ಲೈಂಗಿಕ ಸಮ್ಮತಿ ವಯಸ್ಸು ಇಳಿಕೆ ಕುರಿತು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಹೇಳಿದ್ದೇನು?

Published : Aug 08, 2025, 07:32 PM IST
Supreme Court  Of india

ಸಾರಾಂಶ

ಲೈಂಗಿಕ ಸಮ್ಮತಿ ವಯಸ್ಸನ್ನು 18 ರಿಂದ 16ಕ್ಕೆ ಇಳಿಸುವ ಕುರಿತು ಭಾರಿ ಚರ್ಚೆಯಾಗುತ್ತಿದೆ. ಇದರ ನಡುವೆ ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್‌ಗೆ ತನ್ನ ಅಭಿಪ್ರಾಯ ಹೇಳಿದೆ. ಇಷ್ಟೇ ಅಲ್ಲ ಕೆಲ ಆತಂಕ ವ್ಯಕ್ತಪಡಿಸಿದೆ.

ನವದೆಹಲಿ (ಆ.08) ಸುಪ್ರೀಂ ಕೋರ್ಟ್‌ನಲ್ಲಿ ದೇಶದ ಲೈಂಗಿಕ ಸಮ್ಮತಿ ವಯಸ್ಸಿನ ಕುರಿತು ವಾದ ಪ್ರತಿವಾದಗಳು ನಡೆಯುತ್ತಿದೆ. ಈ ವಿಚಾಕದ ಕುರಿತು ಕೇಂದ್ರ ಸರ್ಕಾರ ಸ್ಪಷ್ಟ ನಿಲುವ ವ್ಯಕ್ತಪಡಿಸಿದೆ. ಇಷ್ಟೇ ಅಲ್ಲ ಆತಂಕ ವ್ಯಕ್ತಪಡಿಸಿದೆ. ಭಾರತದಲ್ಲಿ ಲೈಂಗಿಕ ಸಮ್ಮತಿ ವಯಸ್ಸು 18 ರಿಂದ 16ಕ್ಕೆ ಇಳಿಕೆ ಮಾಡಬೇಕು ಅನ್ನೋ ವಾದವನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ. ಸುಪ್ರೀಂ ಕೋರ್ಟ್‌ಗೆ ಕುರಿತು ನಿಲುವ ಸ್ಪಷ್ಟಪಡಿಸಿರುವ ಕೇಂದ್ರ ಸರ್ಕಾರ ಇದು ಅತ್ಯಂತ ಅಪಾಯಾಕಾರಿ ಎಂದಿದೆ.

ಸಾಲಿಸಿಟರ್ ಜನರಲ್ ಐಶ್ವರ್ಯ ವಾದ

ಉಭಯ ಸಮ್ಮತಿಯ ಲೈಂಗಿಕ ಕ್ರಿಯೆಗೆ ವಯಸ್ಸಿನ ಮಿತಿಯನ್ನು 16ಕ್ಕೆ ಇಳಿಸುವುದನ್ನು ಕೇಂದ್ರ ಸರ್ಕಾರ ವಿರೋಧಿಸಿದೆ. ಸುಪ್ರೀಂ ಕೋರ್ಟ್‌ನಲ್ಲಿ ಈ ವಿಷಯದ ಬಗ್ಗೆ ತೀವ್ರವಾಗಿ ವಾದಿಸಿದ ಕೇಂದ್ರ, ಪ್ರಕರಣದ ಸ್ವರೂಪಕ್ಕೆ ಅನುಗುಣವಾಗಿ ನ್ಯಾಯಾಲಯವು ಸ್ವತಂತ್ರ ನಿಲುವು ತೆಗೆದುಕೊಳ್ಳಬಹುದು ಎಂದು ಸ್ಪಷ್ಟಪಡಿಸಿದೆ. ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರು ಕೇಂದ್ರ ಸರ್ಕಾರದ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ.

ಮಕ್ಕಳ ಹಕ್ಕುಗಳ ಕಾನೂನು ದುರ್ಬಲ

‘ಉಭಯ ಸಮ್ಮತಿಯ ಲೈಂಗಿಕ ಕ್ರಿಯೆಯ ವಯಸ್ಸನ್ನು 18ಕ್ಕೆ ನಿಗದಿಪಡಿಸುವಾಗ ಎಲ್ಲಾ ಅಂಶಗಳನ್ನು ಪರಿಶೀಲಿಸಲಾಗಿದೆ’ ಎಂದು ಐಶ್ವರ್ಯ ಭಾಟಿ ತಿಳಿಸಿದರು. ಅಪ್ರಾಪ್ತ ವಯಸ್ಕರ ಮೇಲಿನ ಲೈಂಗಿಕ ದೌರ್ಜನ್ಯ ತಡೆಯುವುದು ಇದರ ಉದ್ದೇಶ. ಹದಿಹರೆಯದವರ ಪ್ರೇಮ ಸಂಬಂಧಗಳಿಗಾಗಿ ಮಕ್ಕಳ ಹಕ್ಕುಗಳ ಕಾನೂನುಗಳನ್ನು ದುರ್ಬಲಗೊಳಿಸಬಾರದು ಎಂದು ಭಾಟಿ ನ್ಯಾಯಾಲಯವನ್ನು ಕೋರಿದರು. ವಯಸ್ಸಿನ ಮಿತಿಯಲ್ಲಿ ರಿಯಾಯಿತಿ ನೀಡುವುದು ಅಪಾಯಕಾರಿ ಎಂದು ಕೇಂದ್ರವು ನ್ಯಾಯಾಲಯದಲ್ಲಿ ವಾದಿಸಿತು. ಈ ಕ್ರಮವು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವವರಿಗೆ ಮತ್ತಷ್ಟು ಅವಕಾಶ ನೀಡುತ್ತದೆ ಎಂದು ಕೇಂದ್ರ ಸೇರಿಸಿತು.

ಪೋಕ್ಸೋ ಕಾಯ್ದೆ ದುರ್ಬಲಗೊಳ್ಳಲಿದೆ

ವಯಸ್ಸಿನ ಮಿತಿಯಲ್ಲಿ ರಿಯಾಯಿತಿ ನೀಡುವುದು ದಶಕಗಳಿಂದ ಬಲವಾಗಿರುವ ದೇಶದ ಮಕ್ಕಳ ಹಕ್ಕುಗಳ ಕಾನೂನುಗಳನ್ನು ಹಿಂದಕ್ಕೆ ತಳ್ಳುತ್ತದೆ. ಪೋಕ್ಸೊ ಕಾಯ್ದೆ 2012 ಮತ್ತು ಬಾಲ ನ್ಯಾಯ ಕಾಯ್ದೆಯ ಮೂಲ ಸ್ವರೂಪಕ್ಕೆ ಈ ಕ್ರಮವು ಧಕ್ಕೆ ತರುತ್ತದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಹೇಳಿದರು.

ಇಂದಿರಾ ಜೈಸಿಂಗ್ ವಾದವೇನು?

ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲೆ ಮತ್ತು ಅಮಿಕಸ್ ಕ್ಯೂರಿ ಇಂದಿರಾ ಜೈಸಿಂಗ್ ಅವರು ಲೈಂಗಿಕ ಕ್ರಿಯೆಗೆ ವಯಸ್ಸಿನ ಮಿತಿಯನ್ನು 16ಕ್ಕೆ ಇಳಿಸಬೇಕು ಎಂಬ ವಾದವನ್ನು ಬೆಂಬಲಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಇಂದಿರಾ ಜೈಸಿಂಗ್ ಅವರು ಮಂಡಿಸಿದ ವಾದಗಳನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ತನ್ನ ನಿಲುವನ್ನು ತೆಗೆದುಕೊಂಡಿದೆ. ಪ್ರಸ್ತುತ ಕಾನೂನು ಹದಿಹರೆಯದವರ ನಡುವಿನ ಉಭಯ ಸಮ್ಮತಿಯ ಲೈಂಗಿಕ ಸಂಬಂಧಗಳನ್ನು ಅಪರಾಧವೆಂದು ಪರಿಗಣಿಸುತ್ತದೆ ಎಂಬುದು ಇಂದಿರಾ ಜೈಸಿಂಗ್ ಅವರ ವಾದ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್