
ಧರಾಲಿ: ಉತ್ತರಾಖಂಡದ ಧರಾಲೀ ಎಂಬಲ್ಲಿ ಪ್ರವಾಹವು ಭಯಂಕರ ಸನ್ನಿವೇಶವನ್ನು ಸೃಷ್ಟಿಸಿದ್ದು, ಅವಶೇಷಗಳು 3 ಅಂತಸ್ತಿನ ಕಟ್ಟಡಗಳಷ್ಟು ಎತ್ತರ ರಾಶಿ ಬಿದ್ದಿವೆ. ಅಂದರೆ ಸುಮಾರು ಸುಮಾರು 50 ಅಡಿಯಷ್ಟು ಕಲ್ಲು, ಮಣ್ಣು, ಕುಸಿದ ಮನೆಯ ಅವಶೇಷಗಳು ಕಂಡುಬಂದಿವೆ. ಈ ಅವಶೇಷದಡಿ ಸಿಲುಕಿದವರ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಅವರ ಶೋಧಕ್ಕೆ ರಕ್ಷಣಾ ತಂಡಗಳು ಹರಸಾಹಸ ಪಡುತ್ತಿವೆ. ಅವಶೇಷಗಳು ಭಾರೀ ಪ್ರಮಾಣದಲ್ಲಿ ಇರುವುದರಿಂದ ಇದು ಸವಾಲಾಗಿ ಪರಿಣಮಿಸಿದೆ. ಇವುಗಳಲ್ಲಿ ಶವ ಇರುವ ಸಂದೇಹವೂ ಇಚೆ.
ಈ ಬಗ್ಗೆ ಮಾತನಾಡಿದ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಐಜಿ ಅರುಣ್ ಮೋಹನ್ ಜೋಶಿ, ‘ಇದು ಸಾಮಾನ್ಯ ಕಾರ್ಯಾಚರಣೆಯಲ್ಲ. ಮನೆಗಳ ಛಾವಣಿಗಳು ಇರುವಷ್ಟು ಎತ್ತರ ಅವಶೇಷಗಳು ಬಿದ್ದಿವೆ’ ಎಂದರು. ಇಡೀ ಧರಾಲೀಯನ್ನು ಮೊದಲಿನಂತೆ ಮಾಡಲು ಕನಿಷ್ಠ 7 ತಿಂಗಳಾದರೂ ಬೇಕು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
35 ವರ್ಷದ ಬಳಿಕ ಒಂದಾಗಿದ್ದ 24 ಸ್ನೇಹಿತರು ಗುಂಪು ನಾಪತ್ತೆ
ಡೆಹ್ರಾಡೂನ್: ಕಂಡು ಕೇಳರಿಯದ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡವು ಅನೇಕ ದುರಂತಗಳಿಗೆ ಸಾಕ್ಷಿಯಾಗಿದೆ. 1990ರಲ್ಲಿ ಪುಣೆಯಲ್ಲಿ 10ನೇ ತರಗತಿಯಲ್ಲಿ ಓದಿದ್ದ 24 ಮಂದಿ ಸ್ನೇಹಿತರು, 35 ವರ್ಷಗಳ ಬಳಿಕ ಒಂದಾಗಿ ಚಾರ್‌ಧಾಮ ಯಾತ್ರೆ ನಿಮಿತ್ತ ಉತ್ತರಾಖಂಡಕ್ಕೆ ತೆರಳಿದ್ದರು. ಸೋಮವಾರ ಸಂಜೆ, ಗಂಗೋತ್ರಿಯಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿ ಅವರು ಸಿಲುಕಿಕೊಂಡಿದ್ದರು. ಆ ಬಳಿಕ ಇವರ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದ್ದು, ಅವರಲ್ಲಿ ಒಬ್ಬರ ಪುತ್ರ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಉತ್ತರಕಾಶಿಯಲ್ಲಿ ನಡೆಯುತ್ತಿರುವ ಸೇನೆಯ ರಕ್ಷಣಾ ಕಾರ್ಯದಲ್ಲಿ, ಗುರುವಾರ 70 ಜನರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಇನ್ನೂ 50 ಜನರ ಪತ್ತೆಯಾಗಬೇಕಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಈವರೆಗೆ ಒಟ್ಟು 276 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ