾತನಾಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಎಲ್ಲಾ ನೆರವು ಬಳಸಿಕೊಳ್ಳಲು ಸೂಚಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟವರ ಗುರುತು ಪತ್ತೆ ಕಾರ್ಯಗಳು ನಡೆಯುತ್ತಿದ್ದು, ಆಡಳಿತ ಮಂಡಳಿ ಕುಟುಂಬಸ್ಥರಿಗೆ ಮಾಹಿತಿ ರವಾನೆ ಮಾಡಿದೆ.
ಉತ್ತರಖಂಡದ ಹವಾಮಾನ ವೈಪರಿತ್ಯದಿಂದ ಹೆಲಿಕಾಪ್ಟರ್ ಪತನ ಘಟನೆಗಳು ಮರುಕಳಿಸುತ್ತಿದೆ. ಪ್ರಮುಖವಾಗಿ ಬದ್ರಿನಾಥ, ಕೇದಾರನಾಥ ವಲಯದಲ್ಲಿ ಹೆಲಿಕಾಪ್ಟರ್ ತೀವ್ರ ಹವಾಮಾನ ವೈಪರಿತ್ಯಕ್ಕೆ ಸಿಲುಕಿ ಆತಂಕ ಪರಿಸ್ಥಿತಿ ಎದುರಿಸಿದ ಘಟನೆಗಳು ನಡೆದಿದೆ. ಇದೀಗ ಜೋಶಿಮಠ ವಲಯದಲ್ಲಿನ ಈ ಹೆಲಿಕಾಪ್ಟರ್ ಪತನ ಇದೀಗ ಸುರಕ್ಷತೆ ಪ್ರಶ್ನೆಗಳನ್ನು ಮತ್ತೆ ಹುಟ್ಟುಹಾಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ