ಪ್ರವಾಹ ದುರಂತ; ಮಡಿದವರ ಕುಟುಂಬಕ್ಕೆ ಹೆಚ್ಚುವರಿ 2 ಲಕ್ಷ ರೂ ಘೋಷಿಸಿದ ಮೋದಿ!

By Suvarna NewsFirst Published Feb 7, 2021, 7:50 PM IST
Highlights

ಉತ್ತರಖಂಡ ಚಮೋಲಿ ಜಿಲ್ಲೆಯಲ್ಲಿ ನಡೆದ ಹಿಮಸ್ಫೋಟ ಹಾಗೂ ಪ್ರವಾಹದಿಂದ 120ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. ರಕ್ಷಣಾ ಕಾರ್ಯಭರದಿಂದ ಸಾಗಿದೆ. ಇತ್ತ ಉತ್ತರಖಂಡ ಸರ್ಕಾರದ ಬೆನ್ನಲ್ಲೇ ಇದೀಗ ಪ್ರಧಾನಿ ಮೋದಿ ಮಡಿದವರ ಕುಟುಂಬಕ್ಕೆ ಹೆಚ್ಚುವರಿಯಾಗಿ 2 ಲಕ್ಷ ರೂಪಾಯಿ ಘೋಷಿಸಿದ್ದಾರೆ. 

ನವದೆಹಲಿ(ಫೆ.07): ಉತ್ತರಖಂಡದ ಪ್ರವಾಹ ದುರಂತ ದೇಶವನ್ನೇ ಬೆಚ್ಚಿ ಬೀಳಿಸಿದೆ. ಮೇಘಸ್ಫೋಟ, ಜಲಪ್ರಳಯದಿಂದ ಕಂಗಾಲಾಗಿದ್ದ ಉತ್ತರಖಂಡ ಇತ್ತೀಚೆಗೆ ಶಾಂತವಾಗಿತ್ತು. ಆದರೆ ಇದ್ದಕ್ಕಿದ್ದಂತೆ ಜೋಶಿಮಠ ವಲಯ ಧೌಲಿ ಗಂಗಾ ಕಣಿವೆಯಲ್ಲಿ ಹಿಮಪಾತವಾಗಿದೆ. ಇದರಿಂದ ಸೃಷ್ಟಿಯಾದ ಪ್ರವಾಹಕ್ಕೆ ಜಲಾಶಯ ಧ್ವಂಸಗೊಂಡಿದ್ದರೆ, ವಿದ್ಯುತ್ ಘಟಕ ನೆಲಸಮವಾಗಿದೆ. 120ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ.  ಇದೀಗ ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಪ್ರಧಾನಿ ಮೋದಿ ಹೆಚ್ಚುವರಿಯಾಗಿ 2 ಲಕ್ಷ ರೂಪಾಯಿ ಘೋಷಿಸಿದ್ದಾರೆ.

ಉತ್ತರಖಂಡ ಹಿಮಸ್ಫೋಟದಿಂದ ಪ್ರವಾಹ; 150 ಮಂದಿ ಕಣ್ಮರೆ, ಪರಿಸ್ಥಿತಿ ಅವಲೋಕಿಸಿದ ಮೋದಿ!..

ಉತ್ತರಖಂಡದ ಚಮೋಲಿ ಜಿಲ್ಲಿಯ ಹಿಮನದಿ ಪ್ರವಾಹ ದುರಂತದಿಂದ ಮಡಿದವರ ಕುಟಂಬಕ್ಕೆ PMNRF (ಪ್ರೈಮ್ ಮಿನಿಸ್ಟರ್ ನ್ಯಾಷನಲ್ ರಿಲೀಫ್ ಫಂಡ್)ನಿಂದ ಹೆಚ್ಚುವರಿಯಾಗಿ 2 ಲಕ್ಷ ರೂಪಾಯಿ ಘೋಷಿಸಿದ್ದಾರೆ. ಇನ್ನು ಗಾಯಗೊಂಡವರಿಗೆ ತಲಾ 50,000 ರೂಪಾಯಿ ನೀಡಲು ಪ್ರಧಾನಿ ನರೇಂದ್ರ ಮೋದಿ ಅನುಮೋದನೆ ನೀಡಿದ್ದಾರೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಟ್ವೀಟ್ ಮೂಲಕ ಬಹಿರಂಗ ಪಡಿಸಿದೆ.

 

PM has approved an ex-gratia of Rs. 2 lakh each from PMNRF for the next of kin of those who have lost their lives due to the tragic avalanche caused by a Glacier breach in Chamoli, Uttrakhand. Rs. 50,000 would be given to those seriously injured.

— PMO India (@PMOIndia)

ಈಗಾಗಲೇ ಉತ್ತರಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಪ್ರವಾಹ ದುರಂತದಲ್ಲಿ ಮಡಿದವರ ಕುಟಂಬಕ್ಕೆ ತಲಾ 4 ಲಕ್ಷ ರೂಪಾಯಿ ಘೋಷಿಸಿದ್ದಾರೆ.  ತಪೋವನದಲ್ಲಿ ಸಿಲುಕಿದ್ದ 16 ಮಂದಿಯನ್ನು NDRF ತಂಡ ರಕ್ಷಣೆ ಮಾಡಿದೆ.  ಇನ್ನು ಮೂವರ ಶವ ಹೊರತೆಗೆಯಲಾಗಿದೆ.

 

Uttarakhand: ITBP personnel carried rescued persons on stretchers to the nearest road; all 16 people who were trapped in a tunnel near Tapovan in Chamoli were rescued earlier today. pic.twitter.com/PDQHsNHO2O

— ANI (@ANI)

ಉತ್ತರಾಖಂಡ್‌ ಹಿಮಗಡ್ಡೆ ಸಿಡಿದು ಜಲ ಪ್ರಳಯ: ಹರಿದ್ವಾರದವರೆಗೆ ಹೈ ಅಲರ್ಟ್!

180ಕ್ಕೂ ಹೆಚ್ಚು ಕುರಿ ಹಾಗೂ ಮೇಕೆ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. 4 NDRF ತಂಡ, ಭಾರತೀಯ ಸೇನೆ ಸೇರಿದಂತೆ ಇತರ ರಕ್ಷಣಾ ತಂಡಗಳು ಕಾರ್ಯಪ್ರವೃತ್ತರಾಗಿದೆ.

click me!